ಪ್ರತಿಯೊಬ್ಬರು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು- ಪಡ್ಡಂ ಬೈಲ್
ಕೊಪ್ಪಳ 15: ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಸಮಯಕ್ಕೆ ಮಹತ್ವ ಕೊಡಬೇಕು ಅಂದಾಗ ಮಾತ್ರ ನಾವು ಕೈಗೊಳ್ಳುವ ಕೆಲಸ ಕಾರ್ಯಗಳು ಯಶಸ್ವಿಯ ಹಾದಿ ಹಿಡಿಯುತ್ತದೆ, ಸಮಯ ಪ್ರಜ್ಞೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಮಂಗಳೂರಿನ ಮರೋಳಿಯ ತಾರಸಿ ತೋಟದ ಕೃಷಿ ತಜ್ಞ ಕೃಷ್ಣಪ್ಪಗೌಡ ಪಡ್ಡಂ ಬೈಲ್ ಅಭಿಪ್ರಾಯಪಟ್ಟರು.ಅವರು ಕೊಪ್ಪಳ ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ಮಹೇಶ್ವರ ಮಂದಿರದ ಸಭಾಭವನದಲ್ಲಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ ಏರಿ್ಡಸಿದ ಶ್ರೀ ಅಕ್ಕಮಹಾದೇವಿಯವರ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡಿದರು, ಯಾವುದೇ ಕಾರ್ಯಕ್ರಮ ನಿಗದಿತ ಸಮಯದಲ್ಲಿ ಪ್ರಾರಂಭ ಗೊಳ್ಳಬೇಕು ನಾವು ಸಮಯ ಪ್ರಜ್ಞೆ ಬೆಳೆಸಿಕೊಂಡು ಸಮಯಕ್ಕೆ ಗೌರವ ಕೊಟ್ಟರೆ ಅದೇ ಸಮಯ ನಮ್ಮನ್ನು ಕಾಪಾಡುತ್ತದೆ ಹಾಗಾಗಿ ಪ್ರತಿಯೊಬ್ಬರೂ ನಾವು ಸಮಯ ಪ್ರಜ್ಞೆ ಕಡ್ಡಾಯವಾಗಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು,
ಮುಂದುವರೆದು ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯನಿಗೆ ಜೀವನದಲ್ಲಿ ತಾಳ್ಮೆ ಇರಲಿ, ಪ್ರಯತ್ನ ನಿಲ್ಲದಿರಲಿ ,ಅವಮಾನ ಸಮಸ್ಯೆ ಕಷ್ಟ ಏನೇ ಬಂದರು ಎದುರಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ಸನ್ಮಾನ ಗಳನ್ನು ಸ್ವೀಕರಿಸುವ ಸಮಯ ಜೀವನದಲ್ಲಿ ಬಂದೇ ಬರುತ್ತದೆ ಅದಕ್ಕಾಗಿ ನಾವು ಮೊದಲು ಸಮಯಕ್ಕೆ ಮಹತ್ವ ಕೊಡಬೇಕಾಗಿದೆ ಎಂದ ಆವರು ಬಿಟ್ಟು ಕೊಡಬೇಡ ಒಳ್ಳೆಯ ಸ್ನೇಹಿತರನ್ನು, ಮರೆಯಬೇಡ ನಿನ್ನ ಜೊತೆ ನಿಲ್ಲುವವರನ್ನು, ತುಳಿಯಬೇಡ ಯಾರೊಬ್ಬರ ಬದುಕನ್ನು, ಕಳೆದುಕೊಳ್ಳಬೇಡ ನಿನ್ನ ವ್ಯಕ್ತಿತ್ವವನ್ನು ಎಂಬಂತೆ ಮನುಷ್ಯ ಒಳ್ಳೆಯ ಆಲೋಚನೆ ಇಟ್ಟುಕೊಂಡು ಶ್ರೀ ಅಕ್ಕಮಹಾದೇವಿ ಸೇರಿದಂತೆ ಮಹಾನ್ ನಾಯಕರ ಮತ್ತು ದಾರ್ಶನಿಕರ ಆದರ್ಶಗಳನ್ನು ನಾವುಗಳು ನಮ್ಮ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಂಗಳೂರಿನ ಮರೋಳಿಯ ತಾರಸಿ ತೋಟದ ಕೃಷಿ ತಜ್ಞ ಕೃಷ್ಣಪ್ಪ ಗೌಡ ಪಡ್ಡಠ ಬೈಲ್ ಸಭಿಕರಿಗೆ ಕಿವಿಮಾತು ಹೇಳಿದರು,ಸ್ಮರಣ ಸಂಚಿಕೆ ಬಿಡುಗಡೆಯನ್ನು ಸಂಸದ ಕೆ ರಾಜಶೇಖರ್ ಹಿಟ್ನಾಳ ನೆರವೇರಿಸಿ ಮಾತನಾಡಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಲದ ಕಾರ್ಯವೈಖರಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು, ಸಮಾರಂಭದಲ್ಲಿ ಮಂಗಳೂರಿನ ನಮ್ಮ ಕುಡ್ಲ ತುಳು ವಾರ್ತಾವಾಚಕಿ ಡಾ, ಪ್ರಿಯಾ ಹರೀಶ್, ಕೊಪ್ಪಳ ನಗರಸಭೆಯ ಸದಸ್ಯರಾದ ಅಜೀಮ್ ಅತ್ತಾರ್ ಹಿರಿಯ ಪತ್ರಕರ್ತ ಎಂ ಸಾದಿಕ ಕಲಿ, ವಾಣಿಜ್ಯ ಉದ್ಯಮಿ ಶಿವಕುಮಾರ್ ಪೌಲಿ ಶೆಟ್ಟರ್, ಸಾಹಿತಿಗಳಾದ ಎಸ್ ಎಂ ಕಂಬಾಳಿ ಮಠ ,ಮಹೇಶ್ ಮನ್ನಾಪುರ ,ಶ್ರೀನಿವಾಸ್ ಚಿತ್ರಗಾರ ಮತ್ತು ಮಹಿಳಾ ಮಂಡಳದ ಚಂದಾ ಅಗಡಿ ಅಲ್ಲದೆ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಕೋಮಲಾ ಕುದುರೆಮೋತಿ ,ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.