ಇಂದು ಉದ್ಯೋಗ ಮೇಳದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು: ಬಸಮ್ಮ

Everyone should participate in the job fair today: Basamma

ಇಂದು ಉದ್ಯೋಗ ಮೇಳದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು: ಬಸಮ್ಮ

ಕುಕನೂರು  15:   ಬುಧವಾರದಂದು ಕಲಬುರಗಿಯಲ್ಲಿ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಆಡೂರು ಕೃಷಿ ಸಖಿ ಬಸಮ್ಮ ಮುತ್ತಾಳ ತಿಳಿಸಿದರು.ಅವರು ತಾಲೂಕ ಪಂಚಾಯತಿಯ ಆದೇಶದನ್ವಯ  ರಾಜೂರ ಕಲ್ಲಿನಾಥೇಶ್ವರ ಸಂಜೀವಿನಿ ಸ್ವ- ಸಹಾಯ ಸಂಘದಿಂದ ಉದ್ಯೋಗ ಮೇಳದ ಮಾಹಿತಿಯನ್ನು ನೀಡಲು ರಾಜೂರ ಸುತ್ತ ಮುತ್ತಲಿನ ನಿವಾಸಿಗಳಿಗೆ ತಿಳಿಸಿದರು. 

ಈ ವೇಳೆ ಇದರ ಮಾಹಿತಿಯನ್ನು ನೀಡಿದ ಅವರು ಈ ಉದ್ಯೋಗ ಮೇಳವು ಕರ್ನಾಟಕ ಸರಕಾರದ ಕೌಶಲ್ಯಿಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದಡಿ ಕಲಬುರ್ಗಿಯಲ್ಲಿ ಇದೇ. ದಿ. 16ರಂದು ಆಯೋಜಿಸಿದ್ದು, 18ವರ್ಷದ ಮೇಲ್ಪಟ್ಟ ಮಹಿಳೆಯರು, ಪುರುಷ ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳು ಆಗಮಿಸಿ ಉದ್ಯೋಗ ದೊರಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜೂರು ಗ್ರಂಥಾಲಯದ ನಿಲಯ ಪಾಲಕ ನಿಂಗಪ್ಪ, ಸಂಜೀವಿನಿ ಒಕ್ಕೂಟದ ಶರಣಮ್ಮ ಮಾದಿನೂರು ಸೇರಿದಂತೆ ಸಾರ್ವಜನಿಕರು ಇದ್ದರು.ಉದ್ಯೋಗ ಮೇಳವು ಇಂದು ಬೆಳಗ್ಗೆ 9ಗಂಟೆಯಿಂದ ಸಾಯಂಕಾಲ 5ಗಂಟೆಯವರೆಗೆ ನಡೆಯಲಿದೆ. ಸ್ಥಳ : ಕಲಬುರ್ಗಿ ಕೆ.ಸಿ.ಟಿ ಕಾಲೇಜ್ ಕ್ಯಾಂಪಸ್, ಖಮರ್ ಉಲ್ -ಇಸ್ಲಾಂ ಕಾಲೋನಿ, ರಿಂಗ್ ರಸ್ತೆ ಕಲಬುರ್ಗಿ.ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 08022075030 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದರು.