ಸಂಸ್ಕಾರಯುತ ಯುವ ಭಾರತ ನಿರ್ಮಾಣಕ್ಕೆಎಕ್ಸಲಂಟ್ ಮುನ್ನಡಿ ಇಟ್ಟಿದೆ: ಅಶೋಕ ಹಂಚಲಿ

Excellent leadership in building cultured youth India: Ashoka Hanchli

ಎಕ್ಸಲಂಟ್‌ವಿಜ್ಞಾನ ಪ.ಪೂ.ಕಾಲೇಜಿನಲ್ಲಿ ಗುರುನಮನ ಮಹೋತ್ಸವ 

ವಿಜಯಪುರ 02: ಪಾಶ್ಚಾತ್ಯಜೀವನ ಶೈಲಿ ಎಡೆಗೆ ಮಾರು ಹೋಗುತ್ತಿರುವಯುವ ಸಮೂಹಕ್ಕೆ ಭಾರತೀಯತೆಯನ್ನು ತಿಳಿಸಿಕೊಡುವ ಮೂಲಕ ಸಂಸ್ಕಾರವಂತ ಭಾರತ ನಿರ್ಮಾಣ ಮಾಡಲು ಹೊರಟಎಕ್ಸಲಂಟ್ ವಿಜ್ಞಾನ ಪದವಿ ಪೂರ್ವಕಾಲೇಜಿನಕಾರ್ಯ ಶ್ಲಾಘನೀಯ ಮಾತ್ರವಲ್ಲ ಇತರರಿಗೆ ಮಾದರಿಯಾಗಿದೆ. ಇದಕ್ಕೆ ಕಾರಣೀಕರ್ತರಾಗಿರುವ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು ಎಂದು ಖ್ಯಾತ ವಾಗ್ಮಿಗಳಾದ ಅಶೋಕ ಹಂಚಲಿ ಹೇಳಿದರು. 

ಬುಧವಾರ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರು ನಮನ ಮೊಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಕ್ಕಳು ಜನೆವರಿ ಬಂತೆಂದರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈ ಮರೆಯಲು ಮುಂದಾಗುತ್ತಾರೆ. ಪಾಶ್ಚಾತ್ಯಕ್ಯಾಲೆಂಡರ್ ವರ್ಷವನ್ನೇ ಹೊಸ ವರ್ಷವೆಂದು ಭಾವಿಸಿಕೊಂಡು ಅದರಂತೆ ಹೆಜ್ಜೆ ಹಾಕುತ್ತಿದ್ದಾರೆ. ಬೆಂಗಳೂರಿನ ಬ್ರಿಗೆಡ್‌ರಸ್ತೆ ಹಾಗೂ ಮಹಾತ್ಮಾಗಾಂಧಿ ರಸ್ತೆಗಳಲ್ಲಿ ಯುವಜನತೆ ನಶೆಯಲ್ಲಿತೇಲಾಡುತ್ತ ಮನೆದಾರಿ ಮರೆತುರಸ್ತೆಯಲ್ಲಿ ಹೊರಳಾಡುತ್ತಿರುವ ದೃಶ್ಯಕಂಡಾಗ ನಮ್ಮ ಭಾರತ ಎತ್ತ ಸಾಗುತ್ತಿದೆ ಎನ್ನುವ ಚಿಂತೆ ಆವರಿಸುವಾಗಲೇ ಬಸವರಾಜ್ ಕೌಲಗಿಯವರ ಸಾರಥ್ಯದ ಎಕ್ಸಲಂಟ್ ಕಾಲೇಜು ಅಡ್ಡದಾರಿಯಲ್ಲಿ ಹೋಗುವ ಯುವ ಸಮೂಹವನ್ನು ಸರಿದಾರಿಗೆ ತರುವ ಕಾರ್ಯನಾವು ಮಾಡುತ್ತೇವೆ ಎನ್ನುವಂತೆ ಜನೆವರಿ ಒಂದನೇ ತಾರೀಖಿನಂದು ಗುರುನಮನ ಮಹೋತ್ಸವ ಆಯೋಜನೆ ಮಾಡಿ; ನಡೆದಾಡುವ ದೇವರು ಹಾಗೂ ಭಾರತದ ಎರಡನೇ ವಿವೇಕಾನಂದ ಎಂದು ಕರೆಸಿಕೊಂಡ ಶತಮಾನದ ಸಂತ ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಆದರ್ಶಮಯ ಬದುಕಿನ ಕುರಿತು ಬೋಧಿಸುವುದರ ಜೊತೆಗೆ ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆಯ ಹಾಗೂ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಗಳ ಮೌಲ್ಯವನ್ನು ತಿಳಿಸಿಕೊಡುವ ಕಾರ್ಯ ಮಾಡಿದ್ದು ಆದರ್ಶಪ್ರಾಯವಾಗಿದೆ. ಕ್ಯಾಲೆಂಡರ್ ವರ್ಷವನ್ನು ಹೀಗೂ ಸ್ವಾಗತಿಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವ ಎಕ್ಸಲಂಟ್ ಸಂಸ್ಥೆ ಭಾರತೀಯ ಮೌಲ್ಯಗಳನ್ನು ಬಿತ್ತುವಲ್ಲಿ ನಾವು ಸದಾಜೊತೆಗಿರುತ್ತೇವೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅದಕ್ಕೆ ನಾವೆಲ್ಲ ಅವರನ್ನು ಅಭಿನಂದಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯ ಅವರಿಂದ ಹರಿದು ಬರಿಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ; ಜನೆವರಿಒಂದನ್ನು ಹೊಸವರ್ಷ ಎಂದು ಭಾವಿಸುವ ಮಕ್ಕಳಿಗೆ ಹೊಸ ವರ್ಷವನ್ನು ಹೀಗೂ ಸಹ ಸ್ವಾಗತಿಸಬಹುದು ಎನ್ನುವ ಕಲ್ಪನೆ ಮೂಡಿಸುವಲ್ಲಿ ನಮ್ಮಕಾಲೇಜು ಯಶಸ್ವಿಯಾಗಿದೆ. ಶಾಲಾ ಕಾಲೇಜುಗಳಲ್ಲಿ ಕೇಕು ಕತ್ತರಿಸಿ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸುವುದಕ್ಕಿಂತ ಬದುಕನ್ನೆ ಬದಲಿಸಬಲ್ಲ ಚಿಂತನೆಗಳನ್ನು ಶ್ರವಣ ಮಾಡುವ ಮೂಲಕ ವರ್ಷಾಚರಣೆ ಮಾಡುವುದುಅತ್ಯುತ್ತಮವಾದ ಮಾರ್ಗವಾಗಿದೆ. ಅದರಲ್ಲೂ ಸಿದ್ಧೇಶ್ವರ ಶ್ರೀಗಳ ಗುರು ನಮನ ಕಾರ್ಯಕ್ರಮವನ್ನೇಕ್ಯಾಲೆಂಡರ್ ವರ್ಷದ ಮೊದಲ ದಿನ ಮಾಡುವ ಮೂಲಕ ಪೂಜ್ಯರ ಚಿಂತನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ವಾಡಿಕೆಯನ್ನು ಎಕ್ಸಲಂಟ್ ಸಂಸ್ಥೆ ಕಳೆದ ವರ್ಷದಿಂದ ಹಾಕಿ ಕೊಂಡಿದೆ. ಅದರಂತೆ ಈ ವರ್ಷವೂ ಮುಂದುವರೆದಿದ್ದುಇದರಿಂದ ಮಕ್ಕಳ ಪ್ರಭಾವಿತರಾಗಿ ಪಾಶ್ಚಾತ್ಯ ಮತ್ತಿನಿಂದ ಹೊರ ಬಂದು ಭಾರತೀಯತೆಯ ಬದುಕಿಗೆ ತೆರೆದುಕೊಳ್ಳುತ್ತಾರೆನ್ನುವ ನಂಬಿಕೆ ನಮಗಿದ್ದುಇಂಥ ಕಾರ್ಯಕ್ರಮಗಳ ಅವಶ್ಯಕತೆ ಬಹಳ ಇದೆಎಂದು ಹೇಳಿದರು. 

ಉತ್ನಾಳದ ನಿವೃತ್ತ ಆದರ್ಶ ಶಿಕ್ಷಕ ಶ್ರೀ ಚಂದ್ರಶೇಖರಯ್ಯರೇ. ಹಿರೇಮಠ ಸಾನಿಧ್ಯ ವಹಿಸಿದ್ದರು. ಭುವನೇಶ್ವರಿ ಕೋರವಾರ, ಡಾ.ಸವಿತಾ ಬಿರಾದಾರ, ಭಗವದ್ಗೀತಾ ಪಠಣ ಮಾಡಿದರು. ಆಕ್ಸಫರ್ಡಶಾಲೆಯ ಶಿಕ್ಷಕಿ ಸುಜಾತಾ ಹ್ಯಾಳದ ಕವನ ವಾಚಿಸಿದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪುಷ್ಪಾ ಕೌಲಗಿ, ಮಹಿಳಾ ವಿ.ವಿಯ ಪ್ರಧ್ಯಾಪಕಡಾ.ಬಾಬು ಲಮಾಣಿ, ಮಹಾಂತೇಶ ಹತ್ತರಕಾಳ,ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಶರಣಗೌಡ ಪಾಟೀಲ ಹಾಗೂ ರಮೇಶ ಬಾಗೆವಾಡಿ ನಿರೂಪಸಿದರು. 

ತದನಂತರ ವಿಜಯಪುರದ ಸ್ವಯಂಭೋ ಕಲಾತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನಗೊಂಡಿತು.