ತಾಳಿಕೋಟಿ 29: ಪಟ್ಟಣದ ಪ್ರತಿಷ್ಠಿತ ಎಸ್.ಎಸ್. ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ಪಾಟೀಲರಿಗೆ ರತನ ಟಾಟಾರವರ ಸ್ಮರಣಾರ್ಥ "ಖ್ಯಾತ ಹೆಮ್ಮೆಯ ಉದ್ಯಮಿ-2024"ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ದಂಪತಿ ಸಮೇತ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಸ್.ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಸಚಿನ ಎಚ.ಪಾಟೀಲರು, ಆಡಳಿತಾಧಿಕಾರಿಗಳಾದ ಕಿರಣ ಎಚ.ಪಾಟೀಲರು ಮತ್ತು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ತಾಳಿಕೋಟಿ ಘಟಕದ ಅಧ್ಯಕ್ಷರಾದ ವೆಂಕೋಬಾ ನಾಯ್ಕೋಡಿ, ಕಾರ್ಯದರ್ಶಿಗಳಾದ ಮುತ್ತು ಬಿರಾದಾರ, ಜಿಲ್ಲಾ ನಿರ್ದೇಶಕರಾದ ಮಹೇಶ ಓದಿ, ಪದಾಧಿಕಾರಿಗಳಾದ ಸಿದ್ದು ಹೊರ್ತಿ, ರಾಘವೇಂದ್ರ ಕುಲಕರ್ಣಿ, ಪ್ರೇಮಾ ಎಚ್.ನಡಹಳ್ಳಿ, ಲೀಲಾ ಸಗರನಾಳ, ಜಗದೀಶ ಕೊಣ್ಣೂರ, ಎಸ್.ಎಸ.ಪಾಟೀಲ, ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಮೇಶ ಕುಲಕರ್ಣಿ ಸರ್.ಮತ್ತು ಎನ್. ಎಚ್ ನಾಟಿಕರ ಸರ್. ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ ಉಪಸ್ಥಿತರಿದ್ದರು.