ಭ್ರೂಣ ಹತ್ಯೆ ಮಹಾ ಅಪರಾಧ: ಈಶಪ್ಪ

ಧಾರವಾಡ.11: ಈ ಭೂಮಿಯಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಜನನದ  ನಂತರ ಜೀವಕ್ಕೆ ತೊಂದರೆ ಉಂಟು ಮಾಡಿದರೆ ಅದು ಕೊಲೆ ಎನಿಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ ತಾಯಿ ಗರ್ಭದಲ್ಲಿರುವ ಭ್ರೂಣದ ಹತ್ಯೆ ಮಾಡುವದೂ ಕೂಡ ಅಷ್ಟೇ ಗಂಭೀರವಾದ ಅಪರಾಧ ಮತ್ತು ಪಾಪದ ಕೃತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಕೆ. ಭೂತೆ ಹೇಳಿದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ "ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್ಡಿಟಿ)" ಕುರಿತು ಜಿಲ್ಲೆಯ ವೈದ್ಯಕೀಯ ಪ್ರಯೋಗಾಲಯಗಳ ತಜ್ಞರು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

 ಭ್ರೂಣ ಹತ್ಯೆಯು ಕಾನೂನು ಬಾಹಿರ ಕೃತ್ಯವಾಗಿದೆ. ತಾಯಿಗೆ ಪ್ರಾಣಾಪಯ ಉಂಟಾಗುವ ಗಂಭೀರ ಪರಿಸ್ಥಿತಿಯಲ್ಲಿ ಮಾತ್ರ ನ್ಯಾಯಾಲಯದ ಅನುಮತಿ ಪಡೆದು ಭ್ರೂಣ ತೆಗೆಯಬಹುದು. ಇದು ವಿಶೇಷ ಸಂದರ್ಭಗಳಲ್ಲಿ  ಮಾತ್ರ ನಡೆಯುವಂತಹದು. 

        ಜನನದ ನಂತರ ಹತ್ಯೆಯಾದರೆ ಅದು ಕೊಲೆ ಎನಿಸಿಕೊಂಡು ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಭ್ರೂಣ ಹತ್ಯೆ ಕೂಡ ಅಷ್ಟೇ ಪಾಪದ ಮತ್ತು ನೀಚ ಕೃತ್ಯವಾಗಿದೆ. ಈ ಕುರಿತು ಅರಿವು ಇಲ್ಲದವರಿಗೆ ತಿಳುವಳಿಕೆ ನೀಡುವ ಕಾರ್ಯ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್ ಗಳಿಂದಲೂ ಸಹ ಆಗಬೇಕು. ಕಾಯ್ದೆಯ ಸಫಲತೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.

  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ಭಾರತದಲ್ಲಿ ಪ್ರತಿ ಸಾವಿರ ಪುರುಷರಿಗೆ 943 ಮಹಿಳೆಯರ ಲಿಂಗಾನುಪಾತವಿದೆ.

       ಆದರೆ ನಮ್ಮ ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಈ ಅನುಪಾತ 970 ರಷ್ಟಿದೆ. ಇನ್ನೂ ಕೆಲವೆಡೆ ಮಹಿಳಾ ಮತದಾರರ ಸಂಖ್ಯೆಯೇ ಪುರುಷರಿಗಿಂತ ಹೆಚ್ಚಾಗಿದೆ. ಬಹುತೇಕ ಪುರುಷರು ದುಶ್ಚಟಗಳ ದಾಸರಾಗಿ ಬೇಗ ಸಾವನ್ನಪ್ಪಿದ ಪ್ರಕರಣಗಳೇ ಕಾರಣ ಎಂದು ತಿಳಿದು ಬರುತ್ತಿದೆ. ಇದು ಆತಂಕ ತರುವ ಸಂಗತಿಯಾಗಿದೆ ಎಂದರು.

       ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ.ವಿ.ಡಿ. ಕಪರ್ೂರಮಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಬಿ. ನಿಂಬಣ್ಣವರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

          ಕಿಮ್ಸ್ನ ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞ ಡಾ.ಯೋಗೇಂದ್ರ ಎಂ. ಕಬಾಡೆ, ಪಿಸಿ ಮತ್ತು ಪಿಎನ್ ಡಿಟಿ ಕಾಯ್ದೆ ರಾಜ್ಯ ಕೋಶದ ಕಾನೂನು ಸಲಹೆಗಾರರಾದ ಅಖಿಲಾ, ವೈದ್ಯಕೀಯ ಕಾನೂನು ತಜ್ಞ ಡಾ.ಶಿವಕುಮಾರ್ ಕುಂಬಾರ್ ಅವರು ಉಪನ್ಯಾಸ ನೀಡಿದರು. ಜರೀನಾ ಅವರು ಜಾಗೃತಿ ಗೀತೆಗಳನ್ನು ಹಾಡಿದರು. ಅಶೋಕ ಬೆಟದೂರ ಕಾರ್ಯಕ್ರಮ ನಿರೂಪಿಸಿದರು. ಉಪ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎನ್. ಚವಾಣ ವಂದಿಸಿದರು.