ನಕ್ಸಲರಿಂದ ರಸ್ತೆ ನಿರ್ಮಾಣ ಕಂಪನಿಯ ಮೂರು ವಾಹನಗಳಿಗೆ ಬೆಂಕಿ

ಗಯಾ, ಅ 26:   ಜಿಲ್ಲೆಯ ಅಮಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗ್ಮಾರ್ವಾ ಗ್ರಾಮದ ಬಳಿ ರಸ್ತೆ ನಿರ್ಮಾಣ ಕಂಪನಿಯ ಮೂರು ವಾಹನಗಳಿಗೆ ನಕ್ಸಲರು ನಿನ್ನೆ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.  ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ  ಸುಮಾರು 12 ನಕ್ಸಲರು ರಸ್ತೆ ನಿರ್ಮಾಣ ಕಂಪನಿಯ ನಿರ್ಮಾಣ ಸ್ಥಳದ ಮೇಲೆ ದಾಳಿ ನಡೆಸಿ ಕಂಪೆನಿಗೆ ಸೇರಿದ ಎರಡು ಟ್ರಾಕ್ಟರುಗಳು ಮತ್ತು ರೋಲರ್ ಯಂತ್ರಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.    ನಿರ್ಮಾಣ ಕಂಪನಿಯು ಸುಲಿಗೆ ಹಣವನ್ನು ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಕ್ಸಲರು ವಾಹನಗಳನ್ನು ಸುಟ್ಟುಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.  ದುಷ್ಕರ್ಮಿಗಳನ್ನು ಬಂಧಿಸಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರುತಿಳಿಸಿದ್ದಾರೆ.