ಹೂವಿನಹಡಗಲಿ 21: ತಾಲೂಕಿನ ಕಾಂತೆಬೆನ್ನೂರು ಗ್ರಾಮದಲ್ಲಿ ಮೈಲಮ್ಮದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಮೈಲಮ್ಮದೇವಿಯ ಉತ್ಸವಮೂತರ್ಿಯು ರಥಾರೋಹಣ ಮಾಡಿದ ಬಳಿಕ ಭಕ್ತರ ಜಯಘೋಷ, ಹಷರ್ೊದ್ಗಾರದ ನಡುವೆ ರಥೋತ್ಸವ ಪ್ರಾರಂಭವಾಯಿತು. ರಥಬೀದಿಯಲ್ಲಿ ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಎಸೆದು ಕೈ ಮುಗಿದರು.
ರಥೋತ್ಸವ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಅರ್ಚಕ ಹಾಗೂ ದೇವಿ ಆರಾಧಕರಾದ ಮಂಜುನಾಥ.ಫ.ಕಡತಿಯವರು, ಹಿರೇಮಠದ ಗಂಗಾಧರಯ್ಯ ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ಪೂಜೆಯ ವಿಧಿವಿಧಾನ ಪೂರೈಸಿದರು.
ರಥೋತ್ಸವದಲ್ಲಿ ಮಹಿಳೆಯರ ಕುಂಭೋತ್ಸವ, ಹೂವಿನಶಿಗ್ಲಿ-ಹ್ಯಾರಡ ಗ್ರಾಮಗಳ ಡೊಳ್ಳುವಾದ್ಯ, ಹೊಳಲಿನ ಸಮಾಳ, ನಂದಿಕೋಲು ಹಾಗೂ ಶ್ರೀಶೈಲ ಪೀಠದ ಆನೆ, ಮರಕಾಲು ಗೊಂಬೆ ಕುಣಿತ, ಹಾರೋಗೇರಿಯ ಕೋಲಾಟ, ಹಿರೇಹಡಗಲಿಯ ಶಹನಾಯಿ ವಾದ್ಯಗಳು ರಥೋತ್ಸವಕ್ಕೆ ಮೆರಗು ತಂದವು.