ಜಾನಪದ ವಿಶ್ವವಿದ್ಯಾಲಯ: ಕುಲಸಚಿವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ

ರಾಣೇಬೆನ್ನೂರು-ಮೇ.29: ಭ್ರಷ್ಟಾಚಾರದಲ್ಲಿ ತೊಡಗಿರುವ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಗೊಟಗೋಡೆಯ ಜಾನಪದ ವಿಶ್ವವಿದ್ಯಾಲಯ ಆಡಳಿತ ಕುಲಸಚಿವ ಹಾಗೂ ಮೌಲ್ಯಮಾಪನ ಕುಲಸಚಿವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ  ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಸಿ.ಎಸ್.ಕುಲಕಣರ್ಿ ಅವರಿಗೆ ಮನವಿ ಸಲ್ಲಿಸಿದರು.

   ಕುಲಸಚಿವರು ತಪ್ಪು ಒಪ್ಪಿಗೆ ಪತ್ರ ಬರೆದು ಸಾರ್ವಜನಿಕವಾಗಿ ಒಪ್ಪಿಕೊಂಡರೂ ಸಹ ಅವರ ಮೇಲೆ ಇವರೆಗೂ  ಯಾವುದೇ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿಯಾಗಿದೆ ಎಂದರು.

      ನಗರ ಕಾರ್ಯದಶರ್ಿ ಪ್ರಕಾಶ ಬಡಿಗೇರ, ಮಂಜು ಕೋಳ್ಳೇರ, ರಾಘವೇಂದ್ರ, ರಮೇಶ, ಶಿವರಾಜ ಕರಿಗಾರ, ವಿಶ್ವನಾಥ, ಸಚಿನ್, ಚಂದ್ರು, ಗುರುರಾಜ ಮುಂತಾದವರು ಇದ್ದರು.