ಲೋಕದರ್ಶನ ವರದಿ
ಗದಗ 10: ಶಿಕ್ಷಣ ಸಂಸ್ಥೆಗಳ ಮೂಲಕ ಕೂಗು ಉಪನ್ಯಾಸಗಳನ್ನು ನೀಡುವದರೊಂದಿಗೆ ಕನ್ನಡ ನಾಡು,ನುಡಿ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳುತ್ತಾ ಕರ್ನಾಟಕ ಸಾಧಕರ ಪುಸ್ತಕಕ್ಕೆ ವಿಶಿಷ್ಟ ವಿವಿಧ ಕ್ಷೇತ್ರಗಳ ಮೂಲಕ ಸಾಧನೆಯನ್ನು ಮಾಡಿ ಸಂಸ್ಕೃತಿಕ ದಾಖಲೆ ನಿಮರ್ಿಸಿದ ಮಾಡಿದ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಖ್ಯಾತ ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅವರನ್ನು ಚಿಕ್ಕನರ್ತಿ ಗ್ರಾಮದ ರೆಡ್ ಸ್ಟಾರ್ ಯುವಕ ಮಂಡಳಿಯವರು ಗಜಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕೂಗು ಧ್ವನಿ ಪ್ರತಿಧ್ವನಿ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ನೀಡಿದರು. ದಿವ್ಯ ಸಾನಿಧ್ಯವನ್ನು ಚಿಕ್ಕನತರ್ಿಯ ಪೂಜ್ಯ ಜಗದೇವಯ್ಯ ಹಿರೇಮಠ ಅವರು ವಹಿಸಿದ್ದರು.
ಶಾಂತಮ್ಮ ನೇಕಾರ, ಅಪ್ಪುಸ್ವಾಮಿ ಸೋಮರಡ್ಡಿ, ಬಸವರಡ್ಡಿ ಶಾಮನೂರ, ಮಾದೇವಪ್ಪ ಕಾಮಶೆಟ್ಟಿ, ಮುದಕ್ಕಣ್ಣ ತಡಸದ, ಹನಮಪ್ಪ ರೊಟ್ಟಿಗವಾಡ, ಬಸವನೆಪ್ಪ ಮಾಯಮ್ಮನವರ, ಉಡಚಪ್ಪಾ ಶಾನವಾಡೆ, ಬಿ.ಎಮ್.ಪಾಟೀಲ, ವಿನಾಯಕ ಚೌರಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.