ನವದೆಹಲಿ,25: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಓಲೈಕೆ ಮುಂದಾಗಿರುವ ಕಾಂಗ್ರೆಸ್ ಹಲವು ಭರವಸೆಗಳನ್ನು ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಶೇ 20ರಷ್ಟು ಕಡು ಬಡ ಕುಟುಂಬಗಳಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯಡಿ ವಾಷರ್ಿಕ 72,000 ರೂ ಒದಗಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಆಥರ್ಿಕವಾಗಿ ಹಿಂದುಳಿದ ಬಡವರಿಗೆ ಮಾಸಿಕ ತಲಾ 12,000 ರೂ.ಗಳ ಮೂಲ ಕನಿಷ್ಠ ಆದಾಯವನ್ನು ಖಾತ್ರಿಪಡಿಸುವುದಾಗಿ ಹೇಳಿದರು. ಇದೊಂದು ಅತ್ಯಂತ ಪರಿಣಾಮಕಾರಿ, ಐತಿಹಾಸಿಕ ಮತ್ತು ಚೆನ್ನಾಗಿ ಯೋಚಿಸಿ ರೂಪಿಸಿದ ಯೋಜನೆ. ನಾವು ಹಲವು ಅರ್ಥಶಾಸ್ತ್ರಜ್ಞರ ಜತೆ ಈ ಯೋಜನೆ ಬಗ್ಗೆ ಚಚರ್ಿಸಿದ್ದೇವೆ ಎಂದು ರಾಹುಲ್ ಹೇಲಿದ್ದಾರೆ.
ಇದು ಜಗತ್ತಿನ ಅತಿದೊಡ್ಡ ಕನಿಷ್ಠ ಆದಾಯ ಯೋಜನೆಯಾಗಲಿದೆ. ಬಡತನದ ವಿರುದ್ಧ ಅಂತಿಮ ಹೋರಾಟ ಆರಂಭವಾಗಿದೆ. 'ನಾವು ದೇಶದಿಂದ ಬಡತನವನ್ನು ನಿಮರ್ೂಲನೆ ಮಾಡಲಿದ್ದೇವೆ. ಈ ಯೋಜನೆಯಿಂದ ಒಟ್ಟಾರೆ 25 ಕೋಟಿ ಜನರಿಗೆ ಲಾಭವಾಗಲಿದೆ ಎಂದು ಭರವಸೆ ನೀಡಿದರು.
'ನಾವು ಮಹಾತ್ಮಾಗಾಂಧಿ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಅದೇ ರೀತಿ ಈ ಯೋಜನೆಯನ್ನೂ ಜಾರಿಗೊಳಿಸುತ್ತೇವೆ. ಇದು ಆಥರ್ಿಕವಾಗಿಯೂ ಅನುಷ್ಠಾನಯೋಗ್ಯ ಯೋಜನೆಯಾಗಿದೆ' ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
21ನೇ ಶತಮಾನದಲ್ಲೂ ದೇಶದಲ್ಲಿ ಬಡತನ ತಾಂಡವಾಡುತ್ತಿದೆ ಎಂದರೆ ತುಂಬಾ ನೋವಾಗುತ್ತದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎರಡು ಭಾರತಗಳು ನಿಮರ್ಾಣವಾಗಿವೆ. ಒಂದು ಭಾರತ ಅನಿಲ್ ಅಂಬಾನಿ ಅವರಂಥವರದ್ದಾಗಿದ್ದರೆ, ಇನ್ನೊಂದು ಭಾರತ ಕಡುಬಡವರದ್ದಾಗಿದೆ. ಈ ವಿಭಜನೆಯನ್ನು ನಿವಾರಿಸಲು ಮಾಸಿಕವಾಗಿ 12 ಸಾವಿರ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಬಡವರಿಗೆ ವಾಷರ್ಿಕವಾಗಿ ಕನಿಷ್ಠ ಆದಾಯವನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರ ಪ್ರಕಾರ ವಾಷರ್ಿಕವಾಗಿ 72 ಸಾವಿರ ರೂ. ನಗದನ್ನು ಶೇ.20 ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಗರ್ಾವಣೆ ಮಾಡಲಾಗುವುದು ಎಂದು ವಿವರಿಸಿದರು.