ಬೈಲಹೊಂಗಲ- ಬೆಳಗಾವಿ ಸುವರ್ಣ ಸೌಧಕ್ಕೆ ಸಕರ್ಾರಿ ಕಾರ್ಯದಶರ್ಿ ಮಟ್ಟದ ಕಾಯರ್ಾಲಯಗಳು ಸ್ಥಳಾಂತರಿಸಿ, ಈ ಭಾಗದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿ ಜನರ ಅಶೂತ್ತರಕ್ಕೆ ಸ್ಪಂದಿಸಿದರೆ ಮಾತ್ರ ಅಖಂಡ ಕನರ್ಾಟಕ ಉಳಿಯಲ್ಲಿಕ್ಕೆ ಸಾಧ್ಯ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಮಹಾಂತೇಶ ಕಮತ ಹೇಳಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಪದಾಧಿಕಾರಿಗಳು ಸೇರಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕನರ್ಾಟಕ ಅಖಂಡವಾಗಿರಲಿಕ್ಕೆ ಉತ್ತರ ಕನರ್ಾಟಕದ ಅನೇಕ ಮಹಿನಿಯರು ಹೋರಾಟ ನಡೆಸಿದ್ದಾರೆ. ಆದರೆ ತಮ್ಮ ಸ್ವಾರ್ಥಕ್ಕಾಗಿ ರಾಜ್ಯ ಒಡೆಯುವ ವಿಷಯ ಮೋದಲಿನಿಂದ ಬಂದಿದ್ದರು ಇಂದು ಹೋರಾಟ ತಿವ್ರಗೊಳ್ಳುತ್ತಿದೆ. ಇದಕ್ಕೆಲ್ಲ ನಮ್ಮನ್ನಾಳುತ್ತಿರುವ ರಾಜಕಾರಣಿಗಳೆ ಹೊಣೆಗಾರರಾಗಿದ್ದಾರೆ. ಉತ್ತರ ಕನರ್ಾಟಕದಿಂದ ಚುನಾಯಿತರಾಗಿರುವ ಪ್ರತಿನಿಧಿಗಳು ಬೆಂಗಳೂರಲ್ಲಿ ಮನೆ ಮಾಡಿಕೊಂಡು ತಮ್ಮ ಕ್ಷೇತ್ರಗಳನ್ನೆ ಮರೆತು ಬೆಜಾವಬ್ದಾರಿಯಿಂದ ವತರ್ಿಸುತ್ತಿರುವದು ನ್ಯಾಯಸಮ್ಮತವಲ್ಲ. ಪಕ್ಷಬೇದ ಮರೆತು ಉತ್ತರಕನರ್ಾಟಕದ ಎಲ್ಲ ಶಾಸಕರು, ಸಂಸದರು ಬೆಳಗಾಂವಿಯ ಸುವರ್ಣ ವಿಧಾನ ಸೌಧಕ್ಕೆ ಸಕರ್ಾರ ಮಟ್ಟದ ಕಾರ್ಯದಶರ್ಿಗಳ ಕಛೇರಿಯನ್ನು ಪ್ರಾರಂಭವಾಗಿಸಬೇಕೆಂದರು.
ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಉತ್ತರ ಕನರ್ಾಟಕದಲ್ಲಿ ಪ್ರಭಾವಿ ನಾಯಕರಿಲ್ಲ. ಒಗ್ಗಟ್ಟಿನ ಕೊರತೆಯಿಂದ ದಕ್ಷಿಣ ಕನರ್ಾಟಕದ ನಾಯಕರು ಇವರನ್ನು ಕೈಗೊಂಬೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರ ಮಾತ್ರ ಸಿಂಗಾಪೂರ ಆದರೆ ಸಾಲದು, ಅಖಂಡ ಕನರ್ಾಟಕದ ನಾಲ್ಕು ಮೂಲೆಗಳು ಅಲ್ಲಿಯ ಸಂಪನ್ಮೂಲಗಳನ್ನು ಆಧರಿಸಿ ಸರ್ವತೋಮುಖ ಅಭಿವೃದ್ದಿಯಾಗಬೇಕು. ಇದರಿಂದ ಬೆಂಗಳೂರಿನ ಜನದಟ್ಟನೆ, ಟ್ರಾಪಿಕ್ ಸಮಸ್ಯೆ, ಪರಿಸರ ಮಾಲಿನ್ಯ ತಡೆಗಟ್ಟುವದರೊಂದಿಗೆ ಉತ್ತರಕನರ್ಾಟಕದ ಪ್ರತಿಭೆಗಳು ಮತ್ತು ಈ ಭಾಗದ ಜನತೆ ಬೆಂಗಳೂರಿಗೆ ವಲಸೆ ಹೊಗುವದು ಮತ್ತು ಕೆಲಸಕ್ಕಾಗಿ ಅಲೆದಾಡುವದು ತಪ್ಪುತ್ತದೆ.
ಉತ್ತರ ಕನರ್ಾಟಕದ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಇನ್ನು ಸಿಗುತ್ತಿಲ್ಲ. ಜಿಲ್ಲಾ ಕೆಂದ್ರವಾಗಿರುವ ಬೆಳಗಾವಿ ನಗರದಲ್ಲಿ ನೀರಿಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕಾಣದೆ ಕಾಟಾಚಾರಕ್ಕೆ ಸುವರ್ಣಸೌಧ ನಿಮರ್ಿಸಿ ಪ್ರತಿ ವರ್ಷ 10ದಿನಗಳ ಕಾಲ ಅಧಿವೇಶನದಲ್ಲಿ ಈ ಭಾಗದ ಯಾವುದೆ ಪ್ರಮುಖ ನಿರ್ಣಯಗಳನ್ನು ಚಚರ್ಿಸದೆ ಪ್ರವಾಸಕ್ಕೆ ಬಂದಂತೆ ಮೋಜು ಮಸ್ತಿಗೆ ಮೊರೆಹೋಗಿ ಅಧಿಕಾರಿಗಳಿಂದ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕುಂದಾ ನಗರಿಯ ವಿಷೇಶ ವಸ್ತುಗಳನ್ನು ಖರೀದಿ ಮಾಡಿಕೊಂಡು ಹೊಗುವಂತ ಪರೀಪಾಟ ಬಿದ್ದಾಗ ಉತ್ತರ ಕನರ್ಾಟಕದ ಅಭಿವೃದ್ದಿ ಹೇಗೆ ಸಾಧ್ಯ ಎಂದರು.
ಈ ಭಾಗದ ಕೆಲ ರಾಜಕೀಯ ಮುಖಂಡರು ಪಕ್ಷದಲ್ಲಿ ತಮ್ಮ ಅಸ್ತಿತ್ವ ಹೆಚ್ಚಿಸಿಕೊಳ್ಳಲು ಉತ್ತರ ಕನರ್ಾಟಕಕ್ಕೆ ಬಜೆಟ್ನಲ್ಲಿ ಅನ್ಯಾಯವಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವದು ಸರಿಯಾದದ್ದಲ್ಲ. ಇನ್ನು ಕೇಲವರು ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳುವ ಸಲುವಾಗಿ ಉತ್ತರ ಕನರ್ಾಟಕ್ಕೆ ಅನ್ಯಾಯುವಾಗಿರುವದನ್ನು ಬಿಟ್ಟು ಪ್ರತ್ಯೆಕತೆಯ ಕೂಗು ಎಬ್ಬಿಸಿರುವದು ಈ ಭಾಗದ ಜನರಿಗೆ ನ್ಯಾಯಕೊಡಿಸುವ ಉದ್ದೇಶವು ಅದಲ್ಲ.
ಆದ್ದರಿಂದ ಈ ಭಾಗದ ಪ್ರಮುಖ ಬೇಳೆ ಕಬ್ಬಿಗೆ ವೈಜ್ಞಾನಿಕ ಬೆಲೆ, ಪ್ರಭಾವಿ ರಾಜಕಾರಣಿಗಳ ಕಾಖರ್ಾನೆಗಳ ಬಾಕಿ ಹಣ ಕೊಡಿಸುವದು. ಸಕರ್ಾರಿ ಆಸ್ಪತ್ರೆ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಉತ್ತಮಗೊಳಿಸುವದರೊಂದಿಗೆ ನೆನಗುದಿಗೆ ಬಿದ್ದ ನೀರಾವರಿ ಯೋಜನೆಗಳನ್ನು ಜಾರಿಗೆ ತರುವದು ಅಗತ್ಯವಾಗಿದೆ.
ರಾಜ್ಯ ಸಕರ್ಾರ ಎಚ್ಚೆತ್ತುಕೊಂಡು ಉತ್ತರ ಕನರ್ಾಟಕದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರತೇಕತೆಯ ಕೂಗಿಗೆ ಇತ್ಯಿಶ್ರೀ ಹಾಡಬೇಕು. ಇದಕ್ಕೆ ಉತ್ತರ ಕನರ್ಾಟಕದ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಕರ್ಾರಕ್ಕೆ ಒತ್ತಡತರಬೇಕು. ಇದನ್ನು ಬಿಟ್ಟು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿಗಳು ತಾವು ಆಡಿದ ಮತುಗಳನ್ನು ಮರೆತು ಮಾಧ್ಯಮಗಳ ಮೇಲೆ ಕೀಡಿ ಕಾರುತ್ತಿರುವದು ತಿವ್ರ ಖಂಡನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ದುಗ್ಗಾಣಿ, ಸುರೇಶ ಹೋಳಿ, ರಂಗಪ್ಪ ಬೂದಿಹಾಳ, ಸೋಮಪ್ಪ ಕೋಟಗಿ, ಮಲ್ಲಕಾಜರ್ುನ ದೇಸಾಯಿ, ಮಡಿವಾಳಪ್ಪ ಬುಳ್ಳಿ, ಸೋಮಯ್ಯ ಏಣಗಿಮಠ, ಮಹಾಂತೇಶ ದಳವಾಯಿ, ಅಡಿವೆಪ್ಪ ಚಳಕೊಪ್ಪ, ಮಡಿವಾಳಪ್ಪ ಚಿಕ್ಕೊಪ್ಪ, ಶ್ರೀಪತಿ ಪಠಾಣಿ, ಈರಪ್ಪ ಹುಬ್ಬಳ್ಳಿ, ಬಸವರಾಜ ಚಿಕ್ಕೊಪ್ಪ, ಇಮಾಸಾಬ ವಕ್ಕುಂದ, ಆನಂದಪ್ಪ ಬೂದಿಹಾಳ, ಮಡಿವಾಳಪ್ಪ ತಳವಾರ ಮುಂತಾದವರು ಇದ್ದರು.