ಚೀನಾಕ್ಕೆ ಭೇಟಿ ನೀಡಲಿರುವ ವಿದೇಶಾಂಗ ಸಚಿವ ಡಾ.ಜೈಶಂಕರ್

 ನವದೆಹಲಿ, ಆಗಸ್ಟ್ 11     ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಭಾನುವಾರ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಭಾರತ-ಚೀನಾ ನಡುವಿನ ಉನ್ನತ ಮಟ್ಟದ ಸಾಂಸ್ಕೃತಿಕ ಮತ್ತು ಪರಿಚಯ ಸಭೆಯ ಸಹ ಅಧ್ಯಕ್ಷತೆ ವಹಿಸಲಿದ್ದಾರೆ.   ಡಾ.ಜೈಶಂಕರ್ ಅವರು ಅಧಿಕಾರ ವಹಿಸಿಕೊಂಡ ನಂತರ ಚೀನಾಕ್ಕೆ ಮೊದಲ ಪ್ರವಾಸ ಇದಾಗಿದೆ. ಡಾ.ಜೈಶಂಕರ್ ಅವರು 2009 ಮತ್ತು 2013ರ ನಡುವೆ ಭಾರತದ ರಾಯಭಾರಿಯಾಗಿ ಬೀಜಿಂಗ್ಗೆ ಹೋಗಿದ್ದಾರೆ.  ಭಾರತ ಮತ್ತು ಚೀನಾ ಸಾಂಸ್ಕೃತಿಕ ಮತ್ತು ವಿನಿಮಯ ಸಭೆಯಲ್ಲಿ ಸಹ ಅಧ್ಯಕ್ಷರಾಗಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಕೂಡ ಭಾಗವಹಿಸಲಿದ್ದಾರೆ.   ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚೀನಾ ಗಂಭೀರವಾಗಿ ಕಾಳಜಿ ವಹಿಸುತ್ತಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಹೇಳಿದ ಕೆಲವು ದಿನಗಳ ನಂತರ ಭಾರತ, ಚೀನಾ ವಿದೇಶಾಂಗ ಸಚಿವರ ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.    ಚೀನಾದ ನಿಲುವಿಗೆ ನವದೆಹಲಿ ಪ್ರತಿಕ್ರಿಯಿಸಿದ ಎಂಇಎ ವಕ್ತಾರ ರವೀಶ್ ಕುಮಾರ್, ಭಾರತವು ಇತರ ದೇಶಗಳ ಆಂತರಿಕ ವ್ಯವಹಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಇತರ ದೇಶಗಳೂ ಸಹ ಇದೇ ರೀತಿ ಮಾಡಬೇಕೆಂದು ನಿರೀಕ್ಷಿಸುತ್ತದೆ ಎಂದಿದ್ದರು.   ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ರದ್ದುಪಡಿಸುವುದು ಸಾಂವಿಧಾನಿಕ ಚೌಕಟ್ಟಿನಲ್ಲಿದೆ ಎಂಬ ಭಾರತದ ನಿಲುವನ್ನು ರಷ್ಯಾ ಸೇರಿದಂತೆ ಹಲವಾರು ದೇಶಗಳು ಶ್ಲಾಘಿಸಿದ್ದವು.  ಜನರ ನಡುವಿನ ಬಾಂಧವ್ಯ ಹೆಚ್ಚಿಸಲು ಭಾರತ ಮತ್ತು ಚೀನಾ ಭೇಟಿ ನಿರ್ಧಾರವನ್ನು 2018 ರ ಏಪ್ರಿಲ್ನಲ್ಲಿ ವುಹಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಅನೌಪಚಾರಿಕ ಭೇಟಿ ವೇಳೆ ತೆಗೆದುಕೊಳ್ಳಲಾಗಿತ್ತು. ಇದರ ಉದ್ಘಾಟನಾ ಸಭೆ 2018ರ ಡಿಸೆಂಬರ್ 21 ರಂದು ನವದೆಹಲಿಯಲ್ಲಿ ನಡೆದಿತ್ತು.