ಲೋಕದರ್ಶನ ವರದಿ
ಫಾರೆನ್ಸಿಕ್ ನಸಿಂರ್ಗ್, ಕಾನೂನು ವಿಷಯಗಳ ಕಾರ್ಯಾಗಾರ
ಲೋಕದರ್ಶನ ವರದಿ
ಜಮಖಂಡಿ 21: ನಗರದ ಬಿಎಲ್ಡಿಇ, ಎಎಸ್ ನಸಿಂರ್ಗ್ ಕಾಲೇಜನಲ್ಲಿ ಫಾರೆನ್ಸಿಕ್ ನಸಿಂರ್ಗ್ ಮತ್ತು ಕಾನೂನು ವಿಷಯಗಳ ಒಂದು ದಿನದ ಕಾರ್ಯಾಗಾರ ಜರುಗಿತು. ನಸಿಂರ್ಗ್ ಅಭ್ಯಾಸದಲ್ಲಿ ವೈದ್ಯಕೀಯ, ಕಾನೂನು ಜವಾಬ್ದಾರಿಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳ ಅರಿವು ಮತ್ತು ಜ್ಞಾನ ಹೆಚ್ಚಿಸುವುದು ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಡಾ, ಬಶೀರ್ಅಹ್ಮದ್ ಜಿ, ಸಿಕಂದರ್, ಬಿ,ಎಂ, ಪಾಟೀಲ ಮಾತನಾಡಿದರು. ಪ್ರಾಂಶುಪಾಲ ಡಾ, ವೀರಭದ್ರ್ಪ ಮೆಂದಗುಡ್ಲಿ ಮಾತನಾಡಿ, ನಸಿಂರ್ಗ್ ವಿದ್ಯಾರ್ಥಿಗಳು ತಮ್ಮ ಕಾನೂನು ಜವಾಬ್ದಾರಿಗಳನ್ನು ಅರಿತು, ನಿರಂತರ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು.
ಫಾರೆನ್ಸಿಕ್ ನಸಿಂರ್ಗ್ ಮತ್ತು ತಂಡದ ಪರಿಚಯ, ಸಮೂಹ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ಕಓಅಖಓ ಕಾಯಿದೆ ಬಗ್ಗೆ ತಿಳಿಸಿದರು.
ಪ್ರಾಂಶುಪಾಲ ಡಾ, ವೀರಭದ್ರ್ಪ ಮೆಂದಗುಡ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯತಾಪತ್ರಿಕೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಡಾ. ಅಮರನಾಥ ಶಣ್ಮುಖೆ, ಡಾ. ರಾಘವೀರ್ ಜಿ. ಕುಲಕರ್ಣಿ ಇದ್ದರು. ರಾಜೇಶ್ವರಿ ಕಂಬಿ, ಪೂಜಾ ಹೊಸಕೋಟಿ ಸ್ವಾಗತಿಸಿ, ನಿರೂಪಿಸಿದರು. ವಂದೇ ಮಾತರಂ ರಾಷ್ಟ್ರಗೀತೆಯನ್ನು ಉಷಾ ಪುಜಾರಿ, ಕಾವೇರಿ ಪೂಜಾರಿ ನೇರವೆರಿಸಿದರು. ಶಿವಲೀಲಾ ಎಸ್, ಸಾರವಾಡ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಅರಳಿಮಠ, ಜ್ಯೋತಿ ಮರೆಗುದ್ದಿ, ಅನಿಲ್ ಮಾಣೆ, ಸಾವಿತ್ರಿ ಜಂಬಗಿ ವಂದಿಸಿದರು.