ಒಳ ಮೀಸಲಾತಿ ಏಕ ಸದಸ್ಯ ಆಯೋಗ ರಚನೆ
ರಾಯಬಾಗ 04: ಮೇ.5 ರಿಂದ ಆರಂಭವಾಗಲಿರುವ ಒಳ ಮಿಸಲಾತಿ ಸಮೀಕ್ಷೆಯಲ್ಲಿ ಭಜಂತ್ರಿ ಸಮುದಾಯದವರು ಮೂಲ ಜಾತಿ ಕೊರವ, ಕೊರವರ, ಕೊರಮಾ ಇದರಲ್ಲಿ ಯಾವುದಾದರೊಂದು ಬರೆಸಬೇಕೆಂದು ಕಿತ್ತೂರ ಕರ್ನಾಟಕದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಉಪಾಧ್ಯಕ್ಷ ಹನುಮಂತ ಭಜಂತ್ರಿ ಹೇಳಿದರು.
ಭಾನುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸರ್ಕಾರ ಒಳ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಿದೆ. 101 ಪರಿಶಿಷ್ಟ ಉಪ ಜಾತಿಗಳ ಸ್ಥಿತಿಗತಿಗಳ ದತ್ತಾಂಶ ಸಂಗ್ರಹಿಸಲು ಮನೆ ಮನೆ ಸಮೀಕ್ಷೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಆಯೋಗವು ಪರಿಶಿಷ್ಟ ಜಾತಿಯ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅಧ್ಯಯನ ಮಾಡಲು ಮುಂದಾಗಿದೆ ಎಂದು ತಿಳಿಸಿದರು. ಕಾರಣ ಭಜಂತ್ರಿ ಜನಾಂಗದವರು ತಮ್ಮ ಮೂಲ ಜಾತಿ ನಮೂದಿಸಬೇಕೆಂದು ತಿಳಿಸಿದರು. ಸಮಾಜದ ಮುಖಂಡರಾದ ಶಿವಪ್ಪ ಭಜಂತ್ರಿ ಮಾಯಪ್ಪ ಭಜಂತ್ರಿ, ಮಹಾದೇವ ಮಲಾಜೂರೆ, ಗೋವಿಂದ ಭಜಂತ್ರಿ, ರಾಜು ಭಜಂತ್ರಿ, ರಂಜಿತ ಭಜಂತ್ರಿ ಇದ್ದರು.