ಹುಬ್ಬಳ್ಳಿ 25: ಬ್ಯಾಂಕರ್ಸ್ ಕ್ಲಬ್ ಹುಬ್ಬಳ್ಳಿಯ ಬ್ಯಾಂಕರ್ಸ್‌ಕ್ಲಬ್‌ನ ಫೌಂಡೇಶನ್ ದಿನವನ್ನು ದಿ. 26 ರ ಎಪ್ರೀಲ್ 2025ರಂದು ಬೆಳಿಗ್ಗೆ 09.00 ಗಂಟೆಗೆ ಬ್ಯಾಂಕರ್ಸ್ ಭವನ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳ್ಳಿಗ್ಗೆ 09.00 ಗಂಟೆಗೆ ಅತಿಥಿಗಳ ಆಗಮನ, 10.00 ಗಂಟೆಯಿಂದ 12.00 ಗಂಟೆಯವರೆಗೆ ಡಾ.ರಾಜಕುಮಾರ, ರಾಜಕಪೂರ ಹಾಗೂ ಪುಟ್ಟಣ್ಣ ಕಣಗಾಲರವರ ಚಿತ್ರಗೀತೆಗಳ ಸಂಗೀತ ಕಾರ್ಯಕ್ರಮ ಹಾಗೂ 12.00 ರಿಂದ 02.00 ಗಂಟೆಯವರೆಗೆ ಎಲ್ಲ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರ ಸನ್ಮಾನ ಕಾರ್ಯಕ್ರಮನ್ನು ಆಯೋಜಿಸಲಾಗಿದೆ ಎಂದು ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಡಿ.ಜಿ. ಶೆಟ್ಟಿಯವರು ತಿಳಿಸಿದ್ದಾರೆ.