ಕಾರ್ಮಿಕರ ಸಮುದಯ ಭವನದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Foundation-laying program of Workers' Community Hall building

ಗದಗ 18:   ಗದಗ  ಜಿಲ್ಲೆ0ು ಹುಲಿಕೋಟೆ0ುಲ್ಲಿ  ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ0ು ಸಹ0ೋಗದಿಂದ ಕಾರ್ಮಿಕರ ಸಮುದಾ0ು ಭವನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾ0ುರ್ಕ್ರಮವು ಬುಧವಾರ  ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಸ ಲಾಡ್ ಹಾಗೂ  ರಾಜ್ಯದ  ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ  ಅವರ ಉಪಸ್ಥಿತಿಯಲ್ಲಿ ನೆರವೇರಿತು.  

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ  ಕೃಷ್ಣ ಗೌಡ ಪಾಟೀಲ,  ಗಣ್ಯರಾದ ಡಿ.ಆರ್‌.ಪಾಟೀಲ, ಸಿದ್ದು ಪಾಟೀಲ, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭಾರತಿ ಡಿ,     ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕಾರ್ಮಿಕ ಇಲಾಖೆಯ ಅಧಿಕಾರಿ  ಶ್ರೀಶೈಲ ಸೋಮನಕಟ್ಟಿ  ಸೇರಿದಂತೆ  ಪ್ರಮುಖರು, ಹಿರಿಯರು  ಇದ್ದರು.