ರಾಯಬಾಗ : ನಾವೆಲ್ಲರೂ ಒಂದು ಎಂದು ತಿಳಿದು ನಡೆದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಿದರೆ, ವೇದಿಕೆ ಬೆಳೆಯುವುದರೊಂದಿಗೆ ನಾವು ಬೆಳೆಯಲು ಸಾಧ್ಯವೆಂದು ನ್ಯಾಯವಾದಿ ಎಲ್.ಬಿ.ಚೌಗುಲೆ ಹೇಳಿದರು.
ರವಿವಾರ ತಾಲೂಕಿನ ಹಳೇ ದಿಗ್ಗೇವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ವಿವಿಧ ಗ್ರಾಮಗಳ ಅಖಿಲ ಕನರ್ಾಟಕ ಆದಿಬಣಜಿಗ ಯುವ ವೇದಿಕೆಗಳನ್ನು ಉದ್ಘಾಟನೆ ಹಾಗೂ ತಾಲೂಕು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಬಡ ವಿದ್ಯಾಥರ್ಿಗೆ ನಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಜಾನಪದ ಪರಿಷತ್ ಚಿತ್ತಾಪೂರ ತಾಲೂಕಾ ಅಧ್ಯಕ್ಷ ಚನ್ನವೀರ ಕಣವಿ ಮಾತನಾಡಿ, ಕನರ್ಾಟಕ ರಾಜ್ಯಾದಾಂತ್ಯ ನಮ್ಮ ಸಮುದಾಯವನ್ನು ಒಟ್ಟುಗೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ ಅವರು, ಆದಿಬಣಜಿಗೆ ಯುವ ವೇದಿಕೆ ರಚನೆ ಮತ್ತು ಅದರ ರೂಪರೇಷೆ, ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವಧುರೀಣ ಬಸವರಾಜ ಡೊಣವಾಡೆ ಅವರು, ನಮ್ಮ ಸಮಾಜ ಇನ್ನು ಅನೇಕ ಕ್ಷೇತ್ರದಲ್ಲಿ ಹಿಂದುಳಿದೆ. ನಾವೆಲ್ಲರೂ ಆಥರ್ಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಏಳ್ಗೆ ಹೊಂದಬೇಕಾಗಿದೆ. ಆ ನಿಟ್ಟಿನಲ್ಲಿ ಸತೀಶ ಪಾಟೀಲ ಅವರ ನೇತೃತ್ವದಲ್ಲಿ ಆದಿಬಣಜಿಗ ಯುವ ವೇದಿಕೆ ಹುಟ್ಟುಹಾಕಿ ಸಮಾಜ ಅಭಿವೃದ್ಧಿಗಾಗಿ ಶ್ರಮೀಸಲಾಗುತ್ತಿದ್ದು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಮಹಾದೇವ ಗಂಗಾಯಿ ಅವರು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಸಮುದಾಯದ ಮುಖಂಡರಾದ ಅಪ್ಪಾ ತೆಲಸಂಗ, ಶಿವಾನಂದ ಡಂಗೆ ಮಾತನಾಡಿದರು.
ಅಖಿಲ ಕನರ್ಾಟಕ ಯುವವೇದಿಕೆ ಮುಖಂಡ, ಸತೀಶ ಪಾಟೀಲ, ಅಪ್ಪಾಸಾಬ ಚೌಗುಲೆ, ಸತ್ಯಪ್ಪ ಬಿಷ್ಠೆ, ಸತ್ಯಪ್ಪ ಐನಾಪೂರೆ, ಮಹೇಶ ಶಿಂಧೆ, ಭೈರು ಚೌಗುಲಾ, ರಾಜು ಚೌಗುಲೆ, ಎಸ್.ಎಮ್.ಸಲಗರೆ, ಕೆ.ಎಸ್.ಫುಂಡಿಪಲ್ಲೆ, ಕೇದಾರಿ ಸಂಗಪಲೆ, ಶಿವಪ್ಪ ನಾಯಿಕ, ವೇದಿಕೆ ಹಂಚಿಕೊಂಡರು.
ಸಮುದಾಯದ ಮುಖಂಡರಾದ ಮಹೇಶ ಚೌಗುಲೆ, ಶಿವರಾಜ ಡೋಣವಾಡೆ, ಶ್ರೀಶೈಲ ಬಿಷ್ಠೆ, ರಾಯಪ್ಪ ಚೌಗುಲೆ ಹಾಗೂ ತಾಲೂಕಿನ ಹೊಸ ದಿಗ್ಗೇವಾಡಿ, ಹಳೇ ದಿಗ್ಗೇವಾಡಿ, ಬಾವನಸೌಂದತ್ತಿ ಹಾಗೂ ಕೆಂಪಟ್ಟಿ ಗ್ರಾಮಗಳ ಪದಾಧಿಕಾರಿಗಳು, ರಾಜ್ಯ ಅಖಿಲ ಕನರ್ಾಟಕ ಯುವ ವೇದಿಕೆಯ ವ್ಯವಸ್ಥಾಪನಾ ಮಂಡಳಿ ಹಾಗೂ ಬೆಳೆಗಾವಿ, ವಿಜಯಪುರ, ಗದಗ, ಬಾಗಲಕೋಟ, ಕೊಪ್ಪಳ, ಕುಷ್ಟಗಿ, ಕಲಬುಗರ್ಿ ಜಿಲ್ಲೆಗಳ ಸಮುದಾಯದ ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
ಅನೀಲ ಬೆಳಗಲೆ ಸ್ವಾಗತಿಸಿದರು, ಸಾತಪ್ಪ ಬಾನೆ ನಿರೂಪಿಸಿದರು, ವಂದಿಸಿದರು.