ಮಂಡಿಹಾಳ ಶಾಲೆಗೆ ಪಿಠೋಪಕರಣ ದೇಣಿಗೆ: 50ಸಾವಿರ ದತ್ತಿ ಸಂಗ್ರಹ

ಧಾರವಾಡ 29: ಝಾನ್ಸಿ ಸಾಯಿನಾಥ ಕುಲಕಣರ್ಿ ವೈಟ್ ಪಿಲ್ಡ್ ಬೆಂಗಳೂರು, ಇವರು ಸರಕರ್ಾರಿ ಕನ್ನಡ ಶಾಲೆಗಳನ್ನು ಸಭಲೀಕರಣಗೊಳಿಸುವ ಸಲೂವಾಗಿ ಕನ್ನಡ ಶಾಲೆಗಳು ಹೆಚ್ಚು ಸೌಕರ್ಯ ಸೌಲಭ್ಯಗಳೊಂದಿಗೆ ಮಕ್ಕಳನ್ನು, ಪಾಲಕ ಪೋಷಕರನ್ನು ಆಕಷರ್ಿಸಬೇಕು ಗ್ರಾಮೀಣ ಕನ್ನಡ ಶಾಲೆಗಳು ಉನ್ನತಿಕರಣವಾಗಬೇಕೆಂದು ಬೆಂಗಳೂರಿನ ವೈಟ್ ಪಿಲ್ಡ್ನ ಝಾನ್ಸಿ ಸಾಯಿನಾಥ ಕುಲಕಣರ್ಿ ಅವರು  ಧಾರವಾಡ ತಾಲೂಕಿನ ಮಂಡಿಹಾಳ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 10ಕುಚರ್ಿ, 4ಅಲ್ಮೇರಾ, 1ವ್ಹಿಲ್ಚೇರ್ ಒಟ್ಟು 46500 ರೂಗಳ ಪೀಠೋಪಕರಣಗಳನ್ನು ದೇಣಿಗೆ ನೀಡಿದ್ದಾರೆಂದು ಶಾಲೆಯ  ಮುಖ್ಯೋಪಾಧ್ಯಾಯ ಗುರು ಜಾಯಪ್ಪಪೋಳ ಅವರು ಹೇಳಿದರು. 

          ಶಾಲೆಯ ಎಸ್ಡಿಎಮ್ಸಿ ಅಧ್ಯಕ್ಷ ಮೈಲಾರಪ್ಪ ಬೆಳ್ಳಿ ಮಾತನಾಡಿ ಶೌಚಾಲಯ, ಕುಡಿಯುವ ನೀರು, ಹೆಣ್ಣುಮಕ್ಕಳ ಸುರಕ್ಷತೆ, ಗುಣಾತ್ಮಕ ಪಾಠ ಪ್ರವಚನ, ಸುಸಜ್ಜಿತವಾದ ಶಾಲಾ ಕೊಠಡಿಗಳು, ಆಟದ ಮೈದಾನದೊಂದಿಗೆ ಗ್ರಾಮೀಣ ಶಾಲೆಗಳು ರೂಪಗೊಳ್ಳ್ಳಬೇಕಿದೆ. ಆ ದಿಶೆಯಲ್ಲಿ ಮಂಡಿಹಾಳ ಶಾಲೆ ದಾಪುಗಾಲು ಹಾಕುತ್ತಿದೆ. ಸಕರ್ಾರಿ ಶಾಲೆಗೆ ರಾತ್ರಿವೇಳೆಯಲ್ಲಿ ವಾಚಮನ್ ಅವಶ್ಯಕತೆ ಇದೆ ಎಂದು ಹೇಳಿದರು. 

ಶಾಲೆಗೆ ದೇಣಿಗೆ ನೀಡಿದ ಬೆಂಗಳೂರಿನ ವೈಟ್ ಪಿಲ್ಡ್ನ ಝಾನ್ಸಿ ಸಾಯಿನಾಥ ಕುಲಕಣರ್ಿ ಅವರನ್ನು ಹಾಗೂ ಐವತ್ತು ಸಾವಿರ ರೂಪಾಯಿಗಳನ್ನು ಚಂದನಗೌಡ ಪಾಟೀಲ ಇವರ ಹೆಸರಿನಲ್ಲಿ ದತ್ತಿ ಇಟ್ಟಿದ್ದನ್ನು ಅಭಿನಂದಿಸಿ ಮಾತನಾಡಿದರು. ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಕನ್ನಪ್ಪ ನಾಗಲಾವಿ, ಮಾರುತಿ ಸಂಗೊಳ್ಳಿ, ಮಂಜುನಾಥ ಮಂಗಳಗಟ್ಟಿ, ಮಹಾದೇವಿ ಹಿರೇಮಠ, ಲಕ್ಷ್ಮೀ ಹರಿಜನ, ಬಾಳಪ್ಪ ಮಡಿವಾಳರ, ಎಮ್ ಎಸ್ ಪಾಟೀಲ, ಆರ್ ಬಿ ಶಿಂದಗಿಮಠ, ಎಲ್ ವ್ಹಿ ಬಮ್ಮನವಾಡಿ ಭಾಗವಹಿಸಿದ್ದರು. ಡಾ. ಪಿ ಸಿ ಬಾಳಿಕಾಯಿ ನಿರೂಪಿಸಿದರು. ಎಮ ಎಸ್ ಕರಿಯಜ್ಜೇರ್ ಸ್ವಾಗತಿಸಿದರು. ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.