ಲೋಕದರ್ಶನ ವರದಿ
ಗದಗ 24: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಎಂ.ಕೃಷ್ಣನಗರ ಗದಗದಲ್ಲಿ ನಡೆದ ಜಿಲ್ಲಾ ಮಟ್ಟದ ಬೇಸಿಗೆ ಸಂಭ್ರಮ ಶಿಬಿರವನ್ನು ಜಿ.ಪಂ.ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ ಚವಾಣ ಇವರು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸೃಜನಾತ್ಮಕ ಮನೋಭಾವ ಬೆಳೆಸುವಲ್ಲಿ ಬೇಸಿಗೆ ಸಂಭ್ರಮದ ಚಟುವಟಿಕೆಗಳು ಪೂರಕವಾಗಿವೆ ಮತ್ತು ಇಂತಹ ಅನೇಕ ಶಿಬಿರಗಳನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿದ್ದು ಅಲ್ಲಿ ಪಾಲಕರು ಹಣ ಖಚರ್ು ಮಾಡಿ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಸೇರಿಸುತ್ತಾರೆ.ಅದರ ಬದಲಾಗಿ ನಮ್ಮ ಸರಕಾರಿ ಶಾಲೆಗಳಲ್ಲಿ ನಡೆಯುವ ಶಿಬಿರಗಳಿಗೆ ಮಕ್ಕಳನ್ನು ಸೇರಿಸಿದರೆ ಕಲಿಕೆಯ ಜೊತೆಗೆ ಮೋಜನ್ನು ಅನುಭವಿಸುತ್ತಾರೆ.ಜಿಲ್ಲೆಯಲ್ಲಿ ನಡೆಯುವ ಇಂತಹ ಶಿಬಿರಗಳಿಗೆ ನಾನು ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟು ಶಿಬಿರಗಳನ್ನು ಯಶಶ್ವಿಯಾಗಿ ನಡೆಸಲು ಸಹಕರಿಸುವದಾಗಿ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾ.ಶಿ.ಇಲಾಖೆಯ ಉಪನಿದರ್ೇಶಕರಾದ ಎನ್.ಎಚ್.ನಾಗೂರವರು ಮಾತನಾಡುತ್ತಾ ಬೇಸಿಗೆ ಸಂಭ್ರಮ ಶಿಬಿರವು ಐದು ವಾರ ನಡೆಯುತ್ತಿದ್ದು, ಪ್ರತಿವಾರ ಒಂದು ವಿಷಯ ಕುರಿತು ಚಚರ್ೆ ನಡೆಯುತ್ತದೆ. ಅದರಲ್ಲಿ ಕುಟುಂಬ, ನೀರು, ನೈರ್ಮಲ್ಯ, ಪರಿಸರ, ಆರೋಗ್ಯ ಈ ವಿಷಯಗಳನ್ನು ಕುರಿತು ವಿವಿಧ ಚಟುವಟಿಕೆಯ ಮೂಲಕ ಪಾಠ ಬೋಧನೆ ಮಾಡಲಾಗುಗುತ್ತದೆ.ಈ ಶಿಬಿರದಲ್ಲಿ ಗದಗ ಶಹರ ವಲಯದಿಂದ 08 ಕೇಂದ್ರಗಳಲ್ಲಿ 2360 ಮಕ್ಕಳು, ಗದಗ ಗ್ರಾಮೀಣ ವಲಯದಿಂದ 48 ಕೇಂದ್ರಗಳಲ್ಲಿ 3313 ಮಕ್ಕಳು, ಮುಂಡರಗಿಯಿಂದ 36 ಕೇಂದ್ರಗಳಲ್ಲಿ 2396 ಮಕ್ಕಳಿಗೆ, ನರಗುಂದದಿಂದ 20 ಕೇಂದ್ರಗಳಲ್ಲಿ 1485 ಮಕ್ಕಳಿಗೆ ಮತ್ತು ಶಿರಹಟ್ಟಿಯಲ್ಲಿ 42 ಕೇಂದ್ರಗಳಲ್ಲಿ 3157 ಮಕ್ಕಳು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾರೆ.ಜಿಲ್ಲೆಯಲ್ಲಿ ಒಟ್ಟು 230 ಇಂತಹ ಕೇಂದ್ರಗಳಿದ್ದು ಅದರಲ್ಲಿ 6 ನೇತರಗತಿಯ 7763 ಮಕ್ಕಜಳು ಮತ್ತು 7 ನೇತರಗತಿಗೆ 8321 ಮಕ್ಕಳು ಸೇರಿ ಒಟ್ಟು ಜಿಲ್ಲೆಯಲ್ಲಿ 16084 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.ಪ್ರತಿದಿನ ಮೂರು ಅವಧಿಗಳು ನಡೆಯುತ್ತವೆ.
ವಾರದ ಮುಕ್ತಾಯ ದಿನದಲ್ಲಿ ವಿವಿಧ ಕಲಾವಿದರಿಂದ ಕಾರ್ಯಕ್ರಮ ನೀಡಲಾಗುವದು. ಮಕ್ಕಳು ಮನಸಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಮಕ್ಕಳ ಹಾಜರಿ ಕಡ್ಡಾಯವಾಗಿರುತ್ತದೆ. ಪಾಲಕರೂ ಸಹ ಈ ಕಾಯರ್ಾಗಾರದಲ್ಲಿ ಭಾಗವಹಿಸಬೇಕು.ಈ ಸಂಭ್ರಮದ ಯಶಶ್ವಿಗಾಗಿ ಪ್ರತಿ ತಾಲೂಕಿಗೆ ನೊಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ಪ್ರತಿದಿನ ಶಾಲೆಗಳನ್ನು ಸಂದಶರ್ಿಸಿ ವರದಿ ನೀಡುತ್ತಾರೆ. ಈ ಕಾರ್ಯಕ್ರಮ ಯಶಶ್ವಿಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯವರ ಸಹಕಾರ ನೀಡುವ ಆಶಾಭಾವನೆ ಹೊಂದಿರುವದಾಗಿ ಹೇಳಿದರು.ಸಿ.ಆರ್.ಪಿ,ಬಿ.ಆರ್.ಪಿ ಮತ್ತು ಶಿಕ್ಷಣ ಸಂಯೋಜಕರು ಪ್ರತಿದಿನ ಕೇಂದ್ರಗಳನ್ನು ಸಂದಶರ್ಿಸಿ ಬೇಸಿಗೆ ಸಂಭ್ರಮದ ಯಶಶ್ವಿಗಾಗಿ ಕೆಲಸ ನಿರ್ವಹಿಸಲು ಸೂಚಿಸಿದರು.
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಪೂರಕವಾದ ರೀತಿಯಲ್ಲಿ ಈ ಕಾರ್ಯಕ್ರಮವಿರುವದರಿಂದ ಈ ಅವಕಾಶವನ್ನು ಬಳಸಿಕೊಂಡು ಮಕ್ಕಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನಿದೇರ್ಶಶಕರಾದ ಎನ್.ಎಚ್. ನಾಗೂರ ಇವರು ರಚಿಸಿದ ಬೇಸಿಗೆ ಸಂಭ್ರಮ ಗೀತೆಗೆ ವೆಂಕಟೇಶ ಅಲ್ಕೋಡ್ ಇವರು ರಾಗ ಸಂಯೋಜನೆಮಾಡಿರು ಗೀತೆಯನ್ನು ಕಾರ್ಯಕ್ರಮದಲ್ಲಿ ಪ್ರಸಾರಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ,ಎ.ಪಿ.ಸಿ.ಓ ಎಚ್.ಬಿ. ರಡ್ಡೇರ,ಮುಂತಾದವರು ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಕೆಳದಿಮಠ ಸ್ವಾಗತಿಸಿದರು ಎಸ್.ಎಸ್.ಮುಳಗುಂದಮಠ ವಂದಿಸಿದರು