ಲೋಕದರ್ಶನ
ವರದಿ
ಬ್ಯಾಡಗಿ 19:
ದೇಶದ ಆಥರ್ಿಕ ಸುಭದ್ರತೆಗೆ ಸಹಕಾರಿ ಸಂಘಗಳು ಅವಶ್ಯವಿದೆ, ಸಾರ್ವಜನಿಕರ ಸಹಕಾರ ಹಾಗೂ ಪಾರದರ್ಶಕ ಆಡಳಿತ
ನೀಡಿದಲ್ಲಿ ಸಹಕಾರಿ ರಂಗವೂ ಸಹ ಸಕರ್ಾರಗಳಿಗಿಂತ ಹೆಚ್ಚು
ಬಲಿಷ್ಠವಾಗಿ ಕೆಲಸ ಮಾಡಬಹುದಾಗಿದೆ ಈ
ನಿಟ್ಟಿನಲ್ಲಿ ನೂರು ವಸಂತ ಕಂಡಿರುವ
ಗಜಾನನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
ಒಂದು ಉತ್ತಮ ಉದಾಹರಣೆ ಎಂದು ಬ್ಯಾಂಕ್ನ ಅಧ್ಯಕ್ಷ
ಮಾಜಿ ಶಾಸಕ ಸುರೇಶಗೌಡ ಪಾಟೀಲ
ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗಜಾನನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
ಅ.27 ರಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ
ಹಿನ್ನೆಲೆಯಲ್ಲಿ ಬ್ಯಾಂಕ್ ಆವರಣದಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 1918ರಲ್ಲಿ ಕೇವಲ 1085 ರೂ.ಗಳಲ್ಲಿ ಆರಂಭವಾದ
ಗಜಾನನ ಬ್ಯಾಂಕ್ ಪೈಸೆ ಲೆಕ್ಕದಲ್ಲಿ ನಡೆಯುತ್ತಿದ್ದ
ವ್ಯವಹಾರವನ್ನೂ ಸಹ ಕಂಡಿದ್ದು ಇದೀಗ
ಕೋಟಿಗಟ್ಟಲೇ ಭಂಡವಾಳದೊಂದಿಗೆ ಹಣಕಾಸು ವ್ಯವಹಾರ ನಡೆಸುತ್ತಿದೆ.
ವ್ಯಾಪಾರಸ್ಥರ ಸಂಜೀವಿನಿ: ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದಾಗ ಮಾತ್ರ ಸಹಕಾರಿ ಸಂಘಗಳ ಉನ್ನತಿ ಸಾಧ್ಯ, ಪಟ್ಟಣ ಪ್ರದೇಶದಲ್ಲಿನ ವ್ಯಾಪಾರಸ್ಥರ ಅಭ್ಯು ದಯಕ್ಕಾಗಿ ನಮ್ಮ ಪೂರ್ವಜರು ವ್ಯಾಪಾರಸ್ಥರ
ಪರ ಕಾಳಜಿ ತೋರಿದ ಹಿನ್ನೆಲೆಯಲ್ಲಿ ಅವರಿಗೆ ಅವಶ್ಯವಿರುವ ಹಣಕಾಸಿನ ನೆರವನ್ನು ಬ್ಯಾಂಕ್ ಮೂಲಕ ಈಡೇರಿಸಿಕೊಳ್ಳುವಂತಹ ಕಾರ್ಯದಲ್ಲಿ ಯಶಸ್ವಿಯಾಗಿದ್ಧಾರೆ.
ಇಂದಿನ ಮಟ್ಟಿಗೆ ಗಜಾನನ ಅರ್ಬನ್ ಬ್ಯಾಂಕ್ ವ್ಯಾಪಾರಸ್ಥರ ಸಂಜೀವಿನಿ ಎಂದರೂ ತಪ್ಪಾಗಲಾರದು ಎಂದರು.
ಅಲ್ಪಹಣದಲ್ಲಿ ಉತ್ತಮ ಸಾಧನೆ: ಅಂದಿನ ದಿನಗಳಲ್ಲಿ ಮುಂದಾಲೋಚನೆ ಮಾಡಿದ ಸ್ಥಳೀಯ ವರ್ತಕರು ನಮ್ಮದೇ ಆದ ಬ್ಯಾಂಕವೊಂದನ್ನು ಹೊಂದಿರಬೇಕೆಂಬ
ಕಲ್ಪನೆ ಹೊಂದಿದ್ದು ಮಾತ್ರ ಅತ್ಯದ್ಭುತವಾಗಿದ್ದು, ಪಟ್ಟಣದ ಜನರ ಸಹಕಾರದೊಂದಿಗೆ ಇಂದು
ಗಜಾನನ ಅರ್ಬನ್ ಬ್ಯಾಂಕ್ ಸಾಕಷ್ಟು ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದರು.
ಬಂಡವಾಳ ಶಾಹಿಗಳು ಸೇರ್ಪಡೆಯಾಗಲಿ: ಪಟ್ಟಣ ಪ್ರದೇಶದಲ್ಲಿ ಸಹಕಾರಿ ಸಂಘವೊಂದು ಉತ್ತಮ ಬೆಳವಣಿಗೆ ಕಂಡುಕೊಂಡಿದೆ ಎಂದರೆ ಅದರ ಆಡಳಿತ ಮಂಡಳಿ
ಸದಸ್ಯರು, ಪ್ರಜ್ಞಾವಂತರಿದ್ದಾರೆ
ಎಂದು ತಿಳಿದುಕೊಳ್ಳಬೇಕಿದೆ ಈ ಎಲ್ಲ ಕಾರಣಗಳಿಂದ
ಹೆಚ್ಚಿನ ಸಂಖ್ಯೆಯಲ್ಲಿರುವ ಬಂಢವಾಳ ಶಾಹಿಗಳು ಊರಿನಲ್ಲೇ ಲಭ್ಯವಿರುವ ಬ್ಯಾಂಕನಲ್ಲಿ ಹಣ ಹೂಡಿಕೆ ಮಾಡಿದಲ್ಲಿ
ನಿಮ್ಮ ಬಂಡವಾಳ ನಮ್ಮೂರಿನ ಜನರ ಆಥರ್ಿಕ ಪ್ರಗತಿಗೆ
ಸಹಕಾರಿಯಾಗಲಿದೆ ಎಂದರು.
ವಿಶ್ವಾಸಪೂರ್ವಕವಾಗಿ ಹಣ ತೊಡಿಸಿ: ಆಡಳಿತಾರೂಢ
ಸಕರ್ಾರಗಳು ಬ್ಯಾಂಕಗಳನ್ನು ಆಥರ್ಿಕವಾಗಿ ಸದೃಡಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸದ ಸಂಗತಿ, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ಸಹಕಾರಿ
ವ್ಯವಸ್ಥೆಯಲ್ಲಿ ಲಭ್ಯವಿದೆ, ಇದನ್ನು ಸದ್ಭಳಕೆ ಮಾಡಿಕೊಳ್ಳಲು ಎಲ್ಲರೂ ಮನಸ್ಸು ಮಾಡಬೇಕಿದೆ ತಮಗೆ ಬಂದಂತಹ ಅದಾಯದ
ಹಣವನ್ನು ವಿಶ್ವಾಸಪೂರ್ವಕವಾಗಿ ಬ್ಯಾಂಕನಲ್ಲಿ ಹೂಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್
ಉಪಾಧ್ಯಕ್ಷ ಸಿ.ಆರ್.ಪಾಟೀಲ,
ನಿದರ್ೇಶಕರಾದ ಬಿ.ಡಿ.ಮಾಳೇನಹಳ್ಳಿ,
ಮನೋಹರ ಅಕರ್ಾಚಾರಿ, ಸುರೇಶಗೌಡ ಜೆ. ಪಾಟೀಲ, ಮಂಜುನಾಥ
ಗದಗಕರ, ಅಂಬಾಲಾಲ್ ಜೈನ್ ವ್ಯವಸ್ಥಾಪಕಿ ಉಮಾದೇವಿ
ಕುಂದೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.