ಗದಗ: ಯುವನಿಧಿ ಯೋಜನೆಯಲ್ಲಿ ಈಗಾಗಲೇ ನೋಂದಾಯಿಸಿಕೊಂಡು ಹಣ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ವರ್ಷದಲ್ಲಿ 4 ಬಾರಿ ಸ್ವಯಂ ಘೋಷಣೆಯನ್ನು ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ದಿನಾಂಕ 25 ರೊಳಗಾಗಿ ಸ್ವಯಂ ಘೂಷಣೆಯನ್ನು ನೀಡಬೇಕು.
ಮಾರ್ಚ್-2025, ಎಪ್ರೀಲ್-2025, ಮೇ-2025 ಈ ಮೂರು ತಿಂಗಳ ಸ್ವಯಂ ಘೋಷಣೆಯನ್ನು ಮೇ-2025ರ ಮಾಹೆಯಲ್ಲಿ ಸ್ವಯಂ ಘೋಷಣೆಯನ್ನು ನೀಡಬೇಕು. ಈ ತ್ರೈಮಾಸಿಕದ ಸ್ವಯಂ ದೃಢೀಕರಣವನ್ನು ಸಲ್ಲಿಸಲು ಮೇ.25 ಕ್ಕೆ ಕೊನೆಗೊಳ್ಳುತ್ತಿದ್ದು, ಯುವನಿಧಿ ಯೋಜನೆಯ ಫಲಾನುಭವಿಗಳು ನಿಗದಿತ ದಿನಾಂಕದೊಳಗೆ ಸೇವಾ ಸಿಂಧು ಪೋರ್ಟಲ್ ಲಾಗಿನ್ನಲ್ಲಿ ಅರ್ಜಿ ಸ್ಥಿತಿಯನ್ನು ಪರೀಶೀಲಿಸಿ ದಾಖಲೆ ಪರೀಶೀಲನೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 215 ಇಲ್ಲಿಗೆ ಖುದ್ದಾಗಿ ಸಂಪರ್ಕಿಸಿ ತಮ್ಮ ದಾಖಲೆಗಳನ್ನು ಪರೀಶೀಲಿಸಿ ದೃಢೀಕರಿಸಿಕೊಳ್ಳಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಃ 08372-220609. ಗೆ ಸಂಪರ್ಕಿಸಲು ಗದಗ ತಾಲ್ಲೂಕಾಮಟ್ಟದ ಪಂಚಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಅವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.