ಲೋಕದರ್ಶನ ವರದಿ
ಸಂಬರಗಿ: ಜಂಬಗಿ ಗ್ರಾಮದ ಹೊರವಲಯದ ತೋಟದ ವಸತಿ ಬದಿಗಿರುವ ತೆರೆದ ಬಾವಿಯಲ್ಲಿ ಈಜಲು ಹೋದಾಗ ಸುಶ್ಮಾ ಶಿವಾಜಿ ಭೋಸಲೆ, ವಯಸ್ಸು:13 ಬಾಲಕಿ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ಕುಮಾರಿ ಸುಶ್ಮಾ ಭೋಸಲೆ ರವಿವಾರ ಬೆಳಿಗ್ಗೆ 8 ಗಂಟೆಗೆ ತಮ್ಮ ಮನೆ ಪಕ್ಕದಲ್ಲಿರುವ ತೆರೆದ ಬಾವಿಯಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಮನೆಯ ಪರಿವಾರದವರು ಸುತ್ತಮುತ್ತಲು ಬಾಲಕಿಯನ್ನು ಹುಡುಕಾಡಿದರೂ ಕಂಡು ಬಂದಿಲ್ಲ. ಆದರೆ ತೆರೆದ ಬಾವಿಯಲ್ಲಿ ಶವಕಂಡಿತು. ಸ್ಥಳಕ್ಕೆ ಅಥಣಿ ಪೋಲಿಸರು ಧಾವಿಸಿ ಪರಿಶೀಲನೆ ಮಾಡಿ ಕ್ರಮ ಕೈಗೊಂಡರು. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.