ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳ ನೈಜ ವರದಿ ನೀಡಿ


ಹಾವೇರಿ: ಜಿಲ್ಲೆಯಲ್ಲಿ ಸುಸ್ಥತಿಯಲ್ಲಿರುವ ಹಾಗೂ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನೈಜ ವರದಿಯನ್ನು ಎರಡು ದಿನಗಳಲ್ಲಿ ತಯಾರಿಸಿ ಡಿಸೆಂಬರ್ 26 ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಂಣದಲ್ಲಿ ಸೋಮವಾರ ಜಿಲ್ಲೆಯ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ಘಟಕಗಳ ಬಗ್ಗೆ ರಾಜ್ಯದಲ್ಲಿ ಆಕ್ಷೇಪಗಳು ಕೇಳಿ ಬರುತ್ತಿವೆ. ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಘಟಕಗಳ ಅಳವಡಿಕೆಯಲ್ಲಿ ಹಗರಣಗಳಾಗಿ ರಾಜ್ಯ ಬೊಕ್ಕಸದ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆಪಾದನೆಗಳಿವೆ. ಹಾಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಆಯಾ ಗ್ರಾಮ ಪಂಚಾಯತಿ ಪಿ.ಡಿ.ಓ.ಗಳು ಸವರ್ೇ ನಡೆಸಿ ಪ್ರಾಮಾಣಿಕ ವರದಿ ಸಲ್ಲಿಸಲ್ಲಿಸಬೇಕು. ಯಾರದೋ ತಪ್ಪಿಗೆ ಸುಳ್ಳು ಮಾಹಿತಿ ನೀಡಿದಲ್ಲಿ ಅಂತವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

10 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ ಜಿ.ಪಂ.ಮುಖ್ಯ ಕಾರ್ಯನಿವರ್ಾಹ ಅಧಿಕಾರಿ ರಮೇಶ್ ದೇಸಾಯಿ  ಅವರು, ಈಗಾಗಲೇ 4 ತಂಡಗಳನ್ನು ರಚಿಸಿ ಶುದ್ಧ ಕುಡಿಯುವ ನೀರಿನ ಘಟಕಗಳ ಸವರ್ೆ ಮಾಡಲಾಗಿದೆ ಎಂದ ಅವರು ಈಗಾಗಲೇ 16 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗಿದೆ. 10 ಹೊಸ ಯೋಜನೆಗಳ ನೀಲನಕ್ಷೆ ತಯಾರಿಸಿ ಸಕರ್ಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು  ಸಭೆಯಲ್ಲಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಕರ್ಾರದ ಕಾರ್ಯದಶರ್ಿ ಎಲ್.ಕೆ.ಆತೀಕ್ ಅವರು ಮಾತನಾಡಿ, ರಾಜ್ಯದಲ್ಲಿ 5 ಸಾವಿರ ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಹೊಸ ಪ್ರಸ್ತಾವನೆಗಳಿಗೆ ಆಥರ್ಿಕ ಇಲಾಖೆ ಅನುಮತಿ ಪಡೆಯಬೇಕಾಗಿದ್ದರಿಂದ ಸಣ್ಣ ಸಣ್ಣ  ಯೋಜನೆಗಳ ಬದಲು ಸುತ್ತಮುತ್ತಲಿ ಗ್ರಾಮಗಳ ವಿಸ್ತೃತ ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

  ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿಮರ್ಾಣಕ್ಕೆ ಕೇಂದ್ರ ಸಕರ್ಾರ 20 ಲಕ್ಷ ಅನುದಾನ ನೀಡಿದೆ. ಜಿಲ್ಲೆಯ 35 ಪಂಚಾಯಿತಿಗಳು ಮಾತ್ರ ಯೋಜನೆ ತಯಾರಿಸಿವೆ. ಉಳಿದ 169 ಗ್ರಾ.ಪಂ.ಗಳಲ್ಲಿ ಜಾಗದ ಕೊರತೆ ಇರುವುದನ್ನ ಗಮನಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಕ್ತ ಜಾಗ ಗುರುತಿಸಿ ಗ್ರಾ.ಪಂ.ಗಳಿಗೆ ನೀಡುವಂತೆ ನಿದರ್ೇಶನ ನೀಡಿದರು. ಕೊಪ್ಪಳ ಹುಲಿಗಿ ಘನ ತಾಜ್ಯ ವಿಲೇವಾರ ಘಟಕದಂತೆ ಕ್ಲಸ್ಟರ್ ಮಾದರಿ ಘಟಕಗಳ ನಿಮರ್ಾಣಕ್ಕೆ ಯೋಜನೆ ತಯಾರಿಸುವಂತೆ ಸಲಹೆ ನೀಡಿದರು.

ಬರಗಾಲದ ಟಾಸ್ಕ್ ಫೋಸರ್್ ಹಣ ಬಿಡಗಡೆಗೆ ಒತ್ತಾಯ: ಕಳೆದ ಬರಗಾಲದಲ್ಲಿ ಟಾಸ್ಕ್ ಫೋಸರ್್ ಅಡಿ ಕೈಗೊಂಡ ಕಾಮಗಾರಿಗಳ ಬಾಕಿ ಇರುವ 12 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಜಿ.ಪಂ.ಮುಖ್ಯ ಇಂಜಿನಿಯರ್ ಹಂಚಿಮನಿ ಸಚಿವರಿಗೆ ಮನವಿ ಮಾಡಿದರು.

12 ಸಾವಿರ ಶೌಚಾಲಯ ನಿಮರ್ಾಣದ ಗುರಿ: ಹಾವೇರಿ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 12,878 ಹೊಸ ಶೌಚಾಲಯ ನಿಮರ್ಾಣ ಗುರಿಯನ್ನು ಜಿಲ್ಲೆಗೆ ನೀಡಲಾಗಿದೆ. ಇದರಂತೆ 8604 ಶೌಚಾಲಯಗಳನ್ನು ನಿಮರ್ಿಸಲಾಗಿದ್ದು, 2066 ಶೌಚಾಲಯಗಳ ನಿಮರ್ಾಣ ಬಾಕಿ ಇವೆ. 2208 ಅನರ್ಹ ಪಲಾನುಭವಿಗಳನ್ನು ಕಡಿತಗೊಳಿಸಿ ಸಕರ್ಾರಕ್ಕೆ ವರದಿ ನೀಡಲಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯನಿವರ್ಾಹ ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ಅನರ್ಹಫಲಾನುಭವಿಗಳನ್ನು ಗುರುತಿಸಿ ಪಟ್ಟಿಯಿಂದ ನಿಷ್ಕ್ರಮಣೆ ಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಚಿವ ಕೆ.ಎಸ್.ಈಶ್ವರಪ್ಪನವರು, ಮಾಚರ್್ ಅಂತ್ಯದ ಒಳಗಾಗಿ ಬೆಸ್ಲೈನ್ ಸವರ್ೆ ಆಧರಿಸಿ ಹೊಸ 6000 ಸಾವಿರ ಶೌಚಾಲಯಗಳನ್ನು ನಿಮರ್ಿಸುವಂತೆ ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೂ ಸೇನಾ ನಿಗಮ ಕಚೇರಿಗೆ ನಿಮರ್ಾಣಕ್ಕೆ ಸ್ಥಳ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಾವೇರಿ ಹಾಗೂ ರಾಣೇಬೆನ್ನೂರಿನಲ್ಲಿ ಭೂ ಸೇನಾ ನಿಗಮ ಕಚೇರಿಗೆ ನಿಮರ್ಾಣಕ್ಕೆ ಸ್ಥಳ ನೀಡುವಂತೆ ಸಚಿವರು ಜಿಲ್ಲಾಧಿಕಾರಿಗಳ ಸೂಚನೆ ನೀಡಿದರು. 

ಶಾಸಕರ ಅನುದಾನ ಬಳಕೆಗೆ ಸೂಚನೆ: ಘನತ್ಯಾಜ್ಯ ವಿಲೇವಾರಿ ಘಟಕ, ಸೋಲಾರ್ ಅಳವಡಿಕೆ ಹಾಗೂ ಗ್ರಾ.ಪಂ. ಕಟ್ಟಗಳ ನಿಮರ್ಾಣಕ್ಕೆ ನಿಯಮಾನುಸಾರ ಶಾಸಕರ ಅನುದಾನ ಬಳಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ ಸಚಿವರು ಎಪ್ರಿಲ್ ಮೊದಲವಾರ ಜಿಲ್ಲೆಗೆ ಭೇಟಿ ನೀಡುವೆ. ಈ ಎಲ್ಲ ಯೋಜನೆಗಳ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿ.ಪಂ.ಸದಸ್ಯ ಸಿದ್ದರಾಜ್ ಕಲಕೋಟಿ ಹೊಸರಿತ್ತಿ, ಕಬ್ಬರೂ ಹಾಗೂ ವಾಹನೂರು ಗ್ರಾಮಗಳನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸೇರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಕನರ್ಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿ.ಪಂ.ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ,  ಗ್ರಾಮೀಣಾಭಿವೃಧ್ಧಿ ಇಲಾಖೆಯ ಇಂಜನೀಯರ್  ಪ್ರಕಾಶ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಜಿ.ಪಂ.ಸದಸ್ಯರು, ಜಿ.ಪಂ. ಮುಖ್ಯ ಯೋಜನಾಧಿಕಾರಿ ಕುಮಾರ ಮಣ್ಣವಡ್ಡರ, ಮುಖ್ಯ ಲೆಕ್ಕಾಧಿಕಾರಿ ಜಾಫರ ಸುತಾರ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು