ಯರಗಟ್ಟಿ, 07 : ಸ್ವಾಮಿ ಎಂದರೆ ಒಡೆಯ, ಮಾಲಿಕ, ಗಂಡ, ಯಜಮಾನ ಎಂದು ಮೈಸೂರು ನಗರಗಳಲ್ಲಿ ಎಲ್ಲರಿಗೂ ಸ್ವಾಮಿ ಎನ್ನುತ್ತಾರೆ. ಹಾಗಾದರೆ ಯಾವುದಕ್ಕೆ ಒಡೆಯ, ಯಾವುದಕ್ಕೆ ಸ್ವಾಮಿ ಬಹುತಿಕ ಪ್ರಪಂಚ ಆಸ್ತಿ ಪಾಸ್ತಿಗಳಿಗೆ ಸ್ವಾಮಿ ಆಗುದಕ್ಕಿಂತ ಒಡೆಯ ಆಗುವುದಕ್ಕಿಂತ ತನ್ನ ಮನಸ್ಸಿಗೆ ಸ್ವಾಮಿ ಆಗುವುದು ಬಹಳ ಮುಖ್ಯ. ಮಠದೊಳಗೆ ರಾಜಕೀಯ ಪ್ರವೇಶ ಆಗಬಾರದು. ಉದಾಹರಣೆಗೆ ಮಠಕ್ಕೆ ಬರಬೇಕಾದ್ರೆ, ದೇವಸ್ಥಾನಕ್ಕೆ ಬರಬೇಕಾದ್ರೆ, ಗುರುಗಳ ದರ್ಶನಕ್ಕೆ ಬರಬೇಕಾದ್ರೆ, ಚಪ್ಪಲಿ ಹಾಕಿಕೊಂಡು ಬಂದರೆ ಹೊರಗೆ ಬಿಟ್ಟು ಬರುವುದು.
ಮೊದಲನೆಯ ಮಾತು ಚಪ್ಪಲಿನಂಗೆ ಇನ್ನು ಎರಡು ಹೋರಗೆ ಬಿಟ್ಟುಬರಬೇಕು ಅವು ಯಾವವು ಎಂದರೆ ಒಂದನೆಯದು ಜಾತಿ ಎರಡನೆಯದು ರಾಜಕೀಯ ಇವು ಎರಡು ಚಪ್ಪಲಿ ಇದ್ದ ಹಾಗೆ ಹಾಗೂ ದೇವರ ಕೋಡುವಾಗ ಓಳ್ಳೆದನ್ನು ಬೇಡಿಕೋಳ್ಳುವುದು ದೇವರ ಸ್ತುತಿಗಳನ್ನು ಬೇಡಿಕೋಳ್ಳುವುದೆಲ್ಲಾ ಒಳ್ಳೆಯದಾಗುತ್ತದೆ. ಈ ಭುಮಿ ಮೇಲೆ ಗಂಡ -ಹೆಂಡತಿಯರ ಜಗಳ ಆಡುವಾಗ ಅದನ್ನು ಮಗ ನಿಂತ ನೋಡುವಾಗ ನಂದಿ ಮೇಲೆ ಕುಳಿತುಕೊಂಡು ಪಾರ್ವತಿ ದೃಷ್ಠಿ ಬಿತ್ತು ಅದನ್ನು ಪರಮಾತ್ಮನಿಗೆ ಹೇಳಿದನು. ಆಗ ಪರಮಾತ್ಮ ಹೇಳುತ್ತಾನು ಈಗಿಂದ ಇಗಲೇ ಭೂಮಿಗೆ ಹೋಗೋನ ಎಂದಳು. ಗಂಡ-ಹೆಂಡತಿ ಜಗಳ ಬೀಡಿಸಿ ಅವರು ಏನು ಕೇಳುತ್ತಾರೆ ಅದನ್ನು ವರಾ ಕೋಟ್ಟು ಬರುನಾ ಅಂತ ಪರಮಾತ್ಮ ಪಾರ್ವತಿಗೆ ಹೇಳಿದರು. ಎಂದು ಅಂತೂರ-ಬೆಂತೂರ ಕೂಮಾರ ದೇವರು, ಚರಂತಯ್ಯ ದೇವರು ಮತ್ತು ಭಾಗೋಜಿಕೊಪ್ಪ ಶ್ರೀಗಳು ಹಾಗೂ ಸಂಗೀತ ಬಳಗದವರು ಆಶೀರ್ವಚನ ನೀಡಿದರು.
ಚಂದ್ರಶೇಖರ ಶಿವಚಾರ್ಯ ಮಹಾಸ್ವಾಮಿಗಳು ಗುರುಶಾಂತೇಶ್ವರ ಹಿರೇಮಠ ಹುಕ್ಕೇರಿ ಇವರು ನಿಜವಾಗಿಯು ಚರಂತಯ್ಯ ದೇವರ ಆಸ್ತಿ ಎಂದರೆ ಸದ್ಭಕ್ತರ ಭಕ್ತಿನೇ ಅವರ ಆಸ್ತಿ. ಭಕ್ತರು ಸ್ತುತಿ ಸಂಕಲ್ಪ ಹಾಗೂ ಗುರುಕೃಪೆಯಿಂದ ಹಲವಾರು ಅಪೇಕ್ಷೆಗಳನ್ನು ಒಳಗೋಂಡಿದೆ ಎಂದು ಆಶೀರ್ವಚನದ ಮೂಲಕ ತಿಳಿಸಿದರು.
ಇದೇ ವೇಳೆಯಲ್ಲಿ ಸಿದ್ಲಿಂಗಮ್ಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ಈ ವೇಳೆ 400 ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿಯನ್ನು ತುಂಬಲಾಯಿತು.ಈ ಸಂದರ್ಭದಲ್ಲಿ, ಕೋಟುರ, ಶಿವಾಪೂರ, ಕಡಬಿ, ಗೋರಗುದ್ದಿ, ಬೋಳಕಡಬಿ, ಯರ್ಝರ್ವಿ, ಮಾಡಮಗೇರಿ, ಯರಗಣವಿ, ತಾವಲಗೇರಿ, ಕುರುಬಗಟ್ಟಿ ಗ್ರಾಮಗಳ ಭಕ್ತಾಧಿಗಳು ಪಾಲ್ಗೋಂಡಿದ್ದರು ಮಹಾದೇವ ಪೋಲಿಸ್, ಬಸವಂತಪ್ಪ ಇಂಚಲ, ವಿರುಪಾಕ್ಷಿ ಕೋಳವಿ, ಈರ್ಪ ಜಕ್ಕನ್ನವರ, ಪತ್ರಯ್ಯ ಪೂಜೇರಿ, ಸಿದ್ಲಿಂಗಯ್ಯ ಪೂಜೇರಿ,ಕಲ್ಪನಾ ವಸ್ತ್ರದ, ಪಾರ್ವತಿ ಹಂಜಿ, ಗಿರಿಜಾ ವಾಲಿ, ಅನಿತಾ ಇತಾಪಿ, ದೀಪಿಕಾ ಮಠಪತಿ, ಹಲವಾರು ಭಕ್ತಾಧಿಗಳು ಪಾಲ್ಗೋಂಡದ್ದರು.