ಒಳ್ಳೆಯ ಕಾರ್ಯಗಳಿಂದ ಹೆಸರು ಚಿರಸ್ಥಾಯಿ ಸಾಧ್ಯ: ಮನ್ನೀಕೇರಿ

ಲೋಕದರ್ಶನ ವರದಿ

ಯರಗಟ್ಟಿ 11: ಬದುಕಿನಲ್ಲಿ ಎಲ್ಲರ ಹೆಸರು ಕೊನೆಯ ಕಾಲ ಉಳಿಯಲಾರದು. ಯಾರು ತಮ್ಮಲ್ಲಿ ಉತ್ತಮ ಸಂಸ್ಕಾರ, ಒಳ್ಳೆಯ ಕಾರ್ಯದ ಮೂಲಕ ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳುವರೋ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವುದು. ನಮ್ಮ ವ್ಯಕ್ತಿತ್ವ, ಪರಂಪರೆ ಸದಾಕಾಲ ಉಳಿಯುವ ಅಸ್ತಿತ್ವಕ್ಕಾಗಿ ಸ್ವಯಂ ಅಭಿವೃದ್ಧಿ ತರಬೇತಿ ಅವಶ್ಯ.

ತರಬೇತಿಯಿಂದ ನಮ್ಮ ಸಾಲೆಯ ಮಕ್ಕಳಿಗೆ, ಜೊತೆಗೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ದೊರೆತರೆ ತರಬೇತಿ ಪಡೆದದ್ದು ಸಾರ್ಥಕ. ನಿಟ್ಟಿಯಲ್ಲಿ ತರಬೇತಿ ಹೊಂದಿ ಶಾಲೆಯಲ್ಲಿ ಅಳವಡಿಸಿಕೊಳ್ಳುವಂತಾಗಲಿ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ, ಬೆಳಗಾವಿ ಉಪನಿದರ್ೇಶಕರು ಅಭಿವೃದ್ಧಿ ಹಾಗೂ ಪ್ರಾಂಶುಪಾಲ ಗಜಾನನ ಮನ್ನೀಕೇರಿ ತಿಳಿಸಿದರು.

   ಅವರು ಯರಗಟ್ಟಿಯ ಬಸವೇಶ್ವರ ಪ್ರೌಢಶಾಲೆಯಲ್ಲಿ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಮೂರು ದಿನಗಳ ಕಾಲ ಜರುಗುವ ಸ್ವಯಂ ಅಭಿವೃದ್ಧಿ ತರಬೇತಿ ಕಾಯರ್ಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು

   ಸಿಸ್ಲೇಪ್ ಸಹಾಯಕ ನಿದರ್ೇಶಕ ಲಕ್ಷ್ಮೀದೇವಿ ಭಗವತಿ ಮಾತನಾಡಿ ಗುಣಾತ್ಮಕ ಶಿಕ್ಷಣವೇ ನಮ್ಮ ಗುರಿಯಾಗಿದೆ. ಇದು ಸಾಧನೆಯಾಗಬೇಕಾದರೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಾಮಥ್ರ್ಯ ಸ್ವಯಂ ಅಭಿವೃದ್ದಿಯಾಗಬೇಕು. ಕಾರಣ ತರಬೇತಿಯನ್ನು ಇಲಾಖೆಯಿಂದ ನೀಡಲಾಗುತ್ತಿದೆ. ತರಬೇತಿಯಲ್ಲಿ ಐದು ಕ್ಷೇತ್ರಗಳ ಬಗ್ಗೆ ಚರ್ಚೆಸಲಾಗುವುದೆಂದು ತಿಳಿಸಿದರು.

ಮತ್ತೋರ್ವ ಸಿಸ್ಲೇಪ್ ಸಹಾಯಕ ನಿದರ್ೇಶಕ ಸ್ವರೂಪ್ ಶೀಲಾ ಎಚ್.ವಿ. ಮಾತನಾಡಿ ಮೂರು ದಿನಗಳ ಕಾಯರ್ಾಗಾರದಲ್ಲಿ ಅಸ್ತಿತ್ವ, ನವೀನ ಶಿಕ್ಷಕರು, ಅನುಭೂತಿ, ಸಮಗ್ರ ಶಿಕ್ಷಣ ಹಾಗೂ ಸಮನ್ವಯ ಶಿಕ್ಷಣ, ನಾಯಕತ್ವ. ಅಂಶಗಳ ಕುರಿತು ಚಚರ್ಿಸಲಾಗುವುದು. ಇಲ್ಲಿ ಆಗಮಿಸಿರುವ ಮುಖ್ಯೋಪಾಧ್ಯಾಯರು ತಮ್ಮ ಅನುಭವಗಳೊಂದಿಗೆ ಅಂಶಗಳನ್ನು ಬದುಕಿನಲ್ಲಿ ಮೇಳೈಸುವ ಮೂಲಕ ತರಬೇತಿಯನ್ನು ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸಿ ಎಂದು ಕರೆ ನೀಡಿದರು..

ಡೈಟ್ ಹಿರಿಯ ಉಪನ್ಯಾಸಕರಾದ ರಾಜೇಂದ್ರ ತೇರದಾಳ, .ಬಿ.ಅಡಕಿ, ಸಿಸ್ಲೇಪ್ ಸಹಾಯಕ ನಿದರ್ೇಶಕರಾದ ಲಕ್ಷ್ಮೀದೇವಿ ಭಗವತಿ, ಸ್ವರೂಪ್ಶೀಲಾ ಎಚ್.ವಿ. ಸಂಪನ್ಮೂಲ ವ್ಯಕ್ತಿಗಳಾದ ಆರ್.ಟಿ.ಬಳಿಗಾರ, ಆರ್.ಆರ್.ಸದಲಗಿ, ಆರ್.ಕೆ.ಅಂಜನೇಯ, ಸುಜಾತಾ ಬಾಳೇಕುಂದರಗಿ, ಪ್ರಕಾಶ ಡೊಂಬರ್ ಬಸವೆಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಆಲದಕಟ್ಟಿ ಉಪಸ್ಥಿತರಿದ್ದರು. ಬಸವೇಶ್ವರ ಪ್ರೌಢಶಾಲೆಯ ವಿದ್ಯಾಥರ್ಿನಿಯರಿಂದ ಪ್ರಾರ್ಥನೆ ಜರುಗಿತು. ಆರ್.ಆರ್. ಸದಲಗಿ ನಿರೂಪಿಸಿದರು. ಆರ್.ಟಿ.ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಬಾಳೇಕುಂದರಗಿ ವಂದಿಸಿದರು.