ಲೋಕದರ್ಶನ ವರದಿ
ಕೊಪ್ಪಳ 15: ಕೊಪ್ಪಳ ನಗರದ ಮುಖ್ಯವಾದ ಹಳೆಯ ಕಾಲೇಜಿಗೆ ಮೂಲ ಸೌಕರ್ಯ ಸರಿಮಾಡಲು ಕಾಲೇಜಿನ ಪ್ರಾಂಶುಪಾಲರೇ ಅಡ್ಡಿಯಾಗಿದ್ದು, ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಕಾಲೇಜಿಗೆ ಬೇರೆ ಪ್ರಾಂಶುಪಾಲರನ್ನು ವರ್ಗ ಮಾಡಲು ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೌಖಿಕವಾಗಿ ಶಾಸಕರಿಗೆ ಮತ್ತು ಡಿಡಿಪಿಯು ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಲೇಜಿಗೆ ಉಪಾಧ್ಯಕ್ಷನಾಗಿ ಒಂದು ವರ್ಷ ಕಳೆದರೂ ಅಂದುಕೊಂಡ ಪ್ರಗತಿ ಮಾಡಲು ಸಾಧ್ಯವೇ ಆಗಿಲ್ಲ. ತುಂಬಾ ನಿರೀಕ್ಷೆ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದು, ಮಕ್ಕಳ ಸಂಪೂರ್ಣ ಬೆಳವಣಿಗೆಯ ಹಿತದೃಷ್ಟಿಯಿಂದ ಹಾಗೂ ಕಾಲೇಜಿನ ಆಂತರಿಕ ಅಸಮತೋಲನ ಸರಿಪಡಿಸಲು ತುತರ್ಾಗಿ ಪ್ರಾಂಶುಪಾಲರನ್ನು ಬದಲಿಸಬೇಕು, ದೊಡ್ಡ ಕಾಲೇಜು ಆಗಿರುವದರಿಂದ ಯುವ ಉತ್ಸಾಹಿ ಪ್ರಾಂಶುಪಾಲರನ್ನು ನೇಮಿಸಿಕೊಡಬೇಕು ಎಂದು ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ವರ್ಷದ ವೈಫಲ್ಯಗಳು: ಕಾಲೇಜಿಗೆ ಕಳೆದ ವರ್ಷ ಮಾಡಬೇಕಿರುವ ಎಲ್ಲಾ ಕಾರ್ಯದಲ್ಲಿ ವಿಫಲವಾಗಿದ್ದಾರೆ. ಕಾಲೇಜಿನ ಈ ವರ್ಷದ ಪಾಸ್ ಆಗಿರುವ ಮಕ್ಕಳ ಮತ್ತು ಪ್ರಗತಿಯ ಕುರಿತು ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರಿಗೆ ಮಾಹಿತಿಯನ್ನು ಕೇಳಿದರೂ ಸಹ ಇದುವರೆಗೂ ಕೊಟ್ಟಿರುವದಿಲ್ಲ.
ಕಳೆದ 2018-19 ನೇ ಸಾಲಿನಲ್ಲಿ ಕಾಲೇಜಿನ ಸ್ವಾಗತ ಸಮಾರಂಭ, ಬೀಳ್ಕೊಡುವ ಸಮಾರಂಭ ಮಾಡಲಿಲ್ಲ. ಎನ್ಎನ್ಎಸ್, ಸ್ಕೌಟ್ಸ್ ಗೈಡ್ಸ್ ಶುಲ್ಕ ಪಡೆದರೂ ಆರಂಭಿಸಲೇ ಇಲ್ಲ. ಸಾಂಶ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗೆ ಶುಲ್ಕ ಪಡೆದರೂ ಅದನ್ನು ಉಪಯೋಗಿಸಿಲ್ಲ, ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಿಲ್ಲ. ಕಾಲೇಜು ಪ್ರೌಢ ಶಾಲೆಯಿಂದ ಬೇರ್ಪಟ್ಟ ಮೇಲೆ ಒಂದು ಸರಿಯಾದ ಧ್ವಜಾರೋಹಣ ಮಾಡಿಲ್ಲ. ಆಡಳಿತ ಮಂಡಳಿಯವರನ್ನು ಕರೆದಿಲ್ಲ. ಗ್ರಂಥಾಲಯ ಸರಿಯಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಹೊಸ ಕಟ್ಟಡದ ಗಾಜು ಒಡೆದರೂ, ಅಲ್ಲಿಯೇ ಜನರು ಪ್ರತಿದಿನ ಜೂಜಾಡುತ್ತಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಸಿದ್ಧತೆಯನ್ನು ಮಾಡಿಸಿದ್ದರೂ, ಸ್ವತಃ ಶಾಸಕರೇ ಕಾರ್ಯಕ್ರಮಕ್ಕೆ ಬಂದರೂ ವಿದ್ಯಾಥರ್ಿಗಳನ್ನು ಸೇರಿಸದೇ ಕಾರ್ಯಕ್ರಮ ವೈಫಲ್ಯಕ್ಕೆ ಕಾರಣರಾದರು. ವಿದ್ಯಾಥರ್ಿಗಳಿಗೆ ಅನಾವಶ್ಯಕವಾಗಿ ಕೆಲಸ ಮಾಡಿಕೊಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಅದೇ ರೀತಿ ಪೂರ್ಣ ಪ್ರಮಾಣದ ಉಪನ್ಯಾಸಕರ ಸಂಬಳ ಸಹ ಮೇ 15 ಕಳೆದರೂ ಆಗಿರುವದಿಲ್ಲ, ಪ್ರಾಂಶುಪಾಲರ ಸಂಬಳ ಮಾತ್ರ ಆಗಿದೆ. ಕಾಲೇಜಿನ ಸಿಬಿಸಿ ಸಮಿತಿಯಲ್ಲಿರುವ ಹಣ, ಬಳಕೆ ಮತ್ತು ಜಮಾ ಕುರಿತು ಮಾಹಿತಿ ಕೇಳಿ 6 ತಿಂಗಳು ಕಳೆದರೂ ಮಾಹಿತಿ ನೀಡಿಲ್ಲ. ಆರ್ಟಿಐ ಅಡಿಯಲ್ಲಿ ಕಾಲೇಜಿನ ಅಭಿವೃದ್ಧಿ ಮಂಡಳಿಯವರು ಮಾಹಿತಿ ಕೇಳುವ ಪರಿಸ್ಥಿತಿ ನಿಮರ್ಾಣವಾಗಿದ್ದು, ದೊಡ್ಡ ಸಂಖ್ಯೆಯ ವಿದ್ಯಾಥರ್ಿಗಳು ಇರುವ ಕಾಲೇಜಿನ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡದ ಇವರು, ಕಾಲೇಜಿನ ಸಿಬಿಸಿ ಅರೆಕಾಲಿಕ ಉಪನ್ಯಾಸಕರ ಸಂಬಳ ಮಾಡಲು ಸಹ ಹಣ ಕೇಳುತ್ತಾರೆ, ಯಾಕೆ ಎಂದು ಪ್ರಶ್ನಿಸಿದರೆ ಖಜಾನೆ ಇಲಾಖೆಯಲ್ಲಿ ಕೊಡಬೇಕು ಎಂದು ಸಬೂಬು ಹೇಳುತ್ತಾರೆ. ಕಾಲೇಜಿನಲ್ಲಿ ನೀರಿನ ಪೈಪು ಒಡೆದು ಹಲವು ತಿಂಗಳು ಕಳೆದರೂ ಅತ್ತ ತಿರುಗಿಯೂ ನೋಡಿಲ್ಲ, ಒಂದೆಡೆ ನೀರು ಪೋಲಾಗುತ್ತಿದೆ, ಮತ್ತೊಂದೆಡೆ ಕಾಲೇಜಿನಲ್ಲಿ ಗಲೀಜು ಹೆಚ್ಚಾಗಿ ಸೊಳ್ಳೆ ಕ್ರಿಮಿಗಳು ಬರುತ್ತಿವೆ. ಏನು ಹೇಳಿದರೂ ಕೇಳದ ಪ್ರಾಂಶುಪಾಲ ನಾಗರಾಜರಾವ್ ಕಾಲೇಜಿಗೆ ದೊಡ್ಡ ತಲೇನೋವಾಗಿದ್ದಾರೆ. ಇದು ಇಡೀ ಜಿಲ್ಲೆಯ ಕಾಲೇಜಿನವರಿಗೆ ಗೊತ್ತಿದೆ ಎಂದರೆ ಇವರು ಎಷ್ಟು ಅದ್ಭುತವಾಗಿದ್ದಾರೆ ಎಂಬುದನ್ನು ಅರಿಯಬೇಕಿದೆ.
ನೂರರಷ್ಟು ಫಲಿತಾಂಶ ತರಲು ಬೇಕಾದ ಒಂದೇ ಒಂದು ಯೋಜನೆಯನ್ನು ಮಾಡದ ಇವರನ್ನು ಕೂಡಲೇ ಯಾವುದಾದರೂ ಸಣ್ಣ ಕಾಲೇಜಿಗೆ ಕಳುಹಿಸಿ ಉತ್ತಮ ಪ್ರಾಂಶುಪಾಲರನ್ನು ಕಾಲೇಜಿಗೆ ನಿಯೋಜಿಸಿದರೆ ಖಂಡಿತ ಕಾಲೇಜಿನಲ್ಲಿರುವ ಉತ್ತಮ ಉಪನ್ಯಾಸಕ ವರ್ಗವಿದ್ದು, ಬರುವ ವರ್ಷ ನೂರರಷ್ಟು ಫಲಿತಾಂಶವನ್ನು ತರಲು ಪ್ರಯತ್ನಿಸಲಾಗುವದು. ದಯಮಾಡಿ ಇಂಥಹ ಒಂದು ಅವಕಾಶವನ್ನು ಮಾಡಿ, ಕಾಲೇಜಿಗೆ ಬೇಕಿರುವ ಕೆಲವು ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿಕೊಡಲು ಗೊಂಡಬಾಳ ಕೋರಿದ್ದಾರೆ.