ತಾಳಿಕೋಟಿ 23: ಪಟ್ಟಣದ ಸಮೀಪದ ಮಡಿಕೇಶ್ವರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದವರಾದ ಮಹೇಶ ಮಡಿವಾಳರ ಇವರು 2024- 25 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 482 ರಾಂಕ್ ಪಡೆದು ಅಭೂತೂಪರ್ವಾಗಿ ಯಶಸ್ಸನ್ನು ಸಾಧಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು, ನಿರಂತರ ಪರಿಶ್ರಮದ ಫಲವಾಗಿ ಇಂದು ನನಗೆ ಆ ಯಶಸ್ಸು ಸಿಕ್ಕಿದೆ ಈ ಸಂದರ್ಭದಲ್ಲಿ ನನಗೆ ಅತೀವ ಸಂತೋಷವಾಗಿದೆ ಎಂದರು.
ಪೀರಾಪೂರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರಿ್ಬ. ದಮ್ಮೂರಮಠ ಮಾತನಾಡಿ ಮಹೇಶ ಮಡಿವಾಳರ ಅವರು ತಮ್ಮ ವೃತ್ತಿ ಜೀವನದ ಆಚೆ ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ದೇಶದ ಅತಿ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಅವರಿಗೆ ನಾವು ಅಭಿನಂದಿಸುತ್ತೇವೆ ಎಂದರು.
ಈ ಸಮಯದಲ್ಲಿ ಅವರ ಆಪ್ತ ಬಳಗದ ವರಾದ ಮುತ್ತು ದೇಸಾಯಿ,ಸಂಗಮೇಶ ದೇಸಾಯಿ, ಟಿ.ಎಚ್. ಸುರಪೂರ, ಟಿ.ಸಿ. ಸಜ್ಜನ್, ವಿ.ಎನ್.ಯಾದಗಿರಿ, ಜಿ.ಪಿ.ಧನ ಪಾಲ ಹಾಗೂ ಮಲ್ಲು ಮಡಿವಾಳರ ಇದ್ದರು.