ಚಾಸಿಸ್ ಮೌಂಟೆಡ್ ಜೆಸ್ಟಿಂಗ್ ಮತ್ತು ಸೆಕ್ಷನ್ ಯಂತ್ರೋಪಕರಣ ವಾಹನಕ್ಕೆ ಹಸಿರು ನಿಶಾನೆ
ರಾಣಿಬೆನ್ನೂರ 12: ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಸಾರ್ವಜನಿಕರು ತಮ್ಮ ಮನೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಹಸಿ ಮತ್ತು ಒಣ ಕಸಗಳನ್ನು ಬೇರಿ್ಡಸಿ ನಿಮ್ಮ ಮನೆ ಬಾಗಿಲಿಗೆ ಬರುವ ತ್ಯಾಜ್ಯ ವಿಲೆವಾರಿ ವಾಹನಗಳಿಗೆ ನೀಡುವದರ ಮೂಲಕ ಸಹಕಾರ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಶನಿವಾರ ನಗರಸಭೆಯ ಆವರಣದಲ್ಲಿ 15ನೇಯ ಹಣಕಾಸು ಯೋಜನೇಯ ಅಡಿಯಲ್ಲಿ 48 ಲಕ್ಷ ರೂ.ಗಳ ಅನುದಾನದಲ್ಲಿ ಒಳಚರಂಡಿ ನಿರ್ವಹಣೆಗಾಗಿ 6 ಸಾವಿರ ಲೀಟರ ಸಾಮರ್ಥ್ಯವುಳ್ಳ ಟ್ರಕ್ ಚಾಸಿಸ್ ಮೌಂಟೆಡ್ ಜೆಸ್ಟಿಂಗ್ ಮತ್ತು ಸೆಕ್ಷನ್ ಯಂತ್ರೋಪಕರಣ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ 1 ವಾಹನವಿದ್ದು ಇಂದು ಲೋಕಾರೆ್ಣ ಮಾಡಿದ ವಾಹನಸೇರಿ 2ವಾಹನಗಳು ಒಳಚರಂಡಿ ನಿರ್ವಹಣೆ ಮಾಡಲು ಅನುಕೂಲವಾಗಲಿದೆ. ಮುಂದಿನ ದಿನಮಾನಗಳಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಟ್ರಕ್ ಚಾಸಿಸ್ ಮೌಂಟೆಡ್ ಜೆಸ್ಟಿಂಗ್ ಮತ್ತು ಸೆಕ್ಷನ್ ಯಂತ್ರೋಪಕರಣನ್ನು ಖರೀಧಿಸಿ 35 ವಾರ್ಡಹಳಿಗಲ್ಲೂ ಒಳಚರಂಡಿ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ಫಕ್ಕೀರ್ಪ ಇಂಗಳಗಿ, ನಗರಸಭೆಯ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಮಲ್ಲಣ್ಣ ಅಂಗಡಿ, ಶಶಿಧರ ಬಸೆನಾತ್ಕರ, ಮಲ್ಲೇಶಪ್ಪ ಮದ್ಲೇರ, ಪರಿಸರ ಅಭಿಯಂತರ ಮಹೇಶ್ವರ ಕೋಡಬಾಳ, ಮುಖಂಡರಾದ ಬಸವರಾಜ ಹುಚ್ಚಗೊಂಡರ, ರಮೇಶ ಬಿಸಲಳ್ಳಿ, ಮಧು ಕೋಳಿವಾಡ, ಶ್ರೀನಿವಾಸ ಹಳ್ಳಳ್ಳಿ, ಆರೋಗ್ಯ ನೀರೀಕ್ಷಕರು ಹಾಗೂ ಹೀರೀಯ ಮತ್ತು ಕೀರೀಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇದ್ದರು.