ಜಮಖಂಡಿ 15: ನಗರದ ತಾಲೂಕಾಡಳಿತ ಭವನದಲ್ಲಿ ನಡೆದ ಜಿಲ್ಲಾ ಲೋಕಾಯುಕ್ತರ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯು ಕಾಟಾಚಾರಕ್ಕೆ ನಡೆದಂತೆ ಇತ್ತು.
ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳು ಸಾರ್ವಜನಿಕರು ಬೇಸತ್ತು ಹೊರಹೋದಾಗ ಅಧಿಕಾರಿಗಳಿಂದ ಮಾಹಿತಿ ಪಡೆದ ಲೋಕಾಯುಕ್ತರು ಅಲ್ಲಿದ್ದ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಸಭೆಗೂ ಮುನ್ನವೇ ಸಾರ್ವಜನಿಕರ ಮಾಹಿತಿ ಪಡೆದುಕೊಳ್ಳಬೇಕು. ಕೆಲವಂದಿಷ್ಟು ಸಾರ್ವಜನಿಕರು ಅರ್ಜಿಯನ್ನು ಸಲಿಸಿದರು ಸಹ.ಸರಿಯಾದ ದಾಖಲಾತಿಗಳು ಇರುವುದಿಲ್ಲ. ಮತ್ತು ಮೂರುಬಾರಿ ಅರ್ಜಿಯನ್ನು ಸಲಿಸಿದ ದಾಖಲಾತಿ ನೀಡಿ ಎಂದು ಲೋಕಾಯುಕ್ತರು ಸಾರ್ವಜನಿಕರ ಅಹವಾಲುಗಳಲ್ಲಿ ಕೇಳಿದರು. ಮೂರುಬಾರಿ ಸಲಿಸಿದ ಅರ್ಜಿಗಳ ದಾಖಲಾತಿ ಇಲ್ಲದ ಕಾರಣ ಸಾರ್ವಜನಿಕರು ಲೋಕಾಯುಕ್ತರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು.
ಸಾರ್ವಜನಿಕರು ಯಾವ ಇಲಾಖೆಗೆ ದಾಖಲಾತಿ ನೀಡಬೇಕೆಂದು ಕೇಳಿದರು ಸಹ ಅದಕ್ಕೆ ಅವರಿಗೆ ಸರಿಯಾಗಿ ದಾಖಲಾತಿಗಳನ್ನು ನೀಡದೆ ಇದ್ದರೆ. ಸಾರ್ವಜನಿಕರು ಮೂರುಬಾರಿ ಅರ್ಜಿಯನ್ನು ಸಲಿಸಬೇಕು. ಅದಕ್ಕೆ ಅಧಿಕಾರಿಗಳು ತಮ್ಮ ಬೇಕಾದ ದಾಖಲಾತಿಗಳು ಸರಿಪಡಿಸದಿದ್ದರೆ. ಮೂರುಬಾರಿ ಸಲಿಸಿದ ಅರ್ಜಿಗಳನ್ನು ನಮ್ಮಗೆ ನೀಡಿದರೆ. ನಮ್ಮ ಲೋಕಾಯುಕ್ತ ಇಲಾಖೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ತಾಲೂಕಮಟ್ಟದ ಕೆಲವು ಅಧಿಕಾರಿಗಳು ತಮ್ಮ ಇಲಾಖೆಯ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಮಿಕ ಇಲಾಖೆಯ ಅಧಿಕಾರಿಯಿಂದ ಯಾವ ಕಡೆಗಳಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಅದರ ಬಗ್ಗೆ ಎಷ್ಟು ಪ್ರಕರಣಗಳನ್ನು ದಾಖಲು ಮಾಡಿದಿರಿ ಎಂದು ಲೋಕಾಯುಕ್ತರು ಪ್ರಶ್ನೇ ಮಾಡುತ್ತಿದಂತೆ. ಕಾರ್ಮಿಕ ಇಲಾಖೆ ಅಧಿಕಾರಿ ಸಾಕಷ್ಟು ಈ ವರ್ಷ ಪ್ರಕರಣಗಳು ಕಡಿಮೆಯಾಗಿದ್ದಾವೆ ಎಂದು ಹೇಳುತ್ತಿದಂತೆ. ತಾಲೂಕಾಡಳಿತ ಸಭಾಭವನದಲ್ಲಿ ಅಲ್ಲಿ ಓರ್ವ ಬಾಲ ಕಾರ್ಮಿಕ ಮೈಕ್‌ಸೈಟ್ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿದರು. ಅಧಿಕಾರಿಗಳು ಆತನ ಕಡೆಗೆ ಗಮನಹರಿಸದೆ ಇದ್ದರು. ನಂತರ ಆ ಬಾಲಕನನ್ನು ಸಭೆಯಿಂದ ಹೊರಕಳಿಸಿದ ಘಟನೆ ನಡೆಯಿತು.
ಲೋಕಾಯುಕ್ತರ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯ ಕುರಿತು ಪ್ರಚಾರದ ಕೊರತೆ ಹಿನ್ನೆಲೆಯಲ್ಲಿ ನೀರೀಕ್ಷಿತವಾಗಿ ಬಾರದ ಸಾರ್ವಜನಿಕರು ಒಂದೆಡೆಯಾದರೆ. ಅಧಿಕಾರಿಗಳು ಸಹ ಸರಿಯಾದ ಮಾಹಿತಿಯನ್ನು ನೀಡದೆ ಇರುವದು ಒಂದು ಕಡೆಯಾಗಿತು. ಕೆಲವಂದಿಷ್ಟು ಅಧಿಕಾರಿಗಳು ಸರಿಯಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಇದ್ದರು, ಸಹ ಕೋಟಿ ರೂ,ಮೊತ್ತ, ಲಕ್ಷಾಂತರ ರೂ,ಗಳ ಮೊತ್ತ ಬಿಲ್ಲ ತೆಗೆದು ಕೆಲಸಗಳನ್ನು ಪ್ರಾರಂಭ ಮಾಡಲಾಗಿದೆ ಎಂದು ಲೋಕಾಯುಕ್ತರಿಗೆ ಹೇಳುತ್ತಿದ್ದರು. ಅದಕ್ಕೆ ಲೋಕಾಯುಕ್ತರು ಸರಿಯಾಗಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಕೆಲವಂದಿಷ್ಟು ಅಧಿಕಾರಿಗಳು ನಿದ್ರೆಗೆ ಜಾರಿದ ಅಧಿಕಾರಿಗಳ ದಂಡು ಒಂದೆಡೆಯಾದರೆ. ಇನ್ನೂ ಕೆಲವು ಅಧಿಕಾರಿಗಳು ಸಭೆಗೂ, ನಮ್ಮಗೂ ಯಾವುದೇ ಸಂಬಂಧವಿಲ್ಲದಂತೆ ಮೊಬೈಲ್‌ನಲ್ಲಿ ನಿರತರಾಗಿದ್ದರು. ಅಷ್ಟಕ್ಕೂ ಇಂತಹ ಸಭೆಯು ಯಾಕೆ ಬೇಕು ಎಂದು ಸಾರ್ವಜನಿಕರು ಮತ್ತು ಸ್ಥಳೀಯ ಹೋರಾಟಗಾರರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅಂತುಇಂತು ಕಾಟಾಚಾರಕ್ಕೆ ನಡೆದ ಜಿಲ್ಲಾ ಲೋಕಾಯುಕ್ತರ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆ ನಡೆಯಿತು ಎಂದು ಸಾರ್ವಜನಿಕರು ಮಾತನಾಡುತ್ತಿದ್ದರು.
ಲೋಕಾಯುಕ್ತ ಎಸ್,ಪಿ, ಮಲ್ಲೇಶ,ಟಿ,. ಡಿವೈ.ಎಸ್.ಪಿ ಸಿದ್ದೇಶ್ವರ, ತಾಪಂ ಇಓ ಸಂಜು ಜುನ್ನೂರ, ಜಮಖಂಡಿ ಡಿ.ವೈ.ಎಸ್.ಪಿ ಸಯ್ಯದ ಜಮೀರ ಎಸ್. ಲೋಕಾಯುಕ್ತ ಸಿಪಿಐ, ಆರ್.ವೈ. ಕಾಂಬಳೆ, ಬಿ.ಎ.ಬಿರಾದಾರ, ಕೃಷಿ ಇಲಾಖೆಯ ಅಧಿಕಾರಿ ಸಿದ್ದು ಪಟ್ಟಿಹ್ಯಾಳ ಸಿಬ್ಬಂದಿಗಳಾದ ಎಚ್.ಎಸ್.ಹಲಗತ್ತಿ, .ಬಿ.ಎಂ.ದೇಸಾಯಿ, ಎಸ್.ಎಂ.ಮುರನಾಳ, ಬಿ.ಎಂ.ಮುಲ್ಲಾ. ಇದ್ದರು. ಮತ್ತು ತಾಲೂಕಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ ಅವರು ಸಭೆಯಲ್ಲಿ ಗೈರು ಇರುವದನ್ನು ನೋಡಿದ ಸಾರ್ವಜನಿಕರು ಮತ್ತಷ್ಟು ಬೇಸರ ವ್ಯಕ್ತಡಿಸುತ್ತಿದ್ದರು.
ಒಟ್ಟು 14 ಅರ್ಜಿದಾರರು ಸಲಿಸಿದರು. ಅದರಲ್ಲಿ ಮಾಹಿತಿಹಕ್ಕುದಾರರು, ರಸ್ತೆ ಕಾಮಗಾರಿ ಬಗ್ಗೆ, ರಸ್ತೆ ಒತ್ತುವರಿ ತೆರವು ಮಾಡುವ ಕುರಿತು. ಹಕ್ಕುಪತ್ರಗಳ ವಿತರಣೆ ಕುರಿತು, ಹೆಸ್ಕಾಂ ಇಲಾಖೆಯು ಸರಿಯಾಗಿ ಟಿಸಿಗಳನ್ನು ಪೊರೈಸದ ಬಗ್ಗೆ, ಹುನ್ನೂರ ಗ್ರಾಮದ ಗ್ರಾಮ ಪಂಚಾಯತ ವಾಣಿಜ್ಯ ಕಟ್ಟಡ ಕುರಿತು, ಸೇವಾಕೇಂದ್ರ ರದ್ದು ಮಾಡುವ ಕುರಿತು, ಸೇವಾ ಬಡ್ತಿ ಸರಿಯಾಗಿ ಬಾರದೆ ಇರುವ ಬಗ್ಗೆ, ಕಂದಾಯ ಇಲಾಖೆ ದಾಖಲಾತಿ ಪೊರೈಸಿದ ಕುರಿತು.ರನ್ನ ವೈಭವದಲ್ಲಿ ಬಿಲ್ಲುಗಳಲ್ಲಿ ಅವ್ಯವಹಾರದ ಬಗ್ಗೆ ಹೀಗೆ ಲೋಕಾಯುಕ್ತ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲಿಸಿದರು.