ಮಾಜಿ ಶಾಸಕ ಹಾಗೂ ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಗಳಾದ ಡಿ.ಆರ್.ಪಾಟೀಲ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮ
ವಿಜಯಪುರ 02 : ದೇಶದಲ್ಲಿ ಸೇವೆ, ಪ್ರೀತಿ, ಆತ್ಮೀಯತೆ ಬೆಳೆಯಬೇಕು. ಆ ನಿಟ್ಟಿನಲ್ಲಿ ನಾವು ಸಿದ್ಧೇಶ್ವರ ಅಪ್ಪಾವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಮಾಜಿ ಶಾಸಕ ಹಾಗೂ ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಗಳಾದ ಡಿ.ಆರ್.ಪಾಟೀಲ ಹೇಳಿದರು. ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳವರ ಗುರುನಮನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರಿ ಸಿದ್ಧೇಶ್ವರ ಅಪ್ಪನವರು ನಮ್ಮ ಹೃದಯದಲ್ಲಿ ವಾಸವಾಗಿದ್ದಾರೆ. ಅಪ್ಪಾವರು ಹಳ್ಳಿಗಳನ್ನು ಸ್ವಚ್ಛವಾಗಿಡುವುದರ ಬಗ್ಗೆ ಒತ್ತಿ ಹೇಳುತ್ತಿದ್ದರು. ನಾವು ಹಳ್ಳಿಯ ಸೊಬಗನ್ನು ಕಾಪಾಡಿಕೊಳ್ಳಲು ಸ್ವಚ್ಛವಾಗಿಸುವ ಕೆಲಸ ಮಾಡಬೇಕು. ಪೂಜ್ಯರು ತಮ್ಮ ನಡೆನುಡಿಗಳಿಂದ ನಮ್ಮ ಮೇಲೆ ಪ್ರಭಾವ ಬೀರಿ ಇಂದಿಗೂ ನಮ್ಮೊಂದಿಗೆ ಇದ್ದಾರೆ. ಅವರಿಂದಾಗಿ ನನ್ನೊಳಗೆ ಬಹಳಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಶ್ರೀ ಸಿದ್ಧೇಶ್ವರ ಅಪ್ಪಗಳು ಈ ನಾಡಿಗೆ ಸರಳತೆಯನ್ನು ರೂಡಿಸಿದ್ದಾರೆ. ಅವರ ಪ್ರವಚನಗಳಲ್ಲಿ ನಮಗೆ ಸಾಕಷ್ಟು ಜ್ಞಾನವನ್ನು ಹಂಚಿದ್ದಾರೆ. ಅಪ್ಪಾವರ ಆಶೀರ್ವಾದಿಂದ ನನಗೆ ಬಹಳಷ್ಟು ಒಳ್ಳೆಯದು ಆಗಿದೆ. ಅಪ್ಪಗಳು ಸದಾ ನನ್ನ ಮನಸ್ಸಿನಲ್ಲಿ ವಾಸವಾಗಿದ್ದಾರೆ. ನಾವು ಅವರ ಹೇಳಿಕೊಟ್ಟು ಮಾರ್ಗದಲ್ಲಿ ಬದುಕುಬೇಕು ಎಂದರು. ಸೂತ್ತೂರು ಮಠದ ಜಯರಾಜೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ಧೇಶ್ವರ ಶ್ರೀಗಳು ಜೀವಿಸಿದ ಅವಧಿಯಲ್ಲಿ ನಾವು ಬದುಕಿರುವುದು ನಮ್ಮ ಪುಣ್ಯ. ಭಾರತದಲ್ಲಿ ಸಾಕಷ್ಟು ಸಂತರು ಮಾಂತರು ಜೀವಿಸಿ ಹೋಗಿದ್ದಾರೆ. ಅವರಲ್ಲಿ ಅತ್ಯಂತ ಶ್ರೇಷ್ಠರಾದವರು ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು.ಪೂಜ್ಯರು ನುಡಿದಂತೆ ನಡೆದರು, ನಡೆದಂತೆ ನುಡಿದರು ಮಾತೃಹೃದಯಿಯಾಗಿ ಸರ್ವರನ್ನು ಸಮಾನವಾಗಿ ಕಂಡರು. ಲೌಕಿಕವಾಗಿ ಯಾವುದೇ ವಸ್ತುವಿನ ಮೇಲೆ ವ್ಯಾಮೋಹ ಇರಲಿಲ್ಲ. ಒಬ್ಬ ಸನ್ಯಾಸಿ ಹೇಗಿರಬೇಕು ಎನ್ನುವುದನ್ನು ನಮ್ಮಗಳಿಗೆ ತೋರಿಸಿಕೊಟ್ಟು ಹೋಗಿದ್ದಾರೆ. ಅವರ ದಾರಿಯಲ್ಲಿಯೇ ನಾವು ನಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನಾಡಿನ ಸ್ವಾಮೀಜಿಗಳು, ಮಠಾಧೀಶರು, ಹಾಗೂ ಭಕ್ತರು ಭಾಗವಹಿಸಿದ್ದರು.