ಲೋಕದರ್ಶನ ವರದಿ
ಹಂಪಿ 17: ಜಗತ್ತಿನ ಹಲವು ದೇಶದ ಜ್ಞಾನವನ್ನು ಪಡೆಯುವಲ್ಲಿ ಇಂಗ್ಲಿಷ್ ಭಾಷೆಯು ಅತೀ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ ಹಮ್ಮಿಕೊಂಡಿದ್ದ ಇಂಗ್ಲಿಷ್ ಸ್ಫೀಕಿಂಗ್ ಟ್ರೈನಿಂಗ್ ಪ್ರೋಗ್ರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜಗತ್ತಿನ ಎಲ್ಲಾ ವಿದ್ವಾಂಸರು ಹಲವು ಭಾಷೆಗಳಲ್ಲಿ ತಜ್ಞರಾಗಿದ್ದರು. ಮಹಾತ್ಮಗಾಂಧಿ ಹಾಗೂ ಸಮಾಜ ಸುಧಾರಕರು ಹಲವು ಭಾಷೆಗಳನ್ನು ಅರ್ಥ ಮಾಡಿಕೊಂಡಿದ್ದರು ಹಾಗೂ ಮಾತನಾಡುತ್ತಿದ್ದರು ಎಂದು ತಿಳಿಸಿದರು.
ಇಂತಹ ಉಪಯುಕ್ತ ಕಾರ್ಯಕ್ರಮಗಳಿಂದ ಎನ್.ಇ.ಟಿ, ಜೆ.ಆರ್.ಎಫ್, ಇತರೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂದು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಂಪ್ಯೂಟರ್ ಮತ್ತು ಇಂಗ್ಲಿಷ್ ಜ್ಞಾನ ಇವತ್ತು ಜಗತ್ತನ್ನೇ ಆಳುತ್ತಿದ್ದು, ಇವುಗಳ ಕಲಿಕೆ ಇಲ್ಲದ ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಕೀಳರಿಮೆಯಿಂದ ಜೀವಿಸುತ್ತಿದ್ದಾರೆ ಎಂದು ಐಕ್ಯೂಎಸಿ ನಿರ್ದೇಕರಾದ ಡಾ.ಎ.ಮೋಹನ್ ಕುಂಟಾರ್ ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದ ಸಂಚಾಲಕ ಡಾ.ರಮೇಶ ನಾಯಕ ಅವರು ಎಲ್ಲಾ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಂತೋಷಕುಮಾರ್ ಚಿನ್ನಣ್ಣವರ್, ವಿಶ್ವವಿದ್ಯಾಲಯದ ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾಥರ್ಿನಿ ಪೂಜಾ ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು.