ಬೆಳಗಾವಿ 12: ಇಲ್ಲಿನ ರಾಮತೀರ್ಥನಗರದ ಕಣಬರ್ಗಿ ಕೆರೆಯ ಹತ್ತಿರವಿರುವ ಹನುಮಾನ ಮಂದಿರದಲ್ಲಿ ದಿ. 12ರಂದು ಹನುಮಾನ ಜಯಂತಿಯ ಉತ್ಸವದಲ್ಲಿ ಸುರೇಶ ಯಾದವ ಪೌಂಡೇಶನ್ ಅಧ್ಯಕ್ಷ ಸುರೇಶ ಯಾದವ ದಂಪತಿಗಳು ಹೋಮ -ಹವನ ಪೂಜೆ ನೆರೆವೇರಿಸಿ ಮಾತನಾಡಿ ಹಿಂದೂ ದೇವತೆ ಮತ್ತು ರಾಮಾಯಣ ಮತ್ತು ಅದರ ಹಲವು ಅವ್ರುತ್ತಿಗಳ ನಾಯಕರಲ್ಲಿ ಒಬ್ಬರಾದ ಹನುಮಾನ ಜನ್ಮವನ್ನು ಆಚರಿಸುವ ಹಿಂದೂ ಹಬ್ಬವಾಗಿದೆ.
ಹನುಮಾನ ಜಯಂತಿಯ ಆಚರಣೆಯು ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಮಯ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಕರ್ನಾಟಕದಲ್ಲಿ ಹನುಮಾನ್ ಜಯಂತಿಯನ್ನು ಶುಕ್ಲ ಪಕ್ಷ ತ್ರಯೋದಶಿಯಂದು, ಮಾರ್ಗಶಿರಮಾಸದಲ್ಲಿ ಆಚರಿಸಲಾಗುತ್ತದೆ. ಹನುಮಂತನನ್ನು ವಿಷ್ಣುವಿನ ಅವತಾರವಾದ ರಾಮನ ಕಟ್ಟಭಕ್ತ ನೆಂದು ಪರಿಗಣಿಸಲಾಗಿದೆ. ಅವನ ಅಚಲ ಭಕ್ತಿಗೆ ವ್ಯಾಪಕವಾದ ಹೆಸರುವಾಸಿಯಾಗಿದ್ದಾನೆ. ಅವನನ್ನು ಶಕ್ತಿಯ ಸಂಕೇತವೆಂದು ಪೂಜಿಸಲಾಗುತ್ತದೆ ಎಂದು ಹೇಳಿದರು.
ಗೀರೀಶ ಪಾಟೀಲ ದಂಪತಿಯವರಿಂದ ಹೂವಿನ ಅಲಂಕಾರ, ನವಗ್ರಹ ಪೂಜೆ ನಾರಾಯಣ ದಂಪತಿಯವರಿಂದ ಹೋಮ-ಹವನ ಪೂಜೆ ಕಾರ್ಯಕ್ರಮ ನಂತರ ಮುತ್ತೈದರಿಂದ ತೊಟ್ಟಿಲು ತೂಗುವ ಪೂಜೆ ನಂತರ ಮಹಾಪ್ರಸಾದ ಜರುಗಿತು.
ಮಂಡಳಿ ಸದಸ್ಯರು ಹಾಗೂ ರಾಮತೀರ್ಥ ರಹವಾಸಿಗಳು ಅಪ್ಪಯ್ಯಾ ಕೋಲ್ಕಾರ, ಗುರುಪುತ್ರ ತೊರಗಲ, ಮಹಾದೇವ ಅಮರಾಶೆಟ್ಟಿ, ರಾಚಯ್ಯ ಮಠಪತಿ, ಅನಿಲ ಕಲಿಮನಿ, ಜಿ ಬಿ ಚರಂಟಿಮಠ, ಆಕ್ಕಿಶೆಟರ, ಕೆಂಪಣ್ಣ ಜಿನರಾಳೆ, ಮಾರುತಿ ಭಾಸ್ಕರ, ತುಕಾರಾಮ ಹುಜರತ್ತಿ, ನಿಂಗಪ್ಪಾ ಕರೆಪ್ಪಗೋಳ ಹಾಗೂ ರಾಮತೀರ್ಥ ನಗರ ಸುತ್ತಮುತ್ತಲಿನ ಹನುಮಾನ ನೂರಾರು ಭಕ್ತರು ಪಾಲ್ಗೊಂಡಿದ್ದರು.