ರಾಯಬಾಗ: ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಾಗುತ್ತಿರುವುದು ಸಂತಸ
ರಾಯಬಾಗ: ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಾಗುತ್ತಿರುವುದು ಸಂತಸHappy to embrace humanitarian value
Lokadrshan Daily
3/12/25, 12:38 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ರಾಯಬಾಗ 08: ಹುಕ್ಕೇರಿ ಹಿರೇಮಠವು ಸರ್ವಧರ್ಮಗಳನ್ನು ಒಗ್ಗೂಡಿಸಿಕೊಂಡು ಭಾರತೀಯ ಪರಂಪರೆಯನ್ನು ಎತ್ತಿಹಿಡಿಯವಲ್ಲಿ ಶ್ರೀಮಠ ವಿಶೇಷವಾದ ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ಒಳ್ಳೆ ಬೆಳವಣಿಗೆಯಾಗಿದೆ ಎಂದುಉಜ್ಜಯಿನಿ ಜಗದ್ಗುರು ಡಾ.ಸಿದ್ದಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ಪಟ್ಟಣದ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿ, ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಮಾನವೀಯ ಮೌಲ್ಯವನ್ನು ಭಕ್ತರು ಅಳವಡಿಸಿಕೊಂಡು ಸಾಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಶಾಖಾಮಠದ ಉದ್ಘಾಟನೆ ಸಮಯದಲ್ಲಿ ಹುಕ್ಕೇರಿ ಶ್ರೀಗಳು ಸುಮಾರು 108 ನೆರೆ ಸಂತ್ರಸ್ತರಿಗೆ ನೆರವು ನೀಡುವುದರೊಂದಿಗೆ ಸರಕಾರಕ್ಕೆ ಒಂದು ಲಕ್ಷ ರೂ. ನೀಡುವುದರ ಮುಖಾಂತರ ಮಠಗಳು ಕೂಡ ಜನರೊಂದಿಗೆ ಇವೆ ಎಂಬುದನ್ನು ಸಾಬೀತು ಪಡಿಸಿದ್ದಾರೆಂದರು.
ಶಾಸಕ ಡಿ.ಎಮ್.ಐಹೊಳೆ ಮಾತನಾಡಿ, ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠದ ಶ್ರೀಗಳು ಪಟ್ಟಣಕ್ಕೆ ಆಗಮಿಸಿರುವುದು ಸಂತೋಷತಂದಿದೆ. ಮುಂಬರುವ ದಿನಗಳಲ್ಲಿ ಶ್ರೀಮಠದಿಂದ ಜಗದ್ಗುರು ಪಂಚಪೀಠಾಧಿಶರನ್ನು, ವಿರಕ್ತ ಮಠಾಧೀಶರನ್ನು ಮತ್ತು ಎಲ್ಲ ಸಾಂಪ್ರದಾಯದ ಸ್ವಾಮೀಜಿಗಳನ್ನು ಕರೆಯಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಯಬಾಗದ ಸದ್ಭಕ್ತರು ಶ್ರೀಮಠದ ಉಪಯೋಗ ಪಡೆದುಕೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಶಾಖಾ ಮಠದಉದ್ಘಾಟನೆಆದ ಕೇವಲ 4-5 ತಿಂಗಳಲ್ಲಿ ಹೆಣ್ಣು ಮಕ್ಕಳು ಶ್ರೀರುದ್ರವನ್ನು ಕಲಿತು ಸತ್ಸಂಗ ಮಾಡುತ್ತಿರುವುದುಅಭಿಮಾನದ ಸಂಗತಿಯಾಗಿದೆಎಂದರು.
ಅರುಣ ಐಹೊಳೆ, ರವಿ ರಂಗೋಳಿ, ಕಾಡಯ್ಯ ಹಿರೇಮಠ, ಸೇರಿದಂತೆ ಪಟ್ಟಣದ ಸದ್ಭಕ್ತರು ಉಜ್ಜಯಿನಿ ಜಗದ್ಗುರುಗಳ ಆಶೀವರ್ಾದ ಪಡೆದುಕೊಂಡರು.