ಹರಳಯ್ಯ ಪ್ರೌಢಶಾಲೆ: ಬಾಲಕಿಯರು ಮೇಲುಗೈ

Haralaiah High School: Girls dominate

ಹರಳಯ್ಯ ಪ್ರೌಢಶಾಲೆ: ಬಾಲಕಿಯರು ಮೇಲುಗೈ  

ಜಮಖಂಡಿ 04: ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ವತಿಯಿಂದ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.  

     ಪರೀಕ್ಷೆಯಲ್ಲಿ ಶಾಲಾ ಬಾಲೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುತ್ತಮ ಸಾಧನೆ ಗೈದಿದ್ದಾರೆ. ಇಂದಿನ ಜಾಗತಿಕ ದಿನಮಾನದಲ್ಲಿ ಹೆಣ್ಮು ಮಕ್ಕಳೇ ಎಲ್ಲ ರಂಗದಲ್ಲೂ ಸ್ಟ್ರಾಂಗ್ ಅಗಿದ್ದಾರೆ ಎಂಬುದನ್ನು ಶೈಕ್ಷಣಿಕ ವಲಯದಲ್ಲಿ ಪ್ರೌಢ ಹಂತದ ಶಾಲಾ ಬಾಲೆಯರು ಇಲ್ಲಿ ನಿರೂಪಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಹಬ್ಬದಲ್ಲೂ ಅಭೂತಪೂರ್ವ ಮೇಲುಗೈ ಸಾಧಿಸಿ ಮಿಂಚಿದ್ದಾರೆ. 

      ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರಿಯಾಂಕಾ ಜಾಯಗೊಂಡ 607(ಶೇ,97.12) ಅಂಕ ಪಡೆಯವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಟಾಪರ್ ಪಟ್ಟದ ಸಾಧನೆಗೆ ಪಾತ್ರವಾಗಿದ್ದಾಳೆ. ತೇಜಸ್ವಿನಿ ನ್ಯಾಮಗೌಡ 596(ಶೇ,95.36) ಅಂಕಗಳಿಸಿ ದ್ವೀತಿಯ ಸ್ಥಾನ ಪಡೆದಿದ್ದಾಳೆ. ಸ್ವಾತಿ ಪಟ್ಟಣಶೆಟ್ಟಿ 588 (ಶೇ,94.08) ಅಂಕದೊಂದಿಗೆ ತೃತೀಯ ಸ್ಥಾನ ತನ್ನದಾಗಿಸಿಕೊಂಡು ಸಾಧನೆಯ ತೃಪ್ತಿ ಪಡೆದಿದ್ದಾಳೆ. 

     ಗಾಯತ್ರಿ ಮರೇಗುದ್ದಿ 585(ಶೇ,93.60), ಬೌರವ್ವ ಕಲ್ಯಾಣಿ 583(ಶೇ,93.28), ಕೀತಿ9 ಸಿ.ಕಲ್ಯಾಣಿ 563(ಶೇ, 90.08), ಪಾರ್ವತಿ ಕಂಬಾರ 563 (ಶೇ, 90.08), ಬಸಗಂಗವ್ವಾ ನಿಂಬಾಳಕರ 560 (ಶೇ, 89.60), ದೀಪಾ ಗವರೋಜಿ 557 (ಶೇ, 89.12), ಐಶ್ವಯಾ9 ಸಿ.ಭಜಂತ್ರಿ 557 (89.12), ವಿದ್ಯಾಶ್ರೀ ಮಟೋಳಿ 554 (ಶೇ,88.64) ಸೇರಿದಂತೆ ಹಲವಾರು ಬಾಲೆಯರು ಈ ಬಾರಿಯ ಕಟ್ಟುನಿಟ್ಟಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮವಾದ ರೀತಿಯಲ್ಲಿ ಅಂಕ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿ ಮಿನುಗಿದ್ದಾರೆ. 

        ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿ ತೇರ್ಗಡೆಯಾಗಿರುವ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದ ಡಾ, ಸಿದ್ದರಾಮ ಮಹಾಸ್ವಾಮಿಗಳು,  ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ, ಶಿವಾನಂದ ಪಟ್ಟಣಶೆಟ್ಟರ, ಮಾರ್ಗದರ್ಶಿ ಚಿಂತಕ ಕೋಟ್ರೇಶ ಮೆಣಸಿನಕಾಯಿ, ಗದಗ ಆಡಳಿತ ಮಂಡಳಿ,ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಶಾಲಾ ಮುಖ್ಯ ಗುರು ಬಸವರಾಜ ಜಾಲೋಜಿ ಸೇರಿದಂತೆ ಸಿಬ್ಬಂದಿಗಳು, ಗ್ರಾಮದ ಗುರು,ಹಿರಿಯರು ಅಭಿನಂದಿಸಿ ಮಕ್ಕಳ ಮುಂದಿನ ಭವಿಷ್ಯತ್ತಿನ ಶೈಕ್ಷಣಿಕ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.