ಹರಪನಹಳ್ಳಿ 29: ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳ ದೈವಾಧೀನದ ನಿಮಿತ್ಯ ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ವಿದ್ಯಾರ್ಥಿಗಳ ಬೀಛಿ ಅಭಿಮಾನಿ ಬಳಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಚಾರ್ಯಪ್ಪ ನಂದೀಬೇವೂರು ಸಂಘದ ಅಧ್ಯಕ್ಷ ನಿಂಗರಾಜು ಶೃಂಗಾರತೋಟ, ಉಪಾಧ್ಯಕ್ಷ ಪ್ರಶಾಂತ ಪೂಜಾರ, ಪ್ರಧಾನ ಕಾರ್ಯದರ್ಶಿ ಚಂದ್ರು ತಲವಾಗಲು, ಮಾರುತಿ ಹಲುವಾಗಲು, ಮೇಘರಾಜ ಮಂಜು ಗೌವೇರಹಳ್ಳಿ ಲಂಕೇಶ ಚೌಡಪ್ಪ ರಮೇಶ್ ಇತರರು ಭಾಗವಹಿಸಿದ್ದರು.