ಹರಪ್ಪನಹಳ್ಳಿ 26: ಹೊಸಪೇಟೆ ಕ್ಷೇತ್ರದ ಅಭಿವೃದ್ಧಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವ ಉದ್ದೇಶದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದನೆ ಎಂದು ಶಾಸಕ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ
ಟಿ.ಎಂ.ಎ.ಇ.ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ತೆಗ್ಗಿನಮಠದ ಲಿಂ.ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮಿಯ ಐದನೇ ವಾಷರ್ಿಕ ಪುಣ್ಯಾರಾಧನೆ ಹಾಗೂ ಪಟ್ಟಾಧಿಕಾರ ಚತುರ್ಥ ವಾಷರ್ಿಕೋತ್ಸವ ಸಮಾರಂಭ ಮುನ್ನ ಮಾತನಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಕೆಲಸಗಳಿಗೆ ಆದ್ಯತೆ ನೀಡುತ್ತಿರಲಿಲ್ಲ ಆದ್ದರಿಂದ ಬಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನನಗೆ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಕ್ಷೇತ್ರದ ಅಭಿವೃದ್ಧಿಯ ಮುಖ್ಯ ಕೆಲಸಗಳಿಗೆ ಮತ್ತು ಬೇಡಿಕೆಗಳಿಗೆ ಈಡೇರಿಸುವುದಾಗಿ ಬಿಜೆಪಿ ಪಕ್ಷ ಭರವಸೆ ನೀಡಿದೆ. ಹರಪನಹಳ್ಳಿ ಪ್ರತ್ಯೇಕ ಜಿಲ್ಲೆ ಹೋರಾಟದ ವಿಚಾರವಾಗಿ ಮಾತನಾಡಿ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಪ್ರತಿಭಟನೆ ಮಾಡಲು ಸ್ವತಂತ್ರವಿದೆ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು ತಮ್ಮ ಬೇಡಿಕೆಗಳನ್ನು ಮುಂದಿಡಬಹುದು ಎಂದರು