ಜಮ್ಮು ಪ್ರದೇಶದಲ್ಲಿ ಭಾರೀ ಸ್ಫೋಟದ ಶಬ್ದ: ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆ ಅಧಿಕಾರಿಗಳ ಸೂಚನೆ

Heavy explosion heard in Jammu region; officials ask people to switch off lights in homes

ಜಮ್ಮು, ಶ್ರೀನಗರ 09: ಜಮ್ಮು ಪ್ರದೇಶದಲ್ಲಿ ಶುಕ್ರವಾರ ಸಂಜೆ ಭಾರೀ ಸ್ಫೋಟದ ಶಬ್ದ ಕೇಳಿಸಿದ್ದು, ತಕ್ಷಣ ಸೈರನ್ ಮೊಳಗಿತು. ವಿದ್ಯುತ್‌ ಸಂಪರ್ಕವನ್ನು ತಕ್ಷಣ ಕಡಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಲ್ಲಿ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲು ಮಸೀದಿಯ ಮೈಕ್‌ಗಳನ್ನು ಬಳಸಿ ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.

‘ದೊಡ್ಡ ಪ್ರಮಾಣದ ಕ್ಷಿಪಣಿ ಬಳಸಿರುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು  ಇಡೀ ನಗರ ಕತ್ತಲಾಗಿರುವ ಚಿತ್ರವನ್ನು ಎಕ್ಸ್‌ನಲ್ಲಿ  ಹಂಚಿಕೊಂಡಿದ್ದಾರೆ. 

‘ಜಮ್ಮು ನಗರದ ಜನರು ಯಾರೂ ಹೊರಹೋಗಬಾರದು. ಮುಂದಿನ ಕೆಲ ಗಂಟೆಗಳವರೆಗೆ ಮನೆಯಲ್ಲೇ ಇರಿ ಅಥವಾ ನಿಮ್ಮ ಹತ್ತಿರದ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಿರಿ. ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ಹರಡಬೇಡಿ. ಎಲ್ಲರೂ ಒಗ್ಗಟ್ಟಿನಿಂದ ಇರೋಣ’ ಎಂದು ಹೇಳಿದ್ದಾರೆ.