ಕಲಬುರಗಿ 11 : ಮಹಾಸಾದ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಚಿಂತನೆ ಮತ್ತು ಜೀವನ ತತ್ವ ಪಾಲನೆ ಮೂಲಕ ಆದರ್ಶ ಮಹಿಳೆಯಾಗಿದ್ದಾರೆ. ಅವರ ಉತ್ತಮ ವಿಚಾರಗಳನ್ನು ಪಾಲನೆ ಮಾಡಿದರೆ ಆದರ್ಶ ಸಮಾಜ ರೂಪಿಸಬಹುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಗೂರು ಶ್ರೀರಾಮುಲು ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಪೀಠದಿಂದ ಆಯೋಜಿಸಿದ ಮಹಾ ಸಾದ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನವರ 603ನೇ ಜಯಂತ್ಯೋತ್ಸವದಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಿಸಿ ಮಾತನಾಡಿ ಸರ್ಕಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸುವಂತೆ ಕೈಗೊಂಡಿರುವ ನಿರ್ಧಾರ ಅತ್ಯಂತ ಮಹತ್ವ ಮತ್ತು ಅರ್ಥಪೂರ್ಣ ಎಂದರು.
ಕಲ್ಯಾಣ ಕರ್ನಾಟಕ ಭಾಗದ ದಿ ಡೈಲಿ ನ್ಯೂಸ್ ದಿನಪತ್ರಿಕೆ ಮುಖ್ಯಸ್ಥ ಮಹಿಪಾಲರೆಡ್ಡಿ ಮುನ್ನೂರು ಮುಖ್ಯ ಅತಿಥಿಯಾಗಿ ಮಾತನಾಡಿ ಮನುಕುಲದ ಮಹಾತಾಯಿ ಎನಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಕೌಟುಂಬಿಕ ಕಲಹ ಮತ್ತು ಸಂಕಷ್ಟಗಳ ನಡುವೆ ಅವಮಾನಗಳನ್ನು ಸಹಿಸಿಕೊಂಡು ಬದುಕಿದರು. ಇಡೀ ಜಗತ್ತನ್ನ ರಕ್ಷಿಸುವ ಶಕ್ತಿ ಮಹಿಳಾ ಕುಲಕ್ಕಿದೆ ಎಂದು ದರ್ಶನ ಮಾಡಿಕೊಟ್ಟು ಬದುಕನ್ನು ಬಂಗಾರವಾಗಿಸಿಕೊಂಡಂತಹ ನಮ್ಮ ನಡುವಿನ ಅನರ್ಘ್ಯ ರತ್ನವಾಗಿರುವ ಹೇಮರಡ್ಡಿ ಮಲ್ಲಮ್ಮ ಜಗಮಾನಸದಲ್ಲಿ ಅಮರವಾಗಿದ್ದರೆ ಎಂದರು.
ಸಾದ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಸಂಚಾಲಕಿ ಪ್ರೊ. ಜೆ. ಲಲಿತಾ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಂಡಕೇಟ್ ಸದಸ್ಯ ಮಲ್ಲಣ್ಣ ಎಸ್ ಮಡಿವಾಳ, ಕುಲಸಚಿವ ಪ್ರೊ. ರಮೇಶ ಲಂಡನಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಹಾಗೂ ಮುಂತಾದವರಿದ್ದರು.