ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 13: ದದೇಗಲ್-ಮಾದಿನೂರು, ಕವಲೂರು-ಹಂದ್ರಾಳ,ಹಾಗೂ ಮುಲರ್ಾಪುರ ಗ್ರಾಮಗಳಲ್ಲಿ ಹೆಚ್.ಕೆ.ಆರ್.ಡಿ.ಬಿ ಹಾಗೂ 50-54 ಎಸ್.ಸಿ.ಪಿ ಯೋಜನೆ ಅಡಿಯಲ್ಲಿ ಅಂದಾಜು ಮೊತ್ತ ರೂ.4 ಕೋಟಿ 50 ಲಕ್ಷದ ರಸ್ತೆ,ಹಾಗೂ ಚರಂಡಿ ನಿಮರ್ಾಣ ಕಾಮಗಾರಿಗೆ ಭೂಮಿಪುಜೆ ನೇರವೇರಿಸಿ ಬಳಿಕ ಮಾತನಾಡಿ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕರಾದ ಕೆ.ರಾಘವೆಂದ್ರ ಹಿಟ್ನಾಳರವರು ಗ್ರಾಮವಿಕಾಸ ಯೋಜನೆ ಅಡಿಯಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಜನರಿಗೆ ಅತ್ಯವಶ್ಯಕವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಶುದ್ಧ ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ ಚರಂಡಿ, ಶಾಲಾ  ಕೊಠಡಿಗಳ ನಿಮರ್ಾಣ ಕೈಗೊಳ್ಳಲಾಗುವುದು. ಜನರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿ ಗುಣಮಟ್ಟದ ಕಾಮಗಾರಿ ನಿಮರ್ಾಣಕ್ಕೆ ಸಹಕರಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ.ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಮಾಜಿ.ಜಿ.ಪಂ ಅದಸ್ಯ ಪ್ರಸನ್ನಾ ಗಡಾದ, ಎ.ಪಿ.ಎಮ್.ಸಿ.ಸದಸ್ಯ ಯಂಕಣ್ಣ ಹೊರಕ್ನಾಳ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಮುಖಂಡರುಗಳಾದ ಭರಮಪ್ಪ ನಗರ, ಮೈನುಸಾಬ್ ಮುಲ್ಲಾ, ಗಾಳೇಪ್ಪ ಪೂಜಾರ, ತೋಟಪ್ಪ ಸಿಂಟರ್, ಸಿದ್ದಪ್ಪ ಗಿಣಿಗೇರಾ, ಯಲ್ಲಪ್ಪ ಯಮ್ಮಿ, ಯಂಕಣ್ಣ ಗುಡಗೇರಿ, ಬಸವರಾಜ ಹಾವರಗೇರಿ, ದೇವಪ್ಪ ಮುಲರ್ಾಪುರ, ಅಜ್ಜಪ್ಪ ಗುಡಗೇರಿ, ಅಡಿವೇಪ್ಪ ರಾಟಿ, ಗುತ್ತಿಗೆದಾರರಾದ ರಾಮಣ್ಣ ಕಲ್ಲಣ್ಣನವರ, ದೇವಪ್ಪ ಕರಿಗಾರ, ಕಿರಿಯ ಅಭಿಯಂತರರಾದ ಲಕ್ಷ್ಮಣ ಉಪಸ್ಥಿತರಿದ್ದು ಗುರುಬಸವರಾಜ ಹಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.