ಲೋಕದರ್ಶನ ವರದಿ
ಕೊಪ್ಪಳ 15: ಶೈಕ್ಷಣಿಕ ಪ್ರಗತಿಗೆ ಪ್ರಮಾಣಿಕ ಪ್ರಯತ್ನ ಮಾಡವುದಾಗಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೂತನ ಕೊಠಡಿಗಳ ಭೂಮಿ ಪೂಜೆ ಕಾರ್ಯಕ್ರಮವನ್ನು ನೇರವೇರಿಸಿ ಮಾತನಾಡುತ್ತ, ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಹೆಚ್ಚು ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದ್ದು, ಅವಗಳು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರು ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಕರಿಗೆ ಅನೇಕ ಇತರೇ ಕಾರ್ಯಗಳನ್ನು ನಿರ್ವಹಿಸಲು ವಹಿಸಬಾರದು.ಇದರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. 10ನೇ ತರಗತಿಯ ಪಲಿತಾಂಶದಲ್ಲಿ ರಾಜ್ಯಕ್ಕೆ ಮೊದಲನೇಯ ಸ್ಥಾನ ಬರುವಾಗ ಹಾಗೇ ಶಿಕ್ಷಕರು, ಪಾಲಕರು ಹೆಚ್ಚು ಶ್ರಮವಹಿಸಬೇಕು.ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ತಕ್ಕಂತೆ ಪಠ್ಯಕ್ರಮವನ್ನು ಸಿದ್ದಪಡಿಸಬೇಕು ಹಾಗೂ ಅದನ್ನು ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಬೇಕು.ತಾಲೂಕಿನ ಅನೇಕ ಶಾಲೆಯ ಕಟ್ಟಡಗಳು ದುರಸ್ಥಿತಿಯಾಗಬೇಕಿದೆ ಜೊತೆಗೆ ಅನೇಕ ಶಾಲೆಗೆ ಹೊಸ ಕಟ್ಟಡಗಳ ಅಗತ್ಯವಿದೆ.ದರುಸ್ಥಿ ಹಾಗೂ ಹೊಸ ಕಟ್ಟಡಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತದೆ. ಸಮಾಜದ ಬದಲಾವಣೆಯು ಶಿಕ್ಷಕರ ಮೇಲೆ ಇರುವುದರಿಂದ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ನಮ್ಮ ಶಾಲೆಯಲ್ಲಿನ ದಾಖಲಾತಿಯು ಜಿಲ್ಲೆಯಲ್ಲಿ ಅತಿ ಹೆಚ್ಚು ಹೊಂದಿತ್ತು,ಆದರೆ ಕಳೆದ ವರ್ಷ ಕಟ್ಟಡದ ದುರಸ್ಥಿಯಾಗದ ಕಾರಣ ಪಾಲಕರು 100 ವಿದ್ಯಾಥರ್ಿಗಳ ಬೇರೆ ಶಾಲೆಗೆ ದಾಖಲಾಗಿ ನಮ್ಮ ಶಾಲೆಯ ದಾಖಲಾತಿ ಕುಸಿತ ಕಂಡಿದೆ. ಸರಕಾರಿ ಶಾಲೆಯ ಶಿಕ್ಷಕರು ಶಿಕ್ಷಣದ ಪ್ರಗತಿಗೆ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.ಆದರೆ ಅವರಿಗೆ ಶಾಲೆಯಲ್ಲಿನ ಮೂಲಭೂತ ಅಗತ್ಯಗಳ ಅವಶ್ಯವಿದೆ.ಮೂಲಭೂತ ಅಗತ್ಯ ಸರಿಯಾದ ರೀತಿಯಲ್ಲಿ ಒದಗಿಸಿದಾಗ ಮಾತ್ರ ಶೈಕ್ಷಣಿಕ ಪ್ರಗತಿಯಾಗುತ್ತದೆ.ವಿಶೇಷವಾಗಿ ನಮ್ಮ ಶಾಲೆಗೆ ಬಾಲಕ ಮತ್ತು ಬಾಲಕೀಯರಿಗೆ ಪ್ರತ್ಯೇಕ ಶೌಚಾಲಯಗಳ ಅಗತ್ಯವಿದೆ ಜೊತೆಗೆ ಶಾಲೆಯ ಆವರಣದಲ್ಲಿ ಪ್ರತಿದಿನ ರಾತ್ರಿಯ ಸಮಯದಲ್ಲಿ ಅನೇಕ ಪುಂಡರು ಮದ್ಯಪಾನವನ್ನು ಮಾಡುತ್ತಿದ್ದು, ಪ್ರತಿದಿನ ಮಧ್ಯಪಾನ ಮಾಡಿದ ಅವಶೇಷಗಳನ್ನು ತೆಗೆಯುವ ಕೆಲಸವಾಗಿದೆ.ಆದ್ದರಿಂದ ಶಾಲೆಯ ಕಂಪೌಡಗಳನ್ನು ಕೂಡಾ ದರಸ್ಥಿಯನ್ನು ಮಾಡಿಕೊಡಬೇಕು ಮನವಿ ಮಾಡಿದರು.
11ನೇ ವಾಡರ್ಿನ ನಗರಸಭೆಯ ಸದಸ್ಯರಾದ ರಾಜಶೇಖರ ಆಡೂರ ಅವರು ಮಾತನಾಡುತ್ತ, ಈ ಶಾಲೆಯು ಪುರಾತನ ಕಾಲದಿಂದ ಪ್ರಾರಂಭವಾದ ಶಾಲೆಯಾಗಿದೆ.ಶಾಲೆಯಲ್ಲಿನ ಶಿಕ್ಷಕರು ಹೆಚ್ಚು ಪರಿಶ್ರಮ ವಹಿಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ.ಶಾಲಯ ಕಟ್ಟಡವು ಉತ್ತಮವಾಗಿದ್ದು,ಶಾಲೆಯ ಮೂಲಭೂತ ಸೌಲಭ್ಯಗಳ ಬಗ್ಗೆ ಬರುವ ದಿನಗಳಲ್ಲಿ ನಗರಸಭೆಯಿಂದ ಹೆಚ್ಚಿನ ಅನುದಾನವನ್ನು ನೀಡುವಂತೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಂಸದೀಯ ಕಾರ್ಯದಶರ್ಿಯಾಗಿ ನೇಮಕವಾಗಿರುವುದಕ್ಕೆ, ಶಾಲೆಯ ಕುಡಿಯುವ ನೀರಿನ ಸಲುವಾಗಿ ಕೊಳವೆಬಾವಿಯನ್ನು ಕೊರೆಸಿದ ಮಾಜಿ ನಗರಸಭೆಯ ಸದಸ್ಯರಾದ ಮೌಲಾಹುಸೇನ ಜಮಾದರ, ನೂತನ 11ನೇ ವಾಡರ್ಿನ ನಗರಸಭೆಯ ಸಭೆಯ ಸದಸ್ಯರಾದ ರಾಜಶೇಖರ ಆಡೂರ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಗರಸಭೆಯ ಸದಸ್ಯರಾದ ಅಮ್ಜದ ಪಟೇಲ, ಮಹೇಂದ್ರ ಚೋಪ್ರಾ, ಸಿದ್ದು ಮ್ಯಾಗೇರಿ, ಗುರುರಾಜ ಹಲಗೇರಿ, ಅಜೀಂ ಅತ್ತಾರ, ಮುಖಂಡರಾದ ಕಾಟನ ಪಾಷಾ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಕುಲಕಣರ್ಿ, ಶಿಕ್ಷಣ ಸಂಯೋಜಕರಾದ ಮುನಿರಾಜು,ಸಿ.ಆರ್.ಪಿ.ಸತೀಶ ಮುಂತಾದವರು ಹಾಜರಿದ್ದರು. ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು. ಶಿಕ್ಷಕರಾದ ಮೊಹಮ್ಮದ್ ಆಬೀದ ಹುಸೇನ ಅತ್ತಾರ ಸ್ವಾಗತಿಸಿ, ನಾಗಪ್ಪ ನರಿ ವಂದಿಸಿದರು.