ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನ. 17ರಂದು ವಾಷರ್ಿಕೋತ್ಸವ: ಸುವಿಚಾರ ಚಿಂತನ

ಬೆಳಗಾವಿ : ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಸಾನಿಧ್ಯದಲ್ಲಿ ನ.17 ಶನಿವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀಮಠದ ನಾಲ್ಕನೇ ವಾಷರ್ಿಕೋತ್ಸವ ಹಾಗೂ ಸುವಿಚಾರ ಚಿಂತನ-12ರ ಕಾರ್ಯಕ್ರಮ ನಡೆಯಲಿದೆ ಎಂದು ನ್ಯಾಯವಾದಿ ಎ.ಜಿ.ಮುಳವಾಡಮಠ ಹೇಳಿದರು.

ಬುಧವಾರ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯ ಪ್ರವಚನಕಾರರಾಗಿ ಶಿವಗಂಗಾ ಕ್ಷೇತ್ರದ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ 'ಮಾನವೀಯ ಮೌಲ್ಯಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. 

 ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸದ ಸುರೇಶ ಅಂಗಡಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಅಭಯ ಪಾಟೀಲ, ಅಂಜಲಿ ನಿಂಬಾಳ್ಕರ್ ಆಗಮಿಸಲಿದ್ದಾರೆ ಎಂದರು.

ಇದೇ ಕಾರ್ಯಕ್ರಮದಲ್ಲಿ 2019ರ ಹುಕ್ಕೇರಿ ಹಿರೇಮಠ ಕ್ಯಾಲೆಂಡರ್ನ್ನು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಬಿಡುಗಡೆಗೊಳಿಸಲಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ್ ಅವರು ದಿನದಶರ್ಿಕೆಯ ಪಾಕೀಟ್ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಸಾಹಿತಿಗಳಾದ ಬಿ.ಎಸ್.ಗವಿಮಠ ಹಾಗೂ ವಿಮಲಾದೇವಿ ಜಗಜಂಪಿ ಅವರನ್ನು ಸತ್ಕರಿಸಲಾಗುವುದು. ಪ್ರಾತಃ ಕಾಲದಲ್ಲಿ ಬೆಳಗ್ಗೆ ನಡೆಯುವ ವಿಧಿ ವಿಧಾನ ಕಾರ್ಯಕ್ರಮದ ಧ್ವಜಾರೋಹಣವನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ನೆರವೇರಿಸಲಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ರುದ್ರ ತರಬೇತಿ ಹಾಗೂ ಸಿದ್ಧಾಂತ ಶಿಖಾಮಣಿ ಕಾರ್ಯಕ್ರಮ ನಡೆಯಲಿದೆ. ಶನಿಶ್ವೇರ ಸ್ವಾಮೀಯ 23 ಸಾವಿರ ಮಂತ್ರದಿಂದ ಯಜ್ಞವೂ ಕೂಡ ಜರುಗಲಿದೆ. ಈಗಾಗಲೇ ಶ್ರೀಮಠಕ್ಕೆ ವಿವಿಧ ಸಮಾಜದ ಸ್ವಾಮೀಜಿಗಳು ಆಗಮಿಸಿ ಶ್ರೀಮಠದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ವಾಷರ್ಿಕೋತ್ಸವ ಹಾಗೂ ಸುವಿಚಾರ ಚಿಂತನ -12ರ ಕಾರ್ಯಕ್ರಮಕ್ಕೆ ಸಹಸ್ರಾರು ಭಕ್ತಾದಿಗಳು ಭಾಗಿಯಾಗಿ ಶ್ರೀಗಳ ಆಶೀವರ್ಾದ ಪಡೆದುಕೊಳ್ಳಬೇಕೆಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರಯ್ಯ ಸವಡಿಸಾಲಿಮಠ, ವೀರುಪಾಕ್ಷಯ್ಯ ನೀರಲಿಗಿಮಠ, ಅರವಿಂದ ಜೋಶಿ, ವಿಜಯ ಶಾಸ್ತ್ರೀಗಳು, ಬಿ.ಜಿ.ಪಟ್ಟಣ್ಣಶೆಟ್ಟಿ, ರುದ್ರಪ್ಪ, ಮಂತ್ರಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.