ಹೊಸಪೇಟೆ: ನಾನು ಗೆಲ್ಲಲು ಬಂದವನಲ್ಲ ಗೆಲ್ಲಿಸಲು ಬಂದವನು: ಪ.ಯ.ಗಣೇಶ

ಲೋಕದರ್ಶನ ವರದಿ

ಹೊಸಪೇಟೆ 18: ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದವರು ಊರು ಬಿಟ್ಟರು, ಸೋತ ಪ್ರಮುಖರೂ ಊರು ಬಿಟ್ಟರು. ನಾನು ಸೋತಿದ್ದರೂ ಕೆಲಸ ಮಾಡುತ್ತಿದ್ದೇನೆ. ಯಾಕೆಂದರೆ, ನಾನು ಗೆಲ್ಲಲು ಬಂದವನಲ್ಲ, ವಿಜಯನಗರ ಕ್ಷೇತ್ರದ ಮತದಾರರನ್ನು ಗೆಲ್ಲಿಸಲು ಬಂದವನು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಿಜಯನಗರ ಉಪಚುನಾವಣೆಯಲ್ಲಿ ಕೇವಲ(?) 433 ಮತಗಳನ್ನು ಪಡೆದು ಸೋಲುಂಡ ಪ.ಯ.ಗಣೇಶ ಹೇಳಿದ ಮಾತುಗಳಿವು.

ಶನಿವಾರ ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಕನರ್ಾಟಕ ರಾಷ್ಟ್ರ ಸಮಿತಿ ಪಕ್ಷ ಮತ್ತು ಭ್ರಷ್ಟಾಚಾರ ಮುಕ್ತ ಕರ್ನಾಟಕ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭ್ರಷ್ಟಾಚಾರ ಮುಕ್ತ ಕನರ್ಾಟಕ ಸಂಘಟನೆಯ ಅಧ್ಯಕ್ಷ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಪ.ಯ. ಗಣೇಶ, ಗೆದ್ದ ಆನಂದ್ಸಿಂಗ್ ಹೊಸಪೇಟೆಗೆ ಈಗ ಅತಿಥಿ. 100 ಹಾಸಿಗೆ ಆಸ್ಪತ್ರೆಯನ್ನು 250 ಹಾಸಿಗೆ ಆಸ್ಪತ್ರೆ ಮಾಡುತ್ತೇನೆ ಅನ್ನುತ್ತಾರೆ. ಹನ್ನೊಂದೂವರೆ ವರ್ಷಗಳಿಂದ ಶಾಸಕರಾಗಿದ್ದರೂ ಈ ಆಸ್ಪತ್ರೆ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ವೈದ್ಯರು ಇಷ್ಟ ಬಂದಾಗ ಬರುತ್ತಾರೆ, ಸಾಕಾದಾಗ ಎದ್ದು ಹೋಗುತ್ತಾರೆ. ಹಣ ಪೀಕುವುದೂ ನಡೆದೇ ಇದೆ. ಈ ಸಮಸ್ಯೆಗಳನ್ನು ಸರಿ ಮಾಡದ ಆನಂದ್ಸಿಂಗ್ 250 ಹಾಸಿಗೆ ಆಸ್ಪತ್ರೆ ಮಾಡುವ ಮಾತಾಡುತ್ತಾರೆ. ಅದಕ್ಕಿಂತ ಮುಖ್ಯವಾಗಿ ಅವರ ಗುರಿಯಿರುವುದು ವಿಜಯನಗರ ಜಿಲ್ಲೆ ರಚನೆ ಕಡೆ. ಯಾಕೆಂದರೆ, ವಿಜಯನಗರ ಜಿಲ್ಲೆ ರಚನೆಯಾದರೆ, ಉಸ್ತುವಾರಿ ಸಚಿವರಾಗಲು ಸಾಧ್ಯ ಎಂಬ ಕನಸು ಅವರದ್ದು. ಇನ್ನೂ ಕಾಂಗ್ರೆಸ್ನಿಂದ ಸ್ಪಧರ್ಿಸಿದ್ದ ಸಂಡೂರಿನ ವೆಂಕಟರಾವ್ ಘೋರ್ಪಡೆ, ಜೆಡಿಎಸ್ನಿಂದ ಸ್ಪಧರ್ಿಸಿದ್ದ ಕೂಡ್ಲಿಗಿಯ ಎನ್.ಎಂ. ನಬಿ ಹೊಸಪೇಟೆಗೆ ಬರುವುದನ್ನೇ ಮರೆತಿದ್ದಾರೆ. ಅವರೆಲ್ಲರ ಉದ್ದೇಶಗಳಿದ್ದದ್ದು ತಾವು ಗೆಲ್ಲಬೇಕೆಂಬುದೇ ಹೊರತು, ವಿಜಯನಗರ ಕ್ಷೇತ್ರದ ಜನಗಳನ್ನು ಗೆಲ್ಲಿಸುವುದು ಅವರ ಉದ್ದೇಶವೇ ಆಗಿರಲಿಲ್ಲ. ಆದರೆ, ನಾವು ಗೆದ್ದರೆ ಮಾತ್ರ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಊರು ಬಿಡುವರರಲ್ಲ. ಹಾಗೆಂದೇ ಪ್ರತಿ ತಿಂಗಳು ಮೂರನೇ ಭಾನುವಾರದಂದು ಹೊಸಪೇಟೆ ನಗರದ ತಾಲೂಕು ಕ್ರೀಡಾಂಗಣ ಮೈದಾನದಲ್ಲಿ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ ಸಭೆ ನಡೆಸಲಿದ್ದೇವೆ ಎಂದರು.

ವಿಜಯನಗರ ಕ್ಷೇತ್ರ ಮತ್ತೊಮ್ಮೆ ಸಂಪನ್ನವಾಗಬೇಕಾದರೆ, ನಾವು ಏರ್ಪಡಿಸುತ್ತಿರುವ ಸಭೆಗೆ ಆಗಮಿಸಿ, ನಿಮ್ಮ ಅಹವಾಲುಗಳನ್ನು ಹೇಳಿಕೊಂಡು ಪರಿಹಾರ ಪಡೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಪಕ್ಷ ಮತ್ತು ಸಂಘಟನೆ ಪ್ರಾಮಾಣಿಕವಾಗಿ ಸ್ಪಂದಿಸಲಿದೆ ಎಂದು ಪ.ಯ.ಗಣೇಶ ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಹಾಗೂ ಭ್ರಷ್ಟಾಚಾರ ಮುಕ್ತ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟರಮಣ, ಉಪಾಧ್ಯಕ್ಷ ಟಿ.ಎಸ್. ವರುಣ್ಕುಮಾರ್, ಜಂಟಿ ಕಾರ್ಯದಶರ್ಿ ದಲ್ಲಾಳಿ ಹುಸೇನ್ ಮೌಲ, ಪ್ರಮೋದ ಉಪಸ್ಥಿತರಿದ್ದರು.