ಲೋಕದರ್ಶನ ವರದಿ
ಗದಗ 06: ಮಾನವೀಯತೇಯು ಎಲ್ಲ ಧರ್ಮಕ್ಕಿಂತ ದೊಡ್ಡದಾಗಿದೆ ಎಂದು ಡಾ. ತೋಂಟದಾರ್ಯ ಸಿದ್ದರಾಮ ಶ್ರೀಗಳು ಹೇಳಿದರು.
ಅವರು ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಅನ್ನಪೂಣೇಶ್ವರಿ ಪ್ರಸಾದ ನಿಯಲದಲ್ಲಿ 1323 ನೇ ದಿನದ ಸೇವೆಯಲ್ಲಿ ಅವಳಿ ನಗರದ ಸರ್ವ ಮುಸ್ಲಿಂ ಧರ್ಮಗುರುಗಳು ಪ್ರಸಾದವನ್ನು ತಯಾರಿಸಿ, ವಿತರಿಸುವ ವಿಶೇಷ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ, ಉತ್ತಮ ಕಾರ್ಯಗಳಿಗೆ ಭಗವಂತನೆ ಪ್ರೇರಣೆ ನೀಡಿ ಮುನ್ನೆಡೆಸುತ್ತಾನೆ. ಹಸಿದವರಿಗೆ ಅನ್ನ ನೀಡುತ್ತಿರುವ ಈ ಸೇವೆ ನಿರಂತರವಾಗಿ ನಡೆಯಲಿ.ಏನೇ ಕಷ್ಟ ಬಂದರೂ ನಿಮಗೆ ಶ್ರೀಮಠವು ನೆರವು ನೀಡಲಿದೆ. ಇಂದಿನ ಸೇವೆಯನ್ನು ಹಮ್ಮಿಕೊಂಡ ಮುಸ್ಲಿಂ ಬಾಂಧವರಿಗೂ ದೇವರು ಒಳ್ಳೆಯದನ್ನು ಮಾಡಲಿ ದೇಶದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬಾಳುತ್ತಿರುವದಕ್ಕೆ ಇದೇ ಕಾರಣವಾಗಿದೆ. ಅನ್ನಪೂಣೆಶ್ವರಿ ಪ್ರಸಾದ ನಿಲಯವು ಬಾವ್ಯಕ್ಯತೆಯ ಸ್ಥಳವಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಖ್ವಾಜಾಹುಸೇನ ಮುಧೋಳ ಅವರು ಮಾತನಾಡಿ, ದೇಶದ ಮಣ್ಣಿನಲ್ಲಿ ಅಗಾದ ಶಕ್ತಿ ಅಡಗಿದೆ. ಸಹಬಾಳ್ವೆಯಿಂದ ನಾವೇಲ್ಲರೂ ಬಾಳಬೇಕಿದೆ. ನಗರದ ಹಿಂದು ಮುಸ್ಲಿಂ ಸಮುದಾಯದವರು ಒಂದಾಗಿ ರಚಿಸಿದ ಸಮಿತಿ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಯತ ಉಲ್ಮ ಸಮಿತಿಯ ಮೌಲಾನ ಇನಾಯತ ಉಲ್ಲಾಸಾಬ ಪೀರಜಾದೆ, ಮೌಲಾನಾ ಜಾಕೀರೀಯಾಸಾಬ ಖಾಜಿ, ಮೌಲಾನಾ ಅಬ್ದುಲ್ಗಪಾರಸಾಬ ಪಲ್ಲೇದ, ಮುಪ್ತಿ ಅಬ್ದುಸ್ಸಮನಸಾಬ, ಮೌಲಾನಾ ಮಹಮ್ಮದ ಅಲಿಸಾಬ, ಮೌಲಾನಾ ಹುಸೇನಸಾಬ, ಮೌಲಾನಾ ಅಲ್ತಾಪಸಾಬ, ಹಾಪೀಜ್ ಅನ್ವರ ಹುಸೇನಸಾಬ ಮುಧೋಳ, ಹಾಪೀಜ್ ಹುಸೇನಸಾಬ ಬಾಗಲಿ, ಮೌಲಾನಾ ಶಬ್ಬಿರಸಾಬ ನದ್ವಿ, ಹಾಪೀಜ್ ಸದ್ದಾಮ್ಸಾಬ, ಹಾಪೀಜ್ ಯೂಸುಫಸಾಬ, ಹಾಪೀಜ್ ಅಬ್ದುಲ್ಸಾಬ್, ಹಾಪೀಜ್ ಇಬ್ರಾಹಿಂಸಾಬ, ಹಾಪೀಜ್ ಅಬೂಬಕರಸಾಬ, ಜನಾಬ ಹಾಜಿ ರಿಯಾಜಸಾಬ ಅತ್ತಾರ, ಜನಾಬ ಮಹಬೂಬಸಾಬ ಕನರ್ಾಚಿ ಸೇರಿದಂತೆ ಮುಂತಾದವರು ಅನ್ನಪೂಣರ್ೇಶ್ವರಿ ಪ್ರಸಾದ ನಿಲಯದಲ್ಲಿ ಪ್ರಸಾದವನ್ನು ಖುದ್ದಾಗಿ ತಯಾರಿಸಿ ವಿತರಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ನಿಲಯದ ಅಧ್ಯಕ್ಷ ಎಸ್.ಎಸ್.ಕಳಸಾಪೂರ, ವಿಜಯಮಾಹಾಂತೇಶ ಭಗವತಿ ಉಪಸ್ಥಿತರಿದ್ದರು. ಮಂಜುನಾಥ ಬಮ್ಮನಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಇಮರಾಪೂರ ವಂದಿಸಿದರು.