ವಿಶ್ವರೈತ ದಿನಾಚರಣೆ : ರೈತರೆಲ್ಲರು ಜ್ಯಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸಂಘಟಿತರಾಗಲು ಕರೆ
ವಿಜಯಪುರ 28: ಈ ದೇಶದ ಪ್ರತಿಯೊಬ್ಬರು ರೈತ ದೇಶದ ಬೆನ್ನೆಲುಬು ಎಂದು ಹೇಳಿ ತಮ್ಮ ಆಚಿಗಾಗಿ ಚುನಾವಣೆಯಂತಹ ಸಂದರ್ಭದಲ್ಲಿ ರೈತರನ ಮನೆ ಬಾಗಿಲಿಗೆ ಬಂದು ಮತಭಿಕ್ಷೆ ಪಡೆದು ರೈತರನ್ನು ಮರೆತು ಅವರನ್ನೇ ಸುಲಿಗೆ ಮಾಡುವಂತಹ ಈ ಕೆಟ್ಟ ಚಾಳಿಯನ್ನು ಬಿಟ್ಟು ಎಲ್ಲರೂ ರೈತರನ್ನು ಗೌರವಿಸಬೇಕು ಹಾಗೂ ನಿತ್ಯ ಅವನನ್ನು ಪೂಜೆಸುವಂತಾಗಬೇಕು, ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಡಿಸೆಂಬರ್ 23 ರಂದು ವಿಶ್ವ ರೈತ ದಿನವನ್ನು ಆಚರಣೆ ಮಾಡಬೇಕು ಎಂದು ರಾಜ್ಯಧ್ಯಕ್ಷರಾದ ಚೂನಪ್ಪಾ ಪೂಜೇರಿ ಹೇಳಿದರು
ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಇಂದಿನ ದಿನಮಾನಗಳಲ್ಲಿ ರೈತರಿಗಾಗುವ ಅನ್ಯಾಯ ಮೋಸದ ಬಗ್ಗೆ ಜಾಗೃತರಾಗಬೇಕು ಎಲ್ಲರೂ ಸಂಘಕ್ಕೆ ಬಂದು ಸಂಘಟಿತರಾಗಿ ಯಾವ ರೈತರಿಗೂ ಅನ್ಯಾಯ ಆಗದಂತೆ ಹೋರಾಟ ಮಾಡಬೇಕು ಎಂದರು.
ವಿಶ್ವರೈತಚೇತನ ಪ್ರೋ ಎಂ.ಡಿ.ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಪಡಸಲಗಿ ಅವರು ಮಾತನಾಡುತ್ತಾ ಈ ಜಗತ್ತು ಎಷ್ಟೇ ಮುಂದುವೆದರು ರೈತ ಬೆಳೆದ ಅನ್ನವನ್ನು ತಿನ್ನಬೇಕೆ ಹೊರತು ಹಣ ಅಲ್ಲ, ಇಲ್ಲಿ ಅನ್ನದಾತನೆ ಸಾರ್ವಭೌಮ ಎಲ್ಲರೂ ರೈತರನ್ನು ಗೌರವಿಸಿ, ಮುಂದಿನ ಪೀಳಿಗೆಗೆ ಕೃಷಿಯೇ ಮೂಲಾಧಾರ, ಎಲ್ಲರೂ ಸಂಘಟಿತರಾಗಿ ಕೃಷಿಯಲ್ಲಿ ತೊಡಗಿ ಕೃಷಿಯೊಡನೆ ಉಪಉತ್ಪನ್ನಗಳನ್ನು ತಯಾರಿಸಿ ಜೊತೆಗೆ ಸಮಗ್ರ ಕೃಷಿ ಮಾಡಿ ಆಧಾಯ ಹೊಂದಿ ಸಾಲದಿಂದ ಮುಕ್ತರಾಗಬೇಕು ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ ವಿಶ್ವದ ಸಕಲ ಜೀವರಾಶಿಗಳಿಗೆ ಅನ್ನಹಾಕುವ ರೈತ ಮಾತ್ರ ಇಲ್ಲಿ ಸರ್ಬಶ್ರೆಷ್ಠ, ಉಳಿದವರೆಲ್ಲರೂ ಕೇವಲ ರೈತನ ಹೆಸರು ಹೇಳಿ ತಮ್ಮ ಬೆಳೆ ಬೇಯಿಸಕೊಳ್ಳತ್ತಾರೆ, ಅಂತಹವರಿಂದ ದೂರಿದ್ದು, ಪ್ರಜ್ಞಾವಂತ ರೈತರಾಗಿ ಇಡೀ ದೇಶಕ್ಕೆ ಮಾದರಿ ಆಗುವಂತೆ ಹೇಳಿದರು.
ಈ ವೇಳೆ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷರಾದ ಚಂದನಗೌಡ ಮಾಲಿಪಾಟೀಲ, ಮುಖಂಡರಾದ ಕಲ್ಲನಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಮಹದೇವಪ್ಪ ತೇಲಿ, ಪ್ರಕಾಶ ತೇಲಿ, ಶಾನೂರ ನಂದರಗಿ, ನಜೀರ ನಂದರಗಿ, ಸೋಮು ಬಿರಾದಾರ, ಜಕರಾಯ ಪೂಜಾರಿ, ಸತೀಶ ಪಾಟೀಲ, ಮಹಾಂತೇಶ ಮಮದಾಪುರ, ಸುಜಾತಾ ಅವಟಿ, ಗುರುರಾಜ ಡೊಳ್ಳಿ, ಸಂಗಪ್ಪ ಟಕ್ಕೆ, ಹಾಜಿಲಾಲ ಕರ್ಜಗಿ, ಅನಮೇಶ ಜಮಖಂಡಿ, ಸುಬ್ಬಾ ಹಿಟ್ಟನಳ್ಳಿ, ಶರಣಪ್ಪ ಜಮಖಂಡಿ, ಪಾಂಡು ಜಂಬಗಿ, ಬಸ್ಸು ನ್ಯಾಮಗೊಂಡ ಸೇರಿದಂತೆ ಅನೇಕರು ಇದ್ದರು.