ಕುಕನೂರ .22: ಯಶಸ್ವಿಯಾದ ವಿಜಯ ತಿರಂಗಾ ಯಾತ್ರೆ ಭಾರತೀಯ ವೀರ ಸೇನೆಯ ಆಪರೇಷನ್ ಸಿಂಧೂರವನ್ನು ಬೆಂಬಲಿಸಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಬುಧವಾರ ಪಕ್ಷಾತೀತವಾಗಿ ಹಮ್ಮಿಕೊಂಡ ತಿರಂಗಾ ಯಾತ್ರೆಯನ್ನು ಜರುಗಿತು.ರಾಷ್ಟ್ರ ಭದ್ರತೆಗಾಗಿ ನಾಗರಿಕರು ಎಂಬ ಹೆಸರಿನಲ್ಲಿ ನಡೆದ ಈ ತಿರಂಗಾ ಯಾತ್ರೆ ಪಕ್ಷಾತೀತವಾಗಿ ನಡೆದಿದ್ದು, ರಾಷ್ಟ್ರ ಧ್ವಜ ಹಿಡಿದು ತಿರಂಗಾ ಯಾತ್ರೆಯಲ್ಲಿ ಹಲವು ನಾಗರಿಕರು, ಮಹಿಳಾ ಮೋರ್ಚಾ, ರಾಷ್ಟ್ರಾಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.ತಿರಂಗಾ ಯಾತ್ರೆಯ ಉದ್ದಕ್ಕೂ ಭಾರತೀಯ ಸೇನಾ ಪಡೆಗಳ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಲಾಯಿತು.ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳನ್ನು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಕೂಗಿ ರಾಷ್ಠ್ರಾಭಿಮಾನ ಮೆರೆದರು.ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ ಅಮಾಯಕ ಪ್ರವಾಸಿಗರನ್ನು ಕೊಂದ ಉಗ್ರರಿಗೆ ದೇಶದ ಸೈನಿಕರು ತಕ್ಕ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಪ್ರಪಂಚಕ್ಕೆ ಸಂದೇಶವನ್ನು ನೀಡಿದ್ದಾರೆ,
ಭಾರತ ಮಾತೆಯ ಸಿಂಧೂರವನ್ನು ಮುಟ್ಟಲು ಬಂದ್ರೆ ಪಾಕ್ ಉಳಿಯುವುದಿಲ್ಲ ಎಂದು ಭಾರತದ ಸೈನಿಕರು ತೋರಿಸಿಕೊಟ್ಟಿದ್ದಾರೆ. ಪೆಹಲ್ಗಾಮ್ನಲ್ಲಿ ಕುಂಕುಮ ಕಳೆದು ಕೊಂಡಿರುವ ಸಹೋದರಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಲು ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ನಮ್ಮ ದೇಶದ ಸಿಂಧು ನದಿಯ ನೀರು ಕುಡಿದು ನಮಗೆ ದ್ರೋಹ ಮಾಡುವ ಕೆಲಸ ಪಾಕ್ ಮಾಡಿದೆ. ನಮ್ಮ ದೇಶದ ಅನ್ನ ತಿಂದು ನಮಗೆ ದ್ರೋಹ ಮಾಡುತ್ತಿದ್ದಾರೆ. ನಮ್ಮ ಹೊರಗಿನ ಮತ್ತು ಒಳಗಿನ ಶತ್ರುಗಳ ಜೊತೆ ಹೋರಾಟ ಮಾಡಬೇಕಿದೆ ಎಂದರು.
ಮಾಜಿ ಸೈನಿಕ ರು ಮಾತನಾಡಿ, ಪೆಹೆಲ್ಗಾಮ್ ನಲ್ಲಿ 26 ಜನರನ್ನು ಕೊಂದು ಉಗ್ರರಿಗೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿ ಇಡೀ ಪ್ರಪಂಚಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ದೇಶದ ಅಖಂಡತೆ ಮತ್ತು ಭದ್ರತೆಗೆ ಧಕ್ಕೆ ಉಂಟಾದಾಗ ನಮ್ಮ ಸೈನಿಕರು ಎದೆಯೋಡ್ಡಿ ದೇಶವನ್ನು ಕಾಯುತ್ತಾರೆ. ಅವರಿಗೆ ಗೌರವ ಸಲ್ಲಿಸಲು ಯಾತ್ರೆ ಆಯೋಜಿಸಲಾಗಿದೆ. ಪಾಕಿಸ್ತಾನದ ಭಯೋತ್ಪಾದಕರು ದೇಶದ ಅಮಾಯಕ ಪ್ರಜೆಗಳ ಮೇಲೆ ದಾಳಿ ಮಾಡಿದ್ದಾರೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಪ್ರಧಾನಿ ದೇಶದ ಯೋಧರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ದೇಶದ ಯೋಧರಿಗೆ ರೈತರಿಗೆ ಏನೇ ತೊಂದರೆಯಾದರೂ ಸಹಿಸುವುದಿಲ್ಲ. ಅನ್ಯ ದೇಶಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿವೆ. ದೇಶದ ಸೈನಿಕರ ಶಕ್ತಿಯ ಮುಂದೆ ಯಾವ ಶಕ್ತಿಯು ನಡೆಯುವುದಿಲ್ಲ ಎಂದು ಗುಡುಗಿದರು.