ಬ್ಯಾಡಗಿ: ಪ್ರತಿಯೊಬ್ಬರೂ ಸಾಕ್ಷರರಾಗುವ ಮೂಲಕ ಆದರ್ಶ ರಾಷ್ಟ್ರ ಕಟ್ಟಲು ಅನಕ್ಷರಸ್ಥರು ಮುಂದೆ ಬರಬೇಕು ಎಂದು ಸ್ಥಳೀಯ ವಾಲ್ಮೀಕಿ ನಗರದ ಸಾಕ್ಷರತಾ ಕೇಂದ್ರದಲ್ಲಿ ಕೊಳೆಚೆ ಪ್ರದೇಶದ ಅನಕ್ಷರಸ್ಥರಿಗೆ 2ನೇ ಹಂತದ ಬೋಧಕರ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಲೋಕಶಿಕ್ಷಣ ಸಮಿತಿಯ ಸಹಾಯಕ ಚಂದ್ರಕಾಂತ ಕುಸನೂರ ಹೇಳಿದರು.
ಕೊಳಚೆ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಅನಕ್ಷರತೆ ತಾಂಡವಾಡುತ್ತಲಿದೆ. ಸರಕಾರ ಅಕ್ಷರ ಕಲಿಕೆಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಲಿದೆ. ಬೋದಕರು ಅನಕ್ಷರಸ್ಥರನ್ನು ಗುತರ್ಿಸಿ ಅವರನ್ನು ಸಾಕ್ಷರ ಕೇಂದ್ರಗಳತ್ತ ಕರೆ ತರುವ ಮೂಲಕವಾಗಿ ಅವರಿಗೆ ಅಕ್ಷರ ಕಲಿಸಿದಾಗ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯವಾಗಲಿದೆ ಎಂದರು.
ಎಂ.ಎಫ್.ಕರಿಯಣ್ಣನವರ ಮಾತನಾಡಿ ಅನಕ್ಷರಸ್ಥರ ಸಕ್ರಿಯ ಪಾಲ್ಗೊಳುವಿಕೆ ಹಾಗೂ ಪರಸ್ಪರ ಚಚರ್ೆಯಿಂದಾಗಿ ಅಕ್ಷರ ಕಲಿಕೆಯು ಸುಲಭವಾಗಲಿದ್ದು ಈ ದಿಶೆಯಲ್ಲಿ ಬೋದಕರು ತಮ್ಮ ವಿಷಯಾನುಸಾರ ಜ್ಞಾನರ್ಜನೆಯಲ್ಲಿ ತೊಡಗಿಸಿಕೊಂಡು ಅನಕ್ಷರಸ್ಥರಿಗೆ ಉತ್ತಮ ಶಿಕ್ಷಣ ನೀಡಬೇಕು.
ಅನಕ್ಷರಸ್ಥರಿಗೆ ತಮ್ಮ ಭವಿಷ್ಯದ ಉಜ್ವಲ ಜೀವನಕ್ಕೆ ಬೇಕಾಗಿರುವಂತಹ ಪಾಠಗಳನ್ನು ತಿಳಿಸಬೇಕು. ದುರ್ಬಲ ವರ್ಗದ ಅನಕ್ಷರಸ್ಥರಿಗೆ ಶಿಕ್ಷಣವನ್ನು ಒದಗಿಸುವ ದಿಶೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಅನೇಕ ಸೌಲಭ್ಯಗಳನ್ನು ಒದಗಿಸಿವೆ. ಈ ಸೌಲಭ್ಯಗಳನ್ನು ಅನಕ್ಷರಸ್ಥರು ಸದುಪಯೋಗ ಪಡಿಸಿಕೊಂಡು ಅಕ್ಷರರಾಗಬೇಕೆಂದರು.
ಕಾರ್ಯಕ್ರಮವನ್ನು ಪುರಸಭೆ ಮ್ಯಾನೇಜರ್ ಎಲ್ ಶಂಕರ ಉದ್ಘಾಟಿಸಿದರು. ವೇದಿಕೆಯಲ್ಲಿ ಸುರೇಶ ಪೂಜಾರ, ಮಂಜುಳಾ, ರೇಖಾ, ಕೇಶವ ಕುರುಕುಂದಿ ಉಪಸ್ಥಿತರಿದ್ದರು. ತಾಲೂಕಾ ಸಾಕ್ಷರ ಸಂಯೋಜಕ ಎಂ.ಎಸ್.ದಂಡಗಿ ಸ್ವಾಗತಿಸಿ ವಂದಿಸಿದರು.