ಧಾರವಾಡದ 30: ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ 2024- 25 ನೇ ಸಾಲಿನ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಜನತಾ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನಾದಳದಲ್ಲಿ ಸೇವೆ ಸಲ್ಲಿಸಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ನಾಗರಾಜ್ ಗವಳಿ ಅವರು ಆಗಮಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ರೇಣು ಪಾಟೀಲ್ ಹಾಗೂ ಸಹ ಸಂಯೋಜಕರಾದ ನಿರ್ಮಲಾ ಪಾಟೀಲ್, ಕಮಲಾಕ್ಷಿ ಸಣ್ಣಕ್ಕಿ ಮತ್ತು ಸಾವಿತ್ರಿ ಗತಾಡೆ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಅತಿಥಿಗಳಾದ ನಾಗರಾರಿ ಗವಳಿ ಅವರು ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಎಲ್ಲಾ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿ ವಿದ್ಯಾರ್ಥಿಗಳಿಗೆ ನಿರತರಾಗಿ ಜೀವನದಲ್ಲಿ ಸದಾ ಚೈತನ್ಯವನ್ನು ಹೊಂದಲು ಕರೆ ನೀಡಿದರು. ವಿದ್ಯಾರ್ಥಿಗಳಿಂದ ಸದನವಾರು ಪಥ ಸಂಚಲನ ನೆರವೇರಿತು. ಶಾಲೆಯ ವಿದ್ಯಾರ್ಥಿಗಳು ಡಂಬೆಲ್ಸ್, ಕಾಟಿ ಮತ್ತು ಲೈಜಿಮ್ ಪ್ರದರ್ಶನ ಮಾಡುವ ಮೂಲಕ ಎಲ್ಲರ ಕಣ್ಮನ ಸೆಳೆದರು. ನಂತರ ಅತಿಥಿಗಳು ತಮ್ಮ ಭಾಷಣದಲ್ಲಿ ಕ್ರೀಡೆಗಳ ಮಹತ್ವವನ್ನು ಕುರಿತು ಹೇಳುತ್ತಾ ವಿದ್ಯಾರ್ಥಿಗಳು ಜೀವನ ಪಯಂರ್ತ ಸರ್ವತೋಮುಖ ಬೆಳವಣಿಗೆಯನ್ನು ಹೊಂದುತ್ತಾರೆ ಆದ್ದರಿಂದ ಕ್ರೀಡೆಗಳು ಜೀವನದಲ್ಲಿ ಮನುಷ್ಯನನ್ನು ಸದಾ ಚೈತನ್ಯ ಮತ್ತು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತವೆ ಆದ್ದರಿಂದ ಕ್ರೀಡಾಪಟುಗಳು ಇಡೀ ಜಗತ್ತನ್ನೇ ಸರಳವಾಗಿ ಪರ್ಯಟನೆ ಮಾಡಬಹುದು ಎಂದು ಕ್ರೀಡೆಗಳ ಮಹತ್ವವನ್ನು ಹೇಳಿದರು.
ವಿದ್ಯಾರ್ಥಿ ಅಯಾನ್ ಅತಿಥಿಗಳನ್ನು ಪರಿಚಯಿಸಿದನು. ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ದಿಶಾ ಹಾಗೂ ಬಿಲಾಲ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಸಿದರು.