ಸ್ಯಾಂಟಿಯಾಗೋ, ಅ 26: ದೇಶದಲ್ಲಿ ಆಮೂಲಾಗ್ರ ಆಥರ್ಿಕ ಸುಧಾರಣೆ ಮತ್ತು ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೇರಾ ಹುದ್ದೆಗೆ ರಾಜೀನಾಮೆಗೆ ಆಗ್ರಹಿಸಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಚಿಲಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಂಕಾಂಗ್ ನಲ್ಲಿ ಸತತ ಮೂರು ತಿಂಗಳ ಕಾಲ ಲಕ್ಷಾಂತರ ಜನರು ಬೀದಿಗಿಳಿದು ನಡೆಸಿದ ಪ್ರತಿಭಟನೆ ವಿಶ್ವದ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗಲೇ ಇತ್ತ ಕಡೆ ಚಿಲಿಯಲ್ಲಿ ಲಕ್ಷಾಂತರ ಮಂದಿ ಕಳೆದ ಒಂದು ವಾರದಿಂದ ತಮ್ಮ ಬೇಡಿಕೆ ಈಡೇರಿಸಬೇಕೆಂದು ಸ್ಥಳೀಯ ಮತ್ತು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಿಂದ ದೇಶದಲ್ಲಿನ ಸಾಮಾಜಿಕ ಆಥರ್ಿಕ ಬೆಳವಣಿಗೆ ಅಯೋಮಯವಾಗಿದೆ. ಇದರ ಪರಿಣಾಮವಾಗಿ ಸಕರ್ಾರಿ ನೌಕರರು ಮತ್ತು ನಿವೃತ್ತ ನೌಕರರು ಕಡಿಮೆ ಸಂಬಳ, ಕಡಿಮೆ ಪಿಂಚಣಿ ಪಡೆಯುವಂತಹ ದಾರುಣ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಆರೋಗ್ಯ ಮತ್ತು ಶಿಕ್ಷಣ ಸೇವೆ ಜನರ ಕೈಗೆ ಎಟುಕದಂತಾಗಿದೆ. ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಿರುವುದು ಜನರ ಆಕ್ರೋಶಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.