ನವದೆಹಲಿ, ಜೂನ್ 7, ದೇಶದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕಳದೆ 24 ಗಂಟೆಯಲ್ಲಿ 9971ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿ, 287 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಸ್ಪೇನ್ ಮೀರಿಸಿ ಐದನೇ ಸ್ಥಾನಕ್ಕೆ ಏರಿಕೆಯಾಗಿದೆ.ಸೋಂಕಿತರ ಸಂಖ್ಯೆ ಕಳೆದ ನಾಲ್ಕು ದಿನದಿಂದ ಸತತವಾಗಿ ಏರಿಕೆಯಾಗುತ್ತಲೆ ಇದೆ. ಇದುವರೆಗೆ ದೇಶದಲ್ಲಿ 1,19,293 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ದೆಹಲಿ ಮುಂಬೈ, ಕೋಲ್ಕತ್ತಾ, ಮತ್ತು ಚೆನ್ನೈ ನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಕೊರೊನಾ ಕೇಸ್ ಗಳು ಪತ್ತೆಯಾಗಿರುವುದು ಈ 4 ನಗರಗಳಲ್ಲಿ ಕರೋನ ಸೋಂಕಿತರ ಸಂಖ್ಯೆಯಲ್ಲಿ ಭಾರತ ಸ್ಪೇನ್ನ ಸಂಖ್ಯೆಯನ್ನು ಮೀರಿಸಿ ಐದನೇ ಸ್ಥಾನಕ್ಕೆ ಏರಿಕೆಯಾಗಿದೆ.