ಭಾರತೀಯ ಸೇನೆಯ ಅಭೂತಪೂರ್ವ ಕಾರ್ಯಾಚರಣೆ ಶ್ಲಾಘನೀಯ: ಬಿ ಬಿ ಅಸೂಟಿ

Indian Army's unprecedented operation is commendable: B.B. Asuti

ಗದಗ 10:-  : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿರುವುದು ಭಾರತೀಯ ಸೈನೆಯ ಅಭೂತಪೂರ್ವ ಕಾರ್ಯಾಚರಣೆ ಶ್ಲಾಘನೀಯವಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ  ಅಧ್ಯಕ್ಷರಾದ ಬಿ ಬಿ ಅಸೂಟಿ ಯವರು ಭಾರತೀಯ ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಭಾರತದ ಕೀರೀಟ ಪ್ರಾಯವಾದ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿನ ಘಟನೆಯಲ್ಲಿ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ಮತ್ತು ಆಂತರಿಕವಾಗಿ ಉಗ್ರವಾದಕ್ಕೆ ಬೆನ್ನೆಲುಬು ಆಗಿರುವ ಪಾಕಿಸ್ತಾನಕ್ಕೆ , ಉಗ್ರರ ನೆಲೆಗಳನ್ನು ನಾಶಪಡಿಸುವ ಮೂಲಕ ಹಾಗೂ ದೇಶದ ನಾಗರಿಕರ ಹಾಗೂ ಮುಗ್ದ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡಿ 26 ಜನ ನಾಗರಿಕರನ್ನು ಹತ್ಯೆಗೈದ ಉಗ್ರರಿಗೆ . ?ಆಪರೇಷನ್ ಸಿಂಧೂರ’ ದಾಳಿಯ ಮೂಲಕ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಭಾರತೀಯರಿಗೆ ನೆಮ್ಮದಿಯನ್ನು ದೊರಕಿಸಿದ ಭಾರತೀಯ ಸೈನಿಕರೆಲ್ಲರೂ ಹೃದಯ ಪೂರ್ವಕ ಅಭಿನಂದನೆಗಳು ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ನಾಗರಿಕರ ಸಾವು ನೋವು ತಪ್ಪಿಸಿದ್ದಾರೆ. ಪಾಕಿಸ್ತಾನ ಇಲ್ಲಿಗೆ ತನ್ನ ಕೆಟ್ಟ ಚಾಳಿಯನ್ನು ಕೈಬಿಟ್ಟರೆ ಒಳ್ಳೆಯದು. ಇಲ್ಲವಾದರೆ ಇದು ಇನ್ನೂ ಆರಂಭ, ಇಡೀ ಜಗತ್ತೇ ತಿರುಗಿ ನೋಡುವಂತೆ ಅಂತ್ಯ ಇನ್ನು ಘೋರವಾಗಿರುತ್ತದೆ. ಪಾಕಿಸ್ತಾನದ ದೇಶದೊಳಗೆ ನುಗ್ಗಿ, ಉಗ್ರರರನ್ನು ಸೆದೆಬಡಿದಿರುವ ಭಾರತೀಯ ಸೈನಿಕರ ಶಕ್ತಿಯನ್ನು ಅನೇಕ ರಾಷ್ಟ್ರಗಳು ಕೊಂಡಾಡುತ್ತಿದ್ದಾರೆ.

ಭಯೋತ್ಪಾದಕತೆಯನ್ನು ಮಟ್ಟ ಹಾಕಲು ಪಣತೊಟ್ಟಿರುವ ಭಾರತೀಯ ಸೈನಿಕರಿಗೆ ಪಕ್ಷಾತೀತವಾಗಿ ಯಾವುದೇ ಪಕ್ಷ -ಭೇಧವಿಲ್ಲದೇ ದೇಶದ ಸಮಸ್ತ ನಾಗರಿಕರು ಸೈನಿಕರ ಬೆಂಬಲಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರು ಪತ್ರಿಕಾ ಪ್ರಕಟಣೆಯ ಮೂಲಕ ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ.